ರೋಸ್ ವಾಟರ್ ಬಳಸುವುದರ ಪ್ರಯೋಜನ!

ರೋಸ್ ವಾಟರ್ ಅನ್ನು ಕೇವಲ ಬ್ಯೂಟಿ ಹೆಚ್ಚಿಸಲು ಮಾತ್ರ ಬಳಸಲಾಗುತ್ತದೆ ಎಂದು ಏಮಾರಬೇಡಿ . ಅದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ . ದೇಹದ ಚರ್ಮದ ಕಾಂತಿ ಹೆಚ್ಚಿಸುವುದರಿಂದ ಹಿಡಿದು ಚರ್ಮದ ಮೇಲಿನ ಮಚ್ಚೆ ತೆಗೆಯುವವರೆಗೂ ಇದರ ಉಪಯೋಗ ಬಹಳ . ಸೆನ್ಸಿಟಿವ್ ಸ್ಕಿನ್ ಹೊಂದಿರುವವರಿಗೆ ಇದರ ಪ್ರಯೋಜನ ಬಹಳ ಲಾಭಕಾರಿ . ಏಕೆಂದರೆ ಇದು ನೈಸರ್ಗಿಕ ವಿಧಾನದಿಂದ ತಯಾರಾದ ಒಂದು ಒಳ್ಳೆಯ ದ್ರವ . ಇದು ಅತ್ಯಂತ ಸುರಕ್ಷಿತ ಮತ್ತು ಸರಳ ವಿಧಾನ . ಆದ್ದರಿಂದ ರೋಸ್ ವಾಟರ್ ನ ವಿಷಯದಲ್ಲಿ ಯಾವುದೇ ಅನುಮಾನ ಬೇಡ . ಹೇಗೆ ? ಬನ್ನಿ ನೋಡೋಣ .

#1ಚಮಚ ರೋಸ್ ವಾಟರ್‍ಗೆ ನಿಂಬೆ ರಸ ಮಿಕ್ಸ್ ಮಾಡಿ ಮಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತಂಪಾದ ನೀರಿನಿಂದ ತೊಳೆಯಬೇಕು. ಇದರಿಂದ ಮೊಡವೆ ಕಡಿಮೆಯಾಗುತ್ತವೆ. ಹಗೂ ಅವುಗಳ ಕಲೆಯೂ ಉಳಿಯುವುದಿಲ್ಲ.

#ಚರ್ಮವನ್ನು ಗುಣಪಡಿಸುತ್ತದೆ : ರೋಸ್ ವಾಟರ್ ಚರ್ಮದ ಸೌಂದರ್ಯ ಹೆಚ್ಚಿಸಲು ಮಾತ್ರ ಬಳಕೆಯಾಗುವುದಿಲ್ಲ, ಚರ್ಮದ ಮೇಲಿನ ಕಪ್ಪು ಮತ್ತು ಬಿಳಿ ಕಲೆಗಳನ್ನು ನಿವಾರಣೆ ಮಾಡಲು, ಮತ್ತು ಮೊಡವೆಗಳನ್ನು ತೊಡೆದು ಹಾಕಲು ಬಳಕೆಯಾಗುತ್ತದೆ. ಯಾಕಂದ್ರೆ ಇದ್ರಲ್ಲಿ ಹೆಚ್ಚು ಹೈಡ್ರೇಟಿಂಗ್ ಅಂಶಗಳು ಇದ್ದು, ಚರ್ಮದ ಸುಕ್ಕುಗಳನ್ನು ನಿವಾರಣೆ ಮಾಡುತ್ತದೆ.

#ತುಟಿಗೆ ರೋಸ್‌ ವಾಟರ್ ಹಚ್ಚಿದರೆ ತುಟಿ ಮೃದುವಾಗುವುದು ಹಾಗೂ ನೋಡಲು ಆಕರ್ಷಕವಾಗಿ ಕಾಣುವುದು.

#ಒಣಚರ್ಮಕ್ಕಾಗಿ ಓಟ್ ಮೀಲ್, ಜೇನುತುಪ್ಪ ಮತ್ತು ಹಾಲಿನೊಂದಿಗೆ ರೋಸ್ ವಾಟರ್ ಅನ್ನು ಬೆರೆಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಿದ ಬಳಿಕ ತೆಗೆಯಿರಿ. ಇದು ನಿಮ್ಮ ಚರ್ಮಕ್ಕೆ ತೇವಾಂಶವನ್ನು ನೀಡುವುದು ಮಾತ್ರವಲ್ಲದೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

#ಮುಖ್ಯವಾಗಿ ರೋಸ್‌ ವಾಟರ್‌ ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.ಈ ಗುಣಗಳಿರುವ ಕಾರಣದಿಂದಲೇ ಗಾಯಗಳಿಗೆ ವೇಗವಾಗಿ ಚಿಕಿತ್ಸೆ ನೀಡುತ್ತದೆ.

#ರಿಲ್ಯಾಕ್ಸ್ ಗಾಗಿ ರೋಸ್ ವಾಟರ್: ಬಿಸಿ ನೀರಿಗೆ ರೋಸ್ ವಾಟರ್ ಹಾಕಿ ಕಾಯಿಸಿ ಅದರಿಂದ ಬರೋ ಪರಿಮಳ ಮನಸ್ಸನ್ನು ಶಾಂತಗೊಳಿಸುತ್ತೆ. ಅದೇ ನೀರಿನಲ್ಲಿ ಸ್ನಾನ ಮಾಡಿದರೆ ದೇಹಕ್ಕೆ ರಿಲ್ಯಾಕ್ಸ್ ಆಗುತ್ತೆ. ಒಮ್ಮೆ ಟ್ರೈ ಮಾಡಿ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group