ಕರಬೂಜ ಹಣ್ಣಿನ ಈ ಆರೋಗ್ಯ ಪ್ರಯೋಜನ ತಿಳಿಯಿರಿ!

ಇದರಲ್ಲಿ ಕರಗುವ ನಾರು, ಬೀಟಾ ಕ್ಯಾರೋಟೀನ್, ಪೊಟ್ಯಾಶಿಯಂ, ಕಬ್ಬಿಣ, ಮ್ಯಾಂಗನೀಸ್, ಫೋಲಿಕ್ ಆಮ್ಲ, ವಿಟಮಿನ್ ಎ, ಸಿ ಹಾಗೂ ಇತರ ಪ್ರಮುಖ ಪೋಷಕಾಂಶಗಳಿವೆ. ಈ ಕರಬೂಜ ಹಣ್ಣು ರುಚಿಕರ ಮಾತ್ರವಲ್ಲ, ಇದರ ವಿಶಿಷ್ಟ ಪರಿಮಳವೂ ಎಲ್ಲರ ಮನ ಸೆಳೆಯುತ್ತದೆ ಹಾಗೂ ಈ ಹಣ್ಣನ್ನು ಅಡುಗೆಯಲ್ಲಿ ಬಳಸಿದಾಗಲೂ ಈ ಪರಿಮಳ ಆಹಾರದಿಂದ ಹೊಮ್ಮುತ್ತಾ ಆಹಾರವನ್ನು ಇನ್ನಷ್ಟು ರುಚಿಕರವಾಗಿಸುತ್ತವೆ. ಇದರ ಅಪಾರ ಪ್ರಯೋಜನಗಳಲ್ಲಿ ಪ್ರಮುಖವಾದ ಪ್ರಯೋಜನಗಳು

#ಮಧುಮೇಹದ ರೋಗಿಗಳು:ಆಗಾಗ್ಗೆ ಹಸಿವು ಎಂದು ಗೊಣಗುತ್ತಿರುತ್ತಾರೆ. ಏಕೆಂದರೆ ಅವರಲ್ಲಿ ಪಥ್ಯದ ಪರಿಣಾಮವಾಗಿ ಸಕ್ಕರೆಯ ಮಟ್ಟ ಮತ್ತು ಶಕ್ತಿಯ ಮಟ್ಟವು ಸಹ ಕುಸಿದಿರುತ್ತದೆ. ಕರ್ಬೂಜ ಹಣ್ಣಿನ ರಸವು ಇಂತಹವರಿಗೆ ಒಳ್ಳೆಯ ಪೂರಕ ಆಹಾರವಾಗಿರುತ್ತದೆ. ಪರಿಣಿತರು ಮಧುಮೇಹಿಗಳಿಗೆ ಸ್ವಲ್ಪ ಕಹಿಯಾದ ಕರ್ಬೂಜ ಹಣ್ಣಿನ ರಸವನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ಏಕೆಂದರೆ ಇದು ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

#ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ:ಮಸ್ಕ್ ಮೆಲನ್‍ನಲ್ಲಿರುವ ಡಯೆಟರಿ ಫೈಬರ್ ಮತ್ತು ನೀರಿನಾಂಶ ಅಜೀರ್ಣ, ಮಲಬದ್ಧತೆ ಮತ್ತು ಇತರೆ ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳಿಂದ ಬಳಲುತ್ತಿರುವವರಿಗೆ ನೈಸರ್ಗಿಕ ವೈದ್ಯನಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ನಾರಿನಾಂಶ ಕರುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ತಂಪಾಗಿಸುತ್ತದೆ.

#ಕರಬೂಜವು ಮಲಬದ್ಧತೆಯಿಂದ ರಕ್ಷಿಸುತ್ತದೆಈ ಹಣ್ಣು ಮಲಬದ್ಧತೆಯಿಂದ ರಕ್ಷಿಸುತ್ತದೆ. ನೀರಿನಾಂಶ ಇರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಿ ಮಲಬದ್ಧತೆಯಿಂದ ನಮ್ಮನ್ನು ಕಾಪಾಡುತ್ತೆ.

#ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:ಒಂದು ಕಪ್ ಕರಬೂಜ ಹಣ್ಣಿನಲ್ಲಿ ಸುಮಾರು 57 ಮಿಲಿಗ್ರಾಮ್‍ನಷ್ಟು ವಿಟಮಿನ್ ಸಿ ಸತ್ವ ಅಡಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ನಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಷೀರಿಯಾಗಳು ದೇಹದ ಸರಿಯಾದ ಕಾರ್ಯ ನಿರ್ವಹಣೆ ಸಹಾಯ ಮಾಡುತ್ತದೆ.

#ಕರ್ಬೂಜ ಹಣ್ಣಿನಲ್ಲಿ ಮೂತ್ರವರ್ಧಕ ಏಜೆಂಟ್ ಇದ್ದು, ಇದು ಮನುಷ್ಯನ ದೇಹದಿಂದ ವಿಷಕಾರಿ ಅಂಶಗಳನ್ನು ಮತ್ತು ಅವಶ್ಯವಿಲ್ಲದ ಹೆಚ್ಚಿನ ನೀರಿನ ಅಂಶವನ್ನು ಹೊರ ಹಾಕುತ್ತದೆ. ಇದರಿಂದ ಮೂತ್ರ ಪಿಂಡದ ಸಮಸ್ಯೆಗಳು ದೂರಾಗಿ ಕಿಡ್ನಿಗಳು ಆರೋಗ್ಯವಾಗಿ ಕೆಲಸ ಮಾಡಲು ಸಹಾಯಕವಾಗುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ನಾವು ಸೇವಿಸಿದ ಆಹಾರ ಪದಾರ್ಥಗಳು ಸರಿಯಾಗಿ ಪರಿಷ್ಕರಣೆ ಆಗದೆ ಮೂತ್ರ ಪಿಂಡಗಳಲ್ಲಿ ಘನಾಕಾರ ಪಡೆದುಕೊಂಡು ಮೂತ್ರ ಪಿಂಡದ ಕಲ್ಲುಗಳಾಗಿ ಮಾರ್ಪಾಡಾಗುತ್ತವೆ. ಇದರಿಂದಲೂ ಸಹ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಆದರೆ ಕರ್ಬುಜ ಹಣ್ಣುಗಳ ನಿಯಮಿತ ಸೇವನೆಯಿಂದ ಇಂತಹ ಪ್ರಕರಣಗಳು ತೀರಾ ಕಡಿಮೆಯಾಗುತ್ತವೆ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group