ಅಣಬೆಯನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು!

ಅಡುಗೆಗೆ ರುಚಿ ಹೆಚ್ಚು ಬರಲೆಂದು ಅಣಬೆಯನ್ನು ಉಪಯೋಗಿಸುವವರು ಅಧಿಕ ಜನ ಇದ್ದಾರೆ. ಆದರೆ ಅಣಬೆಗಳು ಬರೀ ರುಚಿ, ಪರಿಮಳ ವರ್ಧಕಗಳಷ್ಟೇ ಅಲ್ಲ, ಅದಕ್ಕೂ ಮೀರಿದ ಆರೋಗ್ಯಕರ ಉಪಯೋಗಗಳು ಹಲವು ಇವೆ.
ನಾಯಿಕೊಡೆ ಎಂದೂ ಕರೆಯಲ್ಪಡುವ ಅಣಬೆಯನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ ಬನ್ನಿ!!
#ಜೀವಸತ್ವಗಳು ಮತ್ತು ಖನಿಜಗಳು:ಅಣಬೆಗಳು ಸೂಕ್ಷ್ಮ ಪೋಷಕಾಂಶಗಳಿಂದ ತುಂಬಿರುತ್ತವೆ. ಅವು ತಾಮ್ರ, ಪೊಟ್ಯಾಸಿಯಮ್, ರಂಜಕ ಮತ್ತು ಕಬ್ಬಿಣದ ಉತ್ತಮ ಮೂಲವಾಗಿದೆ. ತಾಮ್ರವು ಶಕ್ತಿ ಉತ್ಪಾದನೆ ಮತ್ತು ಕಬ್ಬಿಣದ ಬಳಕೆಯಲ್ಲಿ ಸಹಾಯ ಮಾಡುತ್ತದೆ. ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಪೊಟ್ಯಾಸಿಯಮ್ ಮುಖ್ಯವಾಗಿದೆ.
#ಕ್ಯಾನ್ಸರ್ ತಡೆಗಟ್ಟಲು ಸಹಾಯ:ಅಣಬೆಗಳು ಉತ್ಕರ್ಷಣ ನಿರೋಧಕಗಳು ಮತ್ತು ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳನ್ನು ಹೊಂದಿವೆ. ನಮ್ಮ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಈ ಪೋಷಕಾಂಶಗಳು ಅಗತ್ಯವಾಗಿವೆ ಮತ್ತು ಗೆಡ್ಡೆಯ ರಚನೆಯನ್ನು ತಡೆಯಬಹುದು. ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಪ್ರಕಾರ ಶ್ವಾಸಕೋಶ, ಸ್ತನ, ಪ್ರಾಸ್ಟೇಟ್ ಮತ್ತು ಇತರ ರೀತಿಯ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ಇದು ಸಹಾಯ ಮಾಡುತ್ತದೆ.
#ಬೊಜ್ಜು ತಡೆಯಲು:ಅಣಬೆಯಲ್ಲಿರುವ ಎರಿಥ್ರೋಡೆನಿನ್ ಮತ್ತು ಬೀಟಾ-ಗ್ಲುಕಾನ್ಗಳು ಹೈಪೋಲಿಪಿಡೆಮಿಕ್ ಗುಣಗಳನ್ನು ಹೊಂದಿದ್ದು, ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಬೀಟಾ-ಗ್ಲುಕನ್‌ಗಳು ಹೊಟ್ಟೆ ತುಂಬಿದಂತೆ ಮಾಡುತ್ತದೆ ಮತ್ತು ನೀವು ಕಡಿಮೆ ತಿನ್ನುವಂತೆ ಮಾಡುತ್ತದೆ. ಆ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.
#ರಕ್ತಹೀನತೆ: ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿಯೆಂದರೆ ಅಣಬೆ. ಅಷ್ಟೇ ಅಲ್ಲ, ಅಣಬೆಯಲ್ಲಿ ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ, ರಕ್ತಹೀನತೆ ನಿವಾರಿಸುವ ಕಬ್ಬಿಣಾಂಶ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುವ ಪೊಟಾಶಿಯಂ ಪೂರಕವಾಗಿದೆ.
#ಮಶ್ರೂಮ್ ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನಕಾರಿ. ಅಣಬೆಗಳಲ್ಲಿ ಸಕ್ಕರೆ ಇರೋದಿಲ್ಲ. ಇದು ದೇಹದಲ್ಲಿ ಇನ್ಸುಲಿನ್ ಸಮತೋಲನದಲ್ಲಿಡಲು ಸಹಾಯ ಮಾಡುತ್ತೆ. ಆದುದರಿಂದ ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಮಶ್ರೂಮ್ ಸೇರಿಸಿದ್ರೆ ಉತ್ತಮ.