ನಾಟಿ ಕೋಳಿ ಮೊಟ್ಟೆ ಉಪಯೋಗ!

ನಾಟಿ ಕೋಳಿ ಮೊಟ್ಟೆ ಸ್ವಲ್ಪ ಕಂದು ಬಣ್ಣದಲ್ಲಿದ್ದು , ಅಧಿಕ ಪ್ರೊಟೀನ್ ಇದೆ. ಫಾರಂ ಕೋಳಿ ಮೊಟ್ಟೆಗಿಂತ ನಾಟಿ ಕೋಳಿ ಮೊಟ್ಟೆಗೆ ರುಚಿ ಹೆಚ್ಚು

ದಿನಕ್ಕೊಂದು ಕೋಳಿ ಮೊಟ್ಟೆ ತಿಂದರೆ ಪೌಷ್ಟಿಕಾಂಶಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಹೇಳುತ್ತಾರೆ. ಏಕೆಂದರೆ ಕೋಳಿ ಮೊಟ್ಟೆಯಲ್ಲಿ ಸಿಗುವಷ್ಟು ಪೌಷ್ಟಿಕ ಸತ್ವಗಳು ಹಲವಾರು ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇರಿಸಿದರೂ ಸಿಗುವುದಿಲ್ಲ.ಬಹಳಷ್ಟು ಜನರಿಗೆ ಇಂದಿಗೂ ಸಹ ಬೆಳಗಿನ ಉಪಹಾರದ ಸಮಯದಲ್ಲಿ ಕೋಳಿ ಮೊಟ್ಟೆಗಳು ಎಂದರೆ ಅಚ್ಚುಮೆಚ್ಚು. ಇನ್ನು ಇದರಿಂದ ತಯಾರು ಮಾಡಿದ ಆಮ್ಲೆಟ್ ನಿಜಕ್ಕೂ ಬಾಯಿಯಲ್ಲಿ ನೀರೂರಿಸುತ್ತದೆ.

#ತರಕಾರಿಗಳ ಜೊತೆ ಸವಿಯಿರಿ : -ಕೋಳಿ ಮೊಟ್ಟೆಗಳಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಸಿಗುತ್ತದೆ ಎಂಬುದು ನಿಮಗೆ ಗೊತ್ತು. ಬಗೆಬಗೆಯ ತರಕಾರಿಗಳು ಸಹ ಇದಕ್ಕಿಂತ ಕಡಿಮೆ ಏನಿಲ್ಲ. ಹಾಗಾಗಿ ಕೋಳಿ ಮೊಟ್ಟೆಗಳನ್ನು ಬೇಯಿಸಿ ತಿನ್ನುವ ವಿಧಾನದಲ್ಲಿ ತರಕಾರಿಗಳನ್ನು ಸಹ ಜೊತೆ ಸೇರಿಸಿಕೊಳ್ಳಿ. ಇದರಿಂದ ಅತ್ಯಧಿಕ ನಾರಿನ ಅಂಶ ಮತ್ತು ವಿಟಮಿನ್ ಅಂಶ ನಿಮಗೆ ಸಿಗಲಿದೆ.

#ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು:ಹೌದು, ಮೊಟ್ಟೆಗಳು ಕೊಲೆಸ್ಟ್ರಾಲ್ ಮತ್ತು ಕೊಬ್ಬಿನಿಂದ ಸಮೃದ್ಧವಾಗಿವೆ. ಹಾಗಾಗಿ ಹೃದ್ರೋಗದಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಮೊಟ್ಟೆ ಸೇವಿಸಬಾರದು ಎಂದು ಭಾವಿಸುತ್ತಾರೆ. ಆದಾಗ್ಯೂ, ಆಹಾರದಲ್ಲಿ ಇರುವ ಕೊಲೆಸ್ಟ್ರಾಲ್ ರಕ್ತದಲ್ಲಿ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದಿಲ್ಲ ಎಂದು ನೆನಪಿಡಿ. ಆದರೆ ಮಿತವಾಗಿ ಸೇವಿಸುವುದನ್ನು ಮರೆಯಬಾರದು.ಮೊಟ್ಟೆಗಳು ಉತ್ತಮ ಕೊಲೆಸ್ಟ್ರಾಲ್ ಅಥವಾ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (ಎಚ್‌ಡಿಎಲ್) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

#ದೃಷ್ಟಿ ಸುಧಾರಿಸಲು ಸಹಾಯ:ಮೊಟ್ಟೆಯ ಹಳದಿ ಲೋಳೆಯು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್‌ಗಳಲ್ಲಿ ಸಮೃದ್ಧವಾಗಿದೆ. ಈ ಉತ್ಕರ್ಷಣ ನಿರೋಧಕಗಳು ಕಣ್ಣುಗಳ ರೆಟಿನಾದಲ್ಲಿ ಸೇರಿಕೊಳ್ಳುತ್ತವೆ. ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಸೇರಿದಂತೆ ಕೆಲವು ಕಣ್ಣಿನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಈ ಎರಡು ಉತ್ಕರ್ಷಣ ನಿರೋಧಕಗಳು ರಕ್ಷಣಾತ್ಮಕ ಪಾತ್ರವನ್ನು ವಹಿಸುತ್ತವೆ. ಮೊಟ್ಟೆಯಲ್ಲಿ ವಿಟಮಿನ್ ಎ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಅಧಿಕವಾಗಿದ್ದು, ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

#ಬೇಯಿಸಿದ ಮೊಟ್ಟೆಯಲ್ಲಿರುವ ವಿಟಮಿನ್ ಡಿ ಹಾಗೂ ಇತರ ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಉಗುರುಗಳ ಉತ್ತಮ ಬೆಳವಣಿಗೆ ಹಾಗೂ ಆರೋಗ್ಯಕರವಾಗಿರಲು ನೆರವಾಗುತ್ತವೆ

ಗಮನಿಸಿ: ಕೂದಲು ಉದುರುವಿಕೆ ಹಸಿ ಮೊಟ್ಟೆಗಳು ನಿಮ್ಮ ದೇಹದಲ್ಲಿ ಬಯೋಟಿನ್ ಕೊರತೆಗೆ ಕಾರಣವಾಗುತ್ತದೆ. ಇದರಿಂದ ಅತಿಯಾದ ಕೂದಲು ಉದುರುವಿಕೆಗೆ ಸಮಸ್ಯೆ ಎದುರಾಗಬಹುದು . ಇದೇ ವೇಳೆ ಕೆಲವು ಜನರು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಅನುಭವಿಸಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group