ನಿಮ್ಮ ಹೃದಯ ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಕರ್ಜೂರ ಸೇವಿಸಿ!

ಖರ್ಜೂರಗಳು ಪೌಷ್ಟಿಕಾಂಶದಿಂದ ತುಂಬಿರುತ್ತವೆ, ವಿಶೇಷವಾಗಿ ಒಣ ಖರ್ಜೂರಗಳು. ಒಣ ಖರ್ಜೂರದಲ್ಲಿ ಹೆಚ್ಚಿನ ಕ್ಯಾಲೋರಿಗಳು ವಿಶೇಷವಾಗಿ ಕಾರ್ಬೋಹೈಡ್ರೇಟ್‌ಗಳು ಇರುತ್ತದೆ. ಇದು ಫೈಬರ್ ಹಾಗೂ ಹಲವಾರು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಸಹ ಒಳಗೊಂಡಿದೆ. ಖರ್ಜೂರವು ಉತ್ಕರ್ಷಣ ನಿರೋಧಕಗಳ ಸಮೃದ್ಧ ಸಾಂದ್ರತೆಗೆ ಹೆಸರುವಾಸಿಯಾಗಿದೆ, ಇದು ನಿಮ್ಮ ಹೃದಯ ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ, ಖರ್ಜೂರವು ದೇಹಕ್ಕೆ ಮಾಡುವ ಹೆಚ್ಚಿನ ಪ್ರಯೋಜನಗಳ ಬಗ್ಗೆ ಈಗ ತಿಳಿಯೋಣ.
#ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ:ಖರ್ಜೂರ ರಕ್ತದಲ್ಲಿನ ಸಕ್ಕರೆ ಮಟ್ಟ(Sugar Content)ವನ್ನು ನಿಯಂತ್ರಣದಲ್ಲಿಡುತ್ತದೆ. ಖರ್ಜೂರಗಳಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ಇರುತ್ತದೆ.
#ಕಣ್ಣಿನ ಆರೋಗ್ಯಕ್ಕೆ:ಈ ಹಣ್ಣು ಕಣ್ಣಿನ ಆರೋಗ್ಯ ಹೆಚ್ಚಿಸುವ ವಿಟಮಿನ್ ಝೀಕ್ಸಾಥಿನ್ ಮತ್ತು ಲುಟೆಯಿನ್‍ಗಳನ್ನು ಒಳಗೊಂಡಿದೆ. ಈ ಎರಡು ವಿಟಮಿನ್‍ಗಳು ಕಣ್ಣಿನ ಮಕ್ಯುಲರ್ ಮತ್ತು ರೆಟಿನಲ್‍ನ ಆರೋಗ್ಯವನ್ನು ಕಾಪಾಡುತ್ತವೆ. ಅಲ್ಲದೆ ಅಕ್ಷಿಪಟಲಕ್ಕೆ ಉಂಟಾಗುವ ತೊಂದರೆಗಳನ್ನು ನಿಯಂತ್ರಿಸುತ್ತದೆ.
#ಖರ್ಜೂರಗಳು ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುವುದರಿಂದ ಅವುಗಳನ್ನು ಡಯಾಬಿಟಿಸ್ ಇರುವ ಜನರೂ ಸಹ ಸೇವಿಸಬಹುದು. ಇದರಲ್ಲಿರುವ ಫೈಟೊಕೆಮಿಕಲ್ಸ್ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನದಲ್ಲಿ ಖರ್ಜೂರ ಯಾವಾಗ ತಿನ್ನಬೇಕು ಎಂಬುದನ್ನೂ ಸಹ ಪೌಷ್ಟಿಕ ತಜ್ಞರು ಹೇಳಿದ್ದಾರೆ
#ಮಲಬದ್ಧತೆ ನಿಲ್ಲುತ್ತದೆ:ಪ್ರತಿದಿನ ಮಲಗುವ ಮುನ್ನ ಮೂರು ಖರ್ಜೂರವನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಯಿಡಿ. ಬೆಳಗಾಗುವವರೆಗೆ ಅದು ತನ್ನ ರಸವನ್ನು ವಿರೇಚಕವಾಗಿ ಬಿಡುಗಡೆ ಮಾಡಿರುತ್ತದೆ. ಈ ನೀರಿನ ಮಿಶ್ರಣವನ್ನು ಕುಡಿದರೆ ಕರುಳಿನನ ಕಾರ್ಯನಿರ್ವಹಣೆಯು ಸರಾಗವಾಗುತ್ತದೆ. ಜೊತೆಗೆ ಮಲಬದ್ಧತೆಯು ಕಡಿಮೆಯಾಗುತ್ತದೆ.
#ನಾರಿನಾಂಶ ಹೆಚ್ಚಾಗಿರುವ ಖರ್ಜೂರಗಳು ಹೊಟ್ಟೆ ಹಸಿವನ್ನು ನೀಗಿಸುತ್ತವೆ ಎಂದು ಹೇಳುತ್ತಾರೆ. ಹಾಗಾಗಿ ರಾತ್ರಿಯ ಮಲಗಿಕೊಳ್ಳುವ ಸಂದರ್ಭದಲ್ಲಿ ಇವುಗಳನ್ನು ಸೇವನೆ ಮಾಡಿ ಮಲಗಿಕೊಳ್ಳುವುದರಿಂದ ಇಡೀ ರಾತ್ರಿ ಹೊಟ್ಟೆ ಹಸಿವು ಅತ್ಯುತ್ತಮವಾಗಿ ಬೆಳಗಿನವರೆಗೆ ನಿಯಂತ್ರಣವಾಗುತ್ತದೆ.