ಹಾಲಿನ ಕೆನೆಯ ಆರೋಗ್ಯಕರ ಪ್ರಯೋಜನಗಳು!

ಹಾಲಿನ ಕೆನೆಯನ್ನು ಆರೋಗ್ಯದ ಕಾರಣಗಳಿಗಾಗಿ ಬಹುತೇಕ ಮಂದಿ ಸುಮ್ಮನೆ ಕಸದ ಬುಟ್ಟಿಗೆ ಹಾಕುತ್ತಾರೆ. ಆದರೆ ಅದರ ಪ್ರಯೋಜನ ತಿಳಿದಿದ್ದರೆ, ಪವಾಡಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹಾಲಿನ ಕೆನೆಯ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ, ಮೊಡವೆಗಳನ್ನು ನಿವಾರಿಸುತ್ತದೆ, ಜೊತೆಗೆ ತ್ವಚೆಯನ್ನು ಮೃದುವಾಗಿಸುತ್ತದೆ. ಹೀಗೆ ಇದರ ಇನ್ನಷ್ಟು ಪ್ರಯೋಜನಗಳನ್ನು ತಿಳಿಯೋಣ!

#ಕಪ್ಪು ಕಲೆ: ಹಾಲಿನ ಕೆನೆಯನ್ನು ನಿಯಮಿತವಾಗಿ ಮುಖಕ್ಕೆ ಬಳಸುವುದರಿಂದ ಬಿಸಿಲು ಮತ್ತು ಮೊಡವೆಗಳಿಂದ ಉಂಟಾಗುವ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಲಿನ ಕೆನೆಯಲ್ಲಿರುವ ವಿಟಮಿನ್ ಮತ್ತು ಪ್ರೋಟೀನ್ ಹೊಸ ಚರ್ಮದ ಕೋಶಗಳ ರಚನೆಗೆ ಉತ್ತೇಜಿಸುತ್ತದೆ. ಅಲ್ಲದೆ ಸತ್ತ ಚರ್ಮದ ಕೋಶಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಎಫ್‌ಡಿಎ ಪ್ರಕಾರ ಆಲ್ಫಾ-ಹೈಡ್ರಾಕ್ಸಿ ಸ್ಕಿನ್ ಎಕ್ಸ್ಫೋಲಿಯೇಶನ್‌ನಲ್ಲಿ ಸಹಾಯ ಮಾಡುತ್ತದೆ. ಜೇನುತುಪ್ಪ ಮತ್ತು ನಿಂಬೆಯನ್ನು ಹಾಲಿನ ಕೆನೆಯೊಂದಿಗೆ ಬೆರೆಸಬಹುದು.

#ತ್ವಚೆ ಹೊಳೆಯುವಂತೆ ಮಾಡಲು:ಸಾಮಾನ್ಯ ಚರ್ಮದವರಿಗೆ ಈ ಫೇಸ್ ಪ್ಯಾಕ್ ಬಹಳ ಒಳ್ಳೆಯದು. ಒಂದು ಚಮಚ ಶ್ರೀಗಂಧದ ಪುಡಿಗೆ ಎರಡು ಚಮಚ ಹಾಲಿನ ಕೆನೆ, ಒಂದು ಚಮಚ ಕಡಲೆಹಿಟ್ಟು, ಒಂದು ಚಿಟಿಕೆ ಅರಿಶಿನ ಮತ್ತು ಕೆಲವು ಹನಿ ಗುಲಾಬಿ ನೀರನ್ನು ಸೇರಿಸಿ. ನಂತರ ಗಟ್ಟಿಯಾಗಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಪೂರ್ತಿಯಾಗಿ ಹಚ್ಚಿ ಮೃದುವಾಗಿ ಉಜ್ಜಿ. ನಂತರ 10 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ನೀರಿನಲ್ಲಿ ಮುಖ ತೊಳೆಯಿರಿ.

#ಮೊಡವೆಗಳಂತವು ನಿಮ್ಮ ತ್ವಚೆಯನ್ನು ಕಾಡದಂತೆ ನೋಡಿಕೊಳ್ಳುತ್ತವೆ. ಇದನ್ನು ತಯಾರಿಸುವುದು ಸುಲಭ. ಒಂದು ಟೀ.ಚಮಚ ಜೇನು ತುಪ್ಪಕ್ಕೆ, ಒಂದು ಟೀ.ಚಮಚ ಹಾಲಿನ ಕೆನೆಯನ್ನು ಬೆರೆಸಿ. ಇದಕ್ಕೆ ಬೇಕಾದಲ್ಲಿ ಲಿಂಬೆರಸವನ್ನು ಬೆರೆಸಿಕೊಳ್ಳಬಹುದು.ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಲೇಪಿಸಿ. 15 ನಿಮಿಷ ಬಿಟ್ಟು, ನಂತರ ತೊಳೆಯಿರಿ.

#ಗಮನಿಸಿ: ಆದರೆ ಇದರ ಅತಿಯಾದ ಸೇವನೆಯಿಂದ ಹೊಟ್ಟೆಯಲ್ಲಿ ಅಧಿಕ ಪ್ರಮಾಣದ ಕೊಬ್ಬು ಶೇಖರಣೆಯಿಂದಾಗಿ ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆ ಕಾಡಬಹುದು. ಹಾಗಾಗಿ ನೀವು ಹೆಚ್ಚು ಕಠಿಣವಾದ ವ್ಯಾಯಾಮಗಳನ್ನು ಮಾಡಿದಾಗ ಹಾಲಿನ ಕೆನೆ ಸೇವಿಸಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group