ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುವ ಕರ್ಪೂರ!

ಪ್ರತಿದಿನ ಪೂಜೆಗೆ ನಾವು ಕರ್ಪೂರ ಬಳಸುತ್ತೇವೆ. ಅದರೆ ಈ ಕರ್ಪೂರವು ಪೂಜೆಗೆ ಮಾತ್ರವಲ್ಲ ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಹಳ ಜನರಿಗೆ ತಿಳಿದಿಲ್ಲ. ಜಪಾನ್‌, ಇಂಡೊನೇಷ್ಯಾ, ಏಷ್ಯಾ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಂಡುಬರುವ ಕ್ಯಾಂಪರ್‌ ಲಾರೆಲ್‌ ಎಂಬ ಮರದ ತೊಗಟೆಯಿಂದ ಕರ್ಪೂರವನ್ನು ತಯಾರಿಸಲಾಗುತ್ತದೆ.

#ಕರ್ಪೂರದ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ತುರಿಕೆ, ಕಿರಿಕಿರಿಯಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರ್ಪೂರವು ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಕರ್ಪೂರದ ಮೇಲೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.

#ಒಡೆದ ಹಿಮ್ಮಡಿಗಳಿಗೆ ಪರಿಹಾರ. ಕರ್ಪೂರವು, ಒಡೆದ ಹಿಮ್ಮಡಿಗಳನ್ನೂ ಮೃದುಗೊಳಿಸಬಲ್ಲದು. ಕರ್ಪೂರ ದ್ರಾವಣದಲ್ಲಿ ನಿಮ್ಮ ಪಾದಗಳನ್ನು ನೆನೆಸಿ. ನಿಮ್ಮ ಪಾದಗಳನ್ನು ಸ್ಕ್ರಬ್ ಮಾಡಿ ಮತ್ತು ಮಾಯಿಶ್ಚರೈಸರ್ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಅನ್ವಯಿಸಿ. ಈ ರೀತಿ 4-5 ಬಾರಿ ಮಾಡಿದರೆ ನೀವೇ ಬದಲಾವಣೆಯನ್ನು ಗಮನಿಸಬಹುದು.

#ಅಜೀರ್ಣಕ್ಕೆ ರಾಮಬಾಣ: ಗ್ಯಾಸ್ ಸಮಸ್ಯೆಯಿರುವವರು ತಿನ್ನಲು ಯೋಗ್ಯವಾದ ಕರ್ಪೂರ ಅಂದ್ರೆ ಪಚ್ಚೆ ಕರ್ಪೂರ ಸೇವಿಸಿದರೆ ಒಳ್ಳೆಯದು. ಇದು ದೇಹದಲ್ಲಿ ಗ್ಯಾಸ್ ತುಂಬಿಕೊಳ್ಳದಂತೆ ಕಾಪಾಡುತ್ತದೆ. ಮಾತ್ರವಲ್ಲ ಆಹಾರ ಪಚನಕ್ರಿಯೆ ಚುರುಕುಗೊಳ್ಳುವಂತೆ ಮಾಡುತ್ತದೆ .

#ಕೂದಲಿಗೆ ಪ್ರಯೋಜನ:ಅನೇಕ ಸಂಶೋಧನೆಗಳ ಪ್ರಕಾರ, ಕರ್ಪೂರವನ್ನು ಕೂದಲಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಲು, ಕೂದಲನ್ನು ಬಲಪಡಿಸಲು ಮತ್ತು ತಲೆಹೊಟ್ಟಿಗೆ ಚಿಕಿತ್ಸೆ ನೀಡಲು ಕರ್ಪೂರವನ್ನು ಬಳಸಬಹುದು. ಈ ಮನೆ ಮದ್ದಿಗಾಗಿ, ತೆಂಗಿನ ಎಣ್ಣೆಯೊಂದಿಗೆ ಕರ್ಪೂರ ಬೆರೆಸಿ. ಈ ಮಿಶ್ರಣದಿಂದ ನೆತ್ತಿಗೆ ಮಸಾಜ್ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗಿ, ಕೂದಲನ್ನು ಬಲಪಡಿಸುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group