ನಿಮ್ಮ ಹಳದಿ ಹಲ್ಲುಗಳನ್ನು ಬಿಳಿಯಾಗಿಸಲು ಹೀಗೆ ಮಾಡಿ!

ಜನರಿಂದ ನಿಮ್ಮನ್ನು ದೂರವಿಡುವಂತೆ ಈ ಹಲ್ಲುಗಳು ಮಾಡುವುದರಿಂದ ಕೆಲವೊಂದು ಸೂಕ್ತ ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳಲೇಬೇಕು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಹಲ್ಲಿನ ಆರೋಗ್ಯವನ್ನು ಪಾಲನೆ ಮಾಡುವುದು ಹಲ್ಲಿಗೆ ಉತ್ತಮವಾಗಿದೆ.

#ಅಡುಗೆ ಸೋಡಾ: ಹಲ್ಲುಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ (Baking soda) ಅತ್ಯುತ್ತಮ ಮನೆಮದ್ದು. ಹಲ್ಲುಗಳನ್ನು ಸರಿಯಾಗಿ ಶುಚಿಗೊಳಿಸುವುದರ ಜೊತೆಗೆ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದಲ್ಲದೆ, ಇದರ ಬಳಕೆಯು ನಿಮ್ಮ ಬಾಯಿಯಿಂದ ಬರುವ ವಾಸನೆಯನ್ನು ಸಹ ತೆಗೆದುಹಾಕುತ್ತದೆ. ಅಡಿಗೆ ಸೋಡಾದಲ್ಲಿ ಸ್ವಲ್ಪ ನೀರು ಮತ್ತು ಉಪ್ಪನ್ನು ಮಿಶ್ರಣ ಮಾಡಿ. ನಂತರ ಅದನ್ನು ಟೂತ್ ಪೇಸ್ಟ್ ನಂತೆ ಬಳಸಿ. ಹಲ್ಲುಗಳ ಸುತ್ತಲೂ ಹಲ್ಲುಜ್ಜುವ ಬ್ರಷ್ ಅನ್ನು ನಿಧಾನವಾಗಿ ಸರಿಸಿ. ತುಂಬಾ ವೇಗವಾಗಿ ಹಲ್ಲುಜ್ಜುವುದು ಒಸಡುಗಳಿಗೆ ಹಾನಿ ಮಾಡುತ್ತದೆ.

#ಎಣ್ಣೆಯಿಂದ ತೊಳೆಯುವುದು: ರೋಗಕಾರಕಗಳು ಬಾಯಿಗೆ ಬರದಂತೆ ನೋಡಿಕೊಳ್ಳಲು ಇದು ಪ್ರಾಚೀನ ಭಾರತೀಯ ವಿಧಾನವಾಗಿದೆ. ಇದಕ್ಕಾಗಿ, ನಿಮ್ಮ ಬಾಯಿ ಮತ್ತು ಹಲ್ಲುಗಳಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ನೀವು 15-20 ನಿಮಿಷಗಳ ಕಾಲ ಒಂದು ಚಮಚ ಎಣ್ಣೆಯಿಂದ ಬಾಯಿಯನ್ನು ತೊಳೆಯಬೇಕು. ಮೆಡಿಕಲ್ ನ್ಯೂಸ್ ಟುಡೆ ವರದಿ ಮಾಡಿರುವ ಪ್ರಕಾರ, ಎಣ್ಣೆಯ ಬಳಕೆಯಿಂದ ಹಲ್ಲುಗಳನ್ನು ಬಿಳುಪಾಗುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಅದು ಹಲ್ಲುಗಳ ಮೇಲ್ಮೈಯಲ್ಲಿರುವ ಕಲೆಗಳನ್ನು ತೆಗೆದುಹಾಕುತ್ತದೆ ಎಂಬುದಕ್ಕೆ ಪುರಾವೆಗಳಿವೆ.

#ಹಸಿತರಕಾರಿಗಳು ಮತ್ತು ಹಣ್ಣುಗಳುಫೈಬರ್ ಅಂಶವನ್ನು ಒಳಗೊಂಡಿರುವ ಹಸಿತರಕಾರಿಗಳು ಮತ್ತು ಹಣ್ಣುಗಳ ಸೇವನೆಯನ್ನು ಮಾಡಿ. ಇವುಗಳನ್ನು ಸೇವಿಸುವುದೂ ಕೂಡ ಹಲ್ಲಿನ ಹಳದಿ ಕರೆಯನ್ನು ದೂರಮಾಡಲು ಸಹಕಾರಿಯಾಗಿದೆ.ಹಲ್ಲಿನ ಹಳದಿ ಕಲೆ ನಿವಾರಣೆಗೆ ಎಳ್ಳಿನ ಬೀಜ ಅತ್ಯುತ್ತಮವಾದುದು. ಎಳ್ಳನ್ನು ಕೊಂಚ ಬಿರುಸಾಗಿ ಹುಡಿಮಾಡಿಟ್ಟುಕೊಳ್ಳಿ. ನಂತರ ಈ ಹುಡಿಯನ್ನು ಬಳಸಿ ಹಲ್ಲುಜ್ಜಿ. ನಿಮ್ಮ ಹಲ್ಲಿನಿಂದ ಕರೆ ಮಾಯವಾಗಿ ಫಳಫಳನೆ ಹೊಳೆಯುತ್ತದೆ.

#ಸ್ಟ್ರಾಬೆರಿ ಹಣ್ಣುಗಳಿಂದ ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಿಕೊಳ್ಳುವುದು ಬಹಳ ಸುಲಭವಾಗಿದೆ. ಇದಕ್ಕಾಗಿ ನೀವು ಒಂದು ಅಥವಾ ಎರಡು ಸ್ಟ್ರಾಬೆರಿ ಹಣ್ಣುಗಳನ್ನು ಬಳಕೆ ಮಾಡಿಕೊಳ್ಳಬಹುದು. ಸ್ಟ್ರಾಬೆರಿ ಹಣ್ಣುಗಳನ್ನು ನೀವು ಮೊದಲು ಚೆನ್ನಾಗಿ ಜಜ್ಜಿ ಅವುಗಳಿಂದ ರಸ ತೆಗೆದು ಅದನ್ನು ನಿಮ್ಮ ಹಲ್ಲುಗಳ ಮೇಲೆ ಮೂರು ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿ ಆನಂತರದಲ್ಲಿ ನೀವು ನೀರಿನಿಂದ ಬಾಯಿ ಮುಕ್ಕಳಿಸಿ ಸಾಧಾರಣವಾಗಿ ಟೂತ್ ಪೇಸ್ಟ್ ನಿಂದ ಹಲ್ಲುಜ್ಜಬಹುದು.ಇದರಲ್ಲಿ ನೈಸರ್ಗಿಕವಾದ ಮ್ಯಾಲಿಕ್ ಆಮ್ಲ ಇರುವುದರಿಂದ ಇದು ಸಾಕಷ್ಟು ಪ್ರಯೋಜನಕಾರಿ ಯಾಗಿದೆ. ಜೊತೆಗೆ ನಾರಿನ ಅಂಶ ಕೂಡ ಇರುವುದರಿಂದ ಇದು ನಿಮ್ಮ ಹಲ್ಲುಗಳು ಮತ್ತು ವಸಡು ಗಳಿಗೆ ಆರೋಗ್ಯಕರವಾಗಿ ಪರಿಣಮಿಸಿ ನಿಮ್ಮ ಹಲ್ಲು ಮತ್ತು ಬಾಯಿಯ ದುರ್ಗಂಧವನ್ನು ದೂರ ಮಾಡುತ್ತದೆ.

#ನಿಂಬೆಹಣ್ಣು: ನಿಂಬೆಹಣ್ಣು ಹಲ್ಲು ಬೆಳ್ಳಗಾಗಲು ಸಹಕಾರಿ. ನಿಂಬು ಸಿಪ್ಪೆಯಿಂದ ಹಲ್ಲುಜ್ಜಬೇಕು. ಅಥವಾ ನಿಂಬೆ ರಸವನ್ನು ನೀರಿನೊಂದಿಗೆ ಬೆರಸಿ ಬಾಯಿ ಮುಕ್ಕಳಿಸುತ್ತ ಬಂದರೆ ಹಲ್ಲಿನ ಹಳದಿ ಬಣ್ಣ ತೊಲಗಿ ಬಿಳಿಯ ಬಣ್ಣಕ್ಕೆ ತಿರುಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group