ಪಿತ್ತಕೋಶದ ಕಲ್ಲಿನ ಸಮಸ್ಯೆಯನ್ನು ಪರಿಹರಿಸಲು ಸಲಹೆ!

ಪಿತ್ತಕೋಶದ ಕಲ್ಲಿನ ಸಮಸ್ಯೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಈ ಅನಾರೋಗ್ಯದ ಸಮಸ್ಯೆಗೆ ಕಾರಣ ಹಾಗೂ ಈ ಪರಿಹಾರ ಕ್ರಮವನ್ನು ಅನುಸರಿಸಬೇಕು.

#ದೂರವಿಡಬೇಕಾದ ಆಹಾರಗಳು:ಪಿತ್ಥಕೋಶಕ್ಕೆ ಕಾರಣವಾಗಬಹುದಾದ ಆಹಾರವನ್ನು ಸಾಮಾನ್ಯವಾಗಿ ಎಲ್ಲರೂ ದೂರವಿಡುವಂಥದ್ದು: ಮೊಟ್ಟೆಗಳು (ಕೆಲವರಿಗೆ ಬೇಯಿಸಿದ ಮೊಟ್ಟೆ ಅಥವಾ ಮೃದುವಾದ ಮೊಟ್ಟೆ ನಿರುಪದ್ರವಿ), ಹಂದಿಮಾಂಸ, ಈರುಳ್ಳಿ, ಹಾಲು ಮತ್ತು ಇತರ ಡೈರಿ ಉತ್ಪನ್ನಗಳು, ಕಾಫಿ, ದ್ರಾಕ್ಷಿಹಣ್ಣು, ಕಿತ್ತಳೆ ಹಣ್ಣು, ಬೀನ್ಸ್‌ (ಹಸಿರು ಬೀನ್ಸ್‌ ಹೊರತುಪಡಿಸಿ), ಬೇಳೆಕಾಳುಗಳು, ಜೋಳ, ಅಲ್ಕೋಹಾಲ್‌, ಕೊಬ್ಬಿನ ಅಂಶಗಳು, ಸಂಸ್ಕರಿಸಿದ ಎಣ್ಣೆ ಮತ್ತು ಟ್ರಾನ್ಸ್‌-ಫ್ಯಾಟ್‌ಗಳು.

#ತಿನ್ನಬೇಕಾದ ಆಹಾರಪದಾರ್ಥಗಳುಪಿತ್ಥಕೋಶದಲ್ಲಿ ಕಲ್ಲು ಬೆಳೆದಾಗ ನೀವು ತಿನ್ನಬೇಕಾದ ಆಹಾರ ಸಂಪೂರ್ಣ ಆರೋಗ್ಯಯುತವಾದದ್ದು. ಇದರಲ್ಲಿ ಅನುಮಾನವೇ ಬೇಡ. ನಿಮ್ಮ ಆಹಾರವನ್ನು ನೀವೇ ತಯಾರಿಸಿಕೊಳ್ಳಿ. ಸಾಮಾನ್ಯವಾಗಿ ಸಮಸ್ಯೆಯನ್ನು ತಂದೊಡ್ಡದ ಆಹಾರಗಳೆಂದರೆ: ಬೀಟ್ಸ್‌, ಸವತೆಕಾಯಿ, ಹಸಿರು ಬೀನ್ಸ್‌, ಓಕ್ರಾ, ಸಿಹಿ ಬಟಾಟೆ, ವಿನೆಗರ‍್, ಬೆಳ್ಳುಳ್ಳಿ, ಟೊಮ್ಯಾಟೋಗಳು, ಶಾಲೋಟ್ಸ್‌, ಮೀನು, ನಿಂಬೆ, ದ್ರಾಕ್ಷಿ, ಸೇಬು, ಬೆರ್ರಿ, ಪಪ್ಪಾಯಿ, ಓಮೆಗಾ ೩.

#ತಜ್ಞರು ಅಭಿಪ್ರಾಯಿಸುವ ಪ್ರಕಾರ ಊಟವನ್ನು ತಪ್ಪಿಸುವುದು ಅಥವಾ ದೀರ್ಘ ಸಮಯಗಳ ಕಾಲ ಊಟವನ್ನು ಮಾಡದೆ ಇರುವುದು ಪಿತ್ತ ಕೋಶದಲ್ಲಿ ಕಲ್ಲನ್ನುಂಟುಮಾಡುವುದು. ಶೀಘ್ರದಲ್ಲಿಯೇ ದೇಹದ ತೂಕವನ್ನು ಇಳಿಸುವುದರಿಂದ ಪಿತ್ತ ಕೋಶದಲ್ಲಿ ಕಲ್ಲು ಕಾಣಿಸಿಕೊಳ್ಳುವುದು. ಹಾಗಾಗಿ ದೇಹದ ತೂಕವನ್ನು ನಿಧಾನ ಗತಿಯಲ್ಲಿ ಇಳಿಸುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ನಂತರ ತೂಕ ಇಳಿಕೆಯ ಮೊದಲ ತಿಂಗಳಲ್ಲಿ ಉರ್ಸೋಡೈಕ್ಸಿಕೋಲಿಕ್ ಆಮ್ಲದಂತಹ ಔಷಧಗಳು ಪಿತ್ತಕಲ್ಲುಗಳ ರಚನೆಯನ್ನು ತಡೆಯುವುದು.

#ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಪಿತ್ತಕೋಶದಲ್ಲಿ ಇರುವ ಕಲ್ಲುಗಳನ್ನು ಮೃದುಗೊಳಿಸಲು ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಕಲ್ಲುಗಳಿರುವ ಸಂದರ್ಭದಲ್ಲಿ ಆಪಲ್ ಸೈಡರ್ ವಿನೆಗರ್ ನೀರನ್ನು ಕುಡಿಯಲು ರೋಗಿಗಳಿಗೆ ಸಲಹೆ ನೀಡಲಾಗುತ್ತದೆ. ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಪ್ರತಿದಿನ ಬೆಳಿಗ್ಗೆ ಆಪಲ್ ಸೈಡರ್ ವಿನೆಗರ್ ನೀರನ್ನು ಕುಡಿಯಿರಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group