ಶುಂಠಿ ಕಷಾಯದ ಆರೋಗ್ಯ ಪ್ರಯೋಜನಗಳು!

ಶುಂಠಿ ಕಷಾಯವನ್ನು ಪ್ರಾಚೀನ ಕಾಲದಿಂದಲೂ ನೆಗಡಿ ಮತ್ತು ಕೆಮ್ಮುಗಳಿಗೆ ಬಳಸಲಾಗುವ ಮನೆಯಾಗಿದೆ. ಶುಂಠಿಯಲ್ಲಿರುವ ಸಕ್ರಿಯ ಸಂಯುಕ್ತ, ಜಿಂಜರಾಲ್ ಉರಿಯೂತದ, ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಶುಂಠಿಯು ಜಿಂಗರೋನ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುವುದರಿಂದ ದೇಹದಲ್ಲಿನ ಉರಿಯೂತದ ವಿರುದ್ಧ ಹೋರಾಡಲು ಉತ್ತಮವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

#ಶೀತದ ವಿರುದ್ಧ ಹೋರಾಟ:ಶುಂಠಿಯು ನಿರಂತರವಾಗಿ ಬ್ಯಾಕ್ಟೀರಿಯಾ ಹಾಗೂ ವೈರಸ್ ವಿರುದ್ಧ ಹೋರಾಡುತ್ತಲೇ ಇರುತ್ತದೆ. ಅದರಲ್ಲೂ ಶೀತ, ಕೆಮ್ಮು ಹರಡುವ ವೈರಸ್ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಿ, ಆರೋಗ್ಯ ಕಾಯ್ದುಕೊಡುತ್ತದೆ. ಮೈಕೈ ನೋವು, ತಲೆನೋವು, ಹೊಟ್ಟೆನೋವು, ಅತಿಸಾರಕ್ಕೆ ಕೂಡಾ ಶುಂಠಿ ಉತ್ತಮ ಮದ್ದು. ಅಷ್ಟೇ ಅಲ್ಲ, ಶುಂಠಿಯು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಹಲವಾರು ಕಾಯಿಲೆಗಳನ್ನು ದೂರವಿಡುತ್ತದೆ. ಮುಟ್ಟಿನ ಹೊಟ್ಟೆನೋವು ಕಡಿಮೆ ಮಾಡಿ, ದೇಹದಲ್ಲಿ ಪ್ಯಾರಾಸೈಟ್‌ಗಳನ್ನು ಕೊಂದು, ಹಾರ್ಟ್ ಸ್ಟ್ರೋಕ್ ಕಡಿಮೆ ಮಾಡುತ್ತದೆ. ಕೀಮೋಥೆರಪಿಯ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಅಸ್ತಮಾ ವಿರುದ್ಧ ಹೋರಾಡುತ್ತದೆ. ಮಾರ್ನಿಂಗ್ ಸಿಕ್‌ನೆಸ್ ಕಡಿಮೆ ಮಾಡುತ್ತದೆ.

#ಶುಂಠಿ ಜೊತೆಗೆ ಉಪ್ಪು ಸೇವನೆ ಮಾಡುವುದು ಕೆಮ್ಮಿಗೆ ಪರಿಹಾರ ಎಂಬುದು ಗೊತ್ತು. ಆದರೆ ಪ್ರತಿಯೊಬ್ಬರಿಗೂ ಇದು ಇಷ್ಟವಾಗುವ ಪದ್ಧತಿಯೆಂದು ಹೇಳುವುದಕ್ಕೆ ಸಾಧ್ಯವಿಲ್ಲ.ಶುಂಠಿ ನಾಲಿಗೆಗೆ ಸ್ವಲ್ಪ ಖಾರದ ಅನುಭವ ಉಂಟು ಮಾಡುವುದರಿಂದ ಬಹಳಷ್ಟು ಜನರು ಶುಂಠಿಯನ್ನು ಹಸಿಯಾಗಿ ತಿನ್ನಲು ಇಷ್ಟಪಡುವುದಿಲ್ಲ. ಇಂತಹ ಸಮಯದಲ್ಲಿ ಶುಂಠಿ ಡಿಕಾಕ್ಷನ್ ತಯಾರು ಮಾಡಿ ಕುಡಿಯುವುದು ಒಳ್ಳೆಯದು.

#ಶುಂಠಿಯಲ್ಲಿ ಕೆಲ ಹೆಪಾಟೋ-ಪ್ರೊಟೆಕ್ಟಿವ್ ಗುಣಗಳಿದ್ದು, ಲಿವರ್‌ನಲ್ಲಿ ಟಾಕ್ಸಿನ್ಸ್ ಸ್ಟೋರ್ ಆಗದಂತೆ ನೋಡಿಕೊಳ್ಳುತ್ತದೆ. ಇದರ ಆ್ಯಂಟಿ ಇನ್ಫಮೇಟರಿ ಗುಣವು ಲಿವರ್ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group