ಐಸ್‍ಕ್ಯೂಬ್ ಪೇಶಿಯಲ್ ಮುಖದ ತ್ವಚೆಗೆ !

ನಮ್ಮಲ್ಲಿ ಬಹುತೇಕ ಮಂದಿ ಸ್ಕಿನ್ ಕೇರ್ ಉತ್ಪನ್ನಗಳಿಗಾಗಿ ಹುಡುಕಾಡುತ್ತೇವೆ. ಆದರೆ ನಮ್ಮ ಮನೆಯಲ್ಲಿಯೇ ದೊರೆಯುವ ಐಸ್‍ಕ್ಯೂಬ್‍ನಂತಹ ಪೇಶಿಯಲ್‍ಗಳನ್ನು ನಾವು ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಇದರ ಮೂಲಕ ನೀವು ತಕ್ಷಣ ನಿಮ್ಮ ಮುಖಕ್ಕೆ ಹೊಳಪನ್ನು ನೀಡಬಹುದು. ಏಕೆಂದರೆ ಐಸ್‍ಕ್ಯೂಬ್ ಪೇಶಿಯಲ್ ಮುಖದ ತ್ವಚೆಗೆ ಅಗತ್ಯವಾದ ರಕ್ತ ಸಂಚಾರವನ್ನು ಒದಗಿಸುತ್ತದೆ. ಐಸ್‍ಕ್ಯೂಬ್‍ಗಳ ಸಹಾಯದಿಂದ ನೀವು ವಯಸ್ಸಾದಂತೆ ಕಾಣುವುದನ್ನು ಸಹ ತಡೆಯಬಹುದು. ಎಲ್ಲರಿಗು ತಿಳಿದಂತೆ ಐಸ್‍ಕ್ಯೂಬ್ ಖರ್ಚಿಲ್ಲದೆ ಅಡುಗೆ ಮನೆಯಲ್ಲಿಯೇ ದೊರೆಯುತ್ತದೆ. ಆದರೆ ಅಡುಗೆ ಮನೆಗೆ ಓಡುವ ಮೊದಲು ಐಸ್‍ಕ್ಯೂಬನ್ನು ಹೇಗೆ ಫೇಶಿಯಲ್ ಆಗಿ ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಮೊದಲು ಒಂದು ಪೇಪರ್ ಟಿಶ್ಯೂವನ್ನು ತೆಗೆದುಕೊಳ್ಳಿ.
#ಮೊಡವೆಗಳಿಗೆ ಚಿಕಿತ್ಸೆ ಈ ಮಸಾಜ್ ಮಾಡುವುದರಿಂದ ನೀವು ತ್ವಚೆಯ ಮೇಲೆ ಇರುವ ರಂಧ್ರಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಐಸ್ ಕ್ಯೂಬ್ ಪೇಶಿಯಲ್ ಮೊಡವೆಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ನಿಮ್ಮ ತ್ವಚೆಯಲ್ಲಿರುವ ಕಲೆಗಳನ್ನು ಇಲ್ಲದಂತೆ ಮಾಡುತ್ತವೆ. ಯಾರು ತಮ್ಮ ಮುಖದಲ್ಲಿರುವ ಎಲ್ಲಾ ಮೊಡವೆ ಮತ್ತು ಕಲೆಗಳನ್ನು ನಿವಾರಿಸಿಕೊಳ್ಳಲು ಬಯಸುತ್ತಾರೋ, ಅವರು ಈ ವಿಧಾನದಿಂದ ಒಳ್ಳೆಯ ಫಲಿತಾಂಶವನ್ನು ಕಾಣಬಹುದು.
# ದಪ್ಪ ಕೂದಲಿನ ಸಾಕುಪ್ರಾಣಿಗಳು ಬೇಸಿಗೆಯಲ್ಲಿ ಸಾಕಷ್ಟು ಶಾಖವನ್ನು ಪಡೆಯುತ್ತವೆ. ಅವರ ನೀರಿನ ಬೌಲ್ಗೆ ಕೆಲವು ಐಸ್ ಕ್ಯೂಬ್ಗಳನ್ನು ಸೇರಿಸಿದರೆ, ಅವು ನೀರನ್ನು ಕುಡಿದು ನಿರಾಳವಾಗುತ್ತವೆ.
#ಕೆಲವರಿಗೆ ಕಣ್ಣುಗಳ ಕೆಳಗಿನ ಭಾಗದ ಚರ್ಮ ಬಹಳ ತೆಳ್ಳಗಿರುತ್ತದೆ. ಅಂತಹವರಿಗೆ ಕಣ್ಣುಗಳ ಕೆಳಗೆ ಚರ್ಮ ಒಡೆದುಕೊಳ್ಳುವುದು ಹೆಚ್ಚು. ಇಂತಹವರು ವ್ಯಾಕ್ಸ್ ಮಾಡಿಸಿದಾಗ ಅಥವಾ ಐಬ್ರೋ ಮಾಡಿಸಿದ ಸಂದರ್ಭದಲ್ಲಿ ಕೆಲ ನಿಮಿಷಗಳ ಕಾಲ ಸುದೀರ್ಘವಾಗಿ ಐಸ್ ಕ್ಯೂಬ್ ಗಳಿಂದ ಮಸಾಜ್ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.
#ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆನಿಮ್ಮ ಮುಖದ ಮೇಲೆ ಕಾಣಿಸಿಕೊಳ್ಳುವ ಸುಕ್ಕುಗಳನ್ನು ಐಸ್‌ಕ್ಯೂಬ್‍ಗಳಿಂದ ಕಡಿಮೆ ಮಾಡಿಕೊಳ್ಳಬಹುದು. ಐಸ್ ಕ್ಯೂಬ್ ಫೇಶಿಯಲ್‍ನಿಂದ ನಿಮ್ಮ ಮುಖದ ಭಾಗಕ್ಕೆ ರಕ್ತ ಸಂಚಾರ ಅಧಿಕವಾಗುತ್ತದೆ. ಇದರಿಂದ ನಿಮ್ಮ ಮುಖದ ಹೊಳಪು ಹೆಚ್ಚುತ್ತದೆ. ಆಗ ನಿಮ್ಮ ಮುಖ ಕಳೆಯಿಂದ ನಳನಳಿಸುತ್ತದೆ. ಹಾಗಾಗಿ ಐಸ್ ಕ್ಯೂಬ್ ಫೇಶಿಯಲನ್ನು ತಪ್ಪದೆ ಮಾಡಿ.
#ಬೇಸಿಗೆಕಾಲ ಬೇರೆ ಮನೆಯಲ್ಲಿ ತುಂಬಾ ಸೆಕೆ ಆಗುತ್ತಿರುತ್ತದೆ ಫ್ಯಾನ್ ಮುಂದೆ ನೀವು ಐಸ್ ಕ್ಯೂಬ್ ಗಳನ್ನು ಇಟ್ಟರೆ ನಿಮಗೆ ಒಳ್ಳೆಯ ಗಾಳಿ ಬರುತ್ತದೆ ನಂತರ ಬಾಟಲಿ ಒಳಗಡೆ ಯಾವುದಾದರೂ ಕೊಳೆಗಳು ಸೇರಿಕೊಂಡಿದ್ದಾರ ಅದಕ್ಕೆ ಸ್ವಲ್ಪ ಐಸ್ ಕ್ಯೂಬ್ ಮತ್ತು ನೀರನ್ನು ಹಾಕಿ ವಾಶ್ ಮಾಡಿದರ ಬಾಟಲ್ ಪಳಪಳನೆ ಕಾಣುತ್ತದೆ .