ಅಂಜೂರ ಹಣ್ಣಿನ ಹಲವು ಪ್ರಯೋಜನಗಳು!

ಅಂಜೂರ ಹಣ್ಣು ಸಕ್ಕರೆ, ಕರಗುವ ಫೈಬರ್ ಮತ್ತು ಬಹಳಷ್ಟು ಖನಿಜಾಂಶಗಳನ್ನು ಒಳಗೊಂಡಿದೆ. ತಾಜಾ ಮತ್ತು ಒಣ ಅಂಜೂರ ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. ಅಲ್ಲದೆ ಪೊಟ್ಯಾಸಿಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ತಾಮ್ರ, ವಿಟಮಿನ್ ಎ ಮತ್ತು ವಿಟಮಿನ್ ಎಲ್ ನಂತಹ ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳ ಪವರ್‌ಹೌಸ್ ಆಗಿದೆ.

#ಅಂಜೂರದ ಎಲೆ ಮಧುಮೇಹಿಗಳಿಗೆ ಸಾಕಷ್ಟು ಹಿತಕಾರಿ. ಅಂಜೂರದ ಎಲೆಗಳಲ್ಲಿ ಡಯಾಬಿಟಿಸ್ ಕಂಟ್ರೋಲ್ (diabetes control) ಮಾಡುವ ಗುಣವಿದೆ. ಮಧುಮೇಹಿಗಳು ಅಂಜೂರ ಹಾಕಿದ ಎಲೆಯ ಚಹ ಕುಡಿಯಬಹುದು.

#ಅಧಿಕ ರಕ್ತದೊತ್ತಡ:ಹೈ ಬಿಪಿ ಇರುವವರಿಗೆ ಅಂಜೂರ ತುಂಬಾ ಒಳ್ಳೆಯದು. ಅಂಜೂರದಲ್ಲಿ ಪ್ಲೆವನಾಯ್ಡ್ ಮತ್ತು ಪೊಟ್ಯಾಶಿಯಂ ಭರ್ಜರಿಯಾಗಿರುತ್ತದೆ. ಇದು ಬಿಪಿ ನಿಯಂತ್ರಣದಲ್ಲಿಡುತ್ತದೆ.

#ಮೂಲವ್ಯಾದಿಯಿಂದ ಬಳಲುವವರು ಮೂರು ಅಂಜೂರ ಹಣ್ಣುಗಳನ್ನು ರಾತ್ರಿ ಹೂತ್ತ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗ ಎದ್ದ ಕೂಡಲೇ ಆ ಹಣ್ಣುಗಳನ್ನು ತಿಂದು ನೀರು ಕುಡಿಯಬೇಕು.

#ಸ್ನಾಯುಗಳ ನಿಶ್ಯಕ್ತಿಯನ್ನೂ ಹೋಗಲಾಡಿಸುವ ಸಾಮರ್ಥ್ಯ ಈ ಹಣ್ಣಿಗಿದೆ. ದೂರ ಪ್ರಯಾಣ ಮಾಡುವವರಿಗಿ ಇದು ಉಪಯುಕ್ತ.

#ಈ ಅಂಜೂರ ಹಣ್ಣಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೇರಳವಾಗಿರುವುದರಿಂದ ಇದನ್ನು ತಿನ್ನುವುದರಿಂದ ನಮ್ಮ ಮೂಳೆಗಳು ಕೂಡ ಗಟ್ಟಿಮುಟ್ಟಾಗಿರಲು ಸಹಕರಿಸುತ್ತದೆ ಮತ್ತು ನಿಮ್ಮ ದೇಹ ನಿಶ್ಯಕ್ತಿಯಿಂದ ಕೂಡಿದರೆ ಯಾವುದೇ ಒಂದು ಕೆಲಸ ಮಾಡಿದರು ಕೂಡ ಆಯಸ ಆಗುತ್ತಿದ್ದರೆ ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ ಹಾಗೂ ನೀವು ದಿನವಿಡಿ ಆಕ್ಟಿವ್ ಆಗಿರಲು ಕೂಡ ಸಹಕರಿಸುತ್ತದೆ.

#ಅಂಜೂರ ವಿಶೇಷವಾಗಿ ತಾಮ್ರ ಮತ್ತು ವಿಟಮಿನ್ ಬಿ 6 ನಲ್ಲಿ ಸಮೃದ್ಧವಾಗಿವೆ. ತಾಮ್ರವು ಒಂದು ಪ್ರಮುಖ ಖನಿಜವಾಗಿದ್ದು, ಇದು ಚಯಾಪಚಯ ಮತ್ತು ಶಕ್ತಿ ಉತ್ಪಾದನೆ ಸೇರಿದಂತೆ ಹಲವಾರು ದೈಹಿಕ ಪ್ರಕ್ರಿಯೆಗಳಲ್ಲಿ ಅವಶ್ಯಕವಾಗಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group