ಹೊಟ್ಟೆ ಉರಿ ಸಮಸ್ಯೆಗೆ ಮನೆಮದ್ದು!

ಜೀರಿಗೆ ನೀರು: ಪ್ರತಿದಿನ ಬೆಳಿಗ್ಗೆ 1 ಕಪ್ ಜೀರಿಗೆ (Cumin Water) ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಖಾಲಿ ಹೊಟ್ಟೆಗೆ ಜೀರಿಗೆ ನೀರು ಸೇವಿಸಿದರೆ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರ ನಂಜುನಿರೋಧಕ ಗುಣಗಳು ಬ್ಯಾಕ್ಟೀರಿಯಾವನ್ನು ನಿವಾರಿಸಿ ಕರುಳಿಗೆ ಹಾನಿಯಾಗುವುದನ್ನು ತಡೆಯುತ್ತದೆ.
#ಜ್ಯೂಸ್ ಮತ್ತು ಸೂಪ್ ತಯಾರಿಸಿ ಕುಡಿದರೆ ಒಳ್ಳೆಯದು. ಅದರಲ್ಲಿ ಬಾಳೆ ಹಣ್ಣಿನ ಜ್ಯೂಸ್, ಕಲ್ಲಂಗಡಿ ಜ್ಯೂಸ್, ಜೀರಿಗೆ ನೀರು ಕುಡಿಯುವುದು ಒಳ್ಳೆಯದು.
#ತಣ್ಣನೆಯ ಹಾಲು:ಆ್ಯಸಿಡ್ ರಿಫ್ಲಕ್ಸ್ ಅನ್ನು ನಿವಾರಿಸಲು ತಣ್ಣನೆಯ ಹಾಲನ್ನು ಕುಡಿಯುವುದು ಅತ್ಯಂತ ಸಾಮಾನ್ಯವಾದ ಮನೆಮದ್ದು, ಇದು ಜನರಿಗೆ ಬಳಸಲು ಸುಲಭವಾಗಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಹೈಡ್ರೋಕ್ಲೋರಿಕ್ ಆಮ್ಲದ ಹೆಚ್ಚುವರಿ ಸ್ರವಿಸುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತನ್ಮೂಲಕ ಹೊಟ್ಟೆಯಲ್ಲಿರುವ ಆಮ್ಲಗಳನ್ನು ಕಡಿಮೆ ಮಾಡುತ್ತದೆ. ಹಾಲಿನಲ್ಲಿರುವ ಹೆಚ್ಚಿನ ಕ್ಯಾಲ್ಸಿಯಂ ಅಂಶವು ಆ್ಯಸಿಡ್ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ಈಗಾಗಲೇ ರಚಿಸಲಾದ ಆಮ್ಲವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಲು ತಂಪಾಗಿರುವ ಕಾರಣ ಇದು ಸುಡುವ ಸಂವೇದನೆಯಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.
#ಒಟ್ಟಾರೆ ಜೀರ್ಣಕಾರಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಲೋವೆರಾ ಜ್ಯೂಸ್ ಸಹಾಯ ಮಾಡುತ್ತದೆ. ಅಜೀರ್ಣ ಸಮಸ್ಯೆಗಳನ್ನು ಸುಲಭವಾಗಿ ಹೋಗಲಾಡಿಸಲು ಇದು ಬಹಳ ಉತ್ತಮ. ಇದು ನಮ್ಮ ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
#ಹರ್ಬಲ್ ಟೀ ನಿಮ್ಮ ಹೊಟ್ಟೆಯ ಉರಿಯನ್ನು ಹೋಗಲಾಡಿಸುವುದಲ್ಲದೇ, ಚಳಿಗಾಲದಲ್ಲಿ ಟೀ ಹಾಗೂ ಕೆಮ್ಮಿನ ಸಮಸ್ಯೆಗೆ ಸಹ ಪರಿಹಾರ ನೀಡುತ್ತದೆ. ಗ್ರೀನ್ ಟೀ , ಕ್ಯಾಮೊಮೈಲ್ ಟೀ ಅಥವಾ ಪುದೀನಾ ಟೀ ಕರುಳಿನ ಆರೊಗ್ಯಕ್ಕೆ ಬಹಳ ಒಳ್ಳೆಯದು.