ಕಲ್ಲಂಗಡಿಯ ಹೆಚ್ಚಿನ ಉಪಯೋಗಗಳು!

ಈ ಹಣ್ಣು ನೀವೂ ಊಹಿಸದಷ್ಟು ತೇವಾಂಶವನ್ನು ಹೊಂದಿದೆ. ಇದು ಸುಮಾರು 92 ಪ್ರತಿಶತ ನೀರಿನಾಂಶದಿಂದ ಕೂಡಿದೆ ಅಲ್ಲದೆ ಹಲವು ಖನಿಜಾಂಶಗಳು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದೆ. ಇದು ಬೇಸಿಗೆಯಲ್ಲಿ ದೇಹವು ಡಿಹೈಡ್ರೇಷನ್ ಆಗದಂತೆ ತಡೆಯುತ್ತದೆ ನೀರಿನಿಂದ ಕೂಡಿದ ರಸಭರಿತ ಹಣ್ಣಿನ ಲಾಭಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ
#ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ:ಕಲ್ಲಂಗಡಿ ಹಣ್ಣು ಚರ್ಮ ಸುಕ್ಕು ಬೀಳುವುದು, ನೆರಿಗೆ ಮೂಡುವುದು ಮೊದಲಾದ ವೃದಾಪ್ಯ ಚಿಹ್ನೆಗಳನ್ನು ನಿವಾರಿಸುತ್ತದೆ. ಇದರಲ್ಲಿನ ಕೊಲಾಜನ್ ಅಂಶ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಮಿಟಮಿನ್ ಎ ಮುಖದಲ್ಲಿನ (ಆಯಿಲ್ ಸ್ಕಿನ್) ಎಣ್ಣೆ ಅಂಶವನ್ನು ತಡೆಯುತ್ತದೆ. ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
#ಕಲ್ಲಂಗಡಿ ದೇಹದ ಹೈಡ್ರೇಟ್ ಕಾಪಾಡುತ್ತದೆ: ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಕೊರತೆ ಇರಬಾರದು. ಏಕೆಂದರೆ ನೀರಿನ ಪ್ರಮಾಣ ಕಡಿಮೆಯಾದ ಕೂಡಲೇ ಅನಾರೋಗ್ಯಕ್ಕೆ ಒಳಗಾಗಬಹುದು. ಆದ್ದರಿಂದ ದೇಹವನ್ನು ಹೈಡ್ರೇಟ್ ಆಗಿ ಇಡಲು ಕಲ್ಲಂಗಡಿ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ
#ಪ್ರಾಸ್ಪೇಟ್ ಕ್ಯಾನ್ಸರ್ ತಡೆಗಟ್ಟುತ್ತದೆ:ಕೆಲವು ಅಧ್ಯಯನಗಳ ಪ್ರಕಾರ ಕಲ್ಲಂಗಡಿ ಹಣ್ಣಿನಲ್ಲಿರುವ ಲೈಕೋಪಿನ್ ಅಂಶ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಡಿಎನ್‍ಎ ಕೋಶಗಳ ಹಾನಿಯನ್ನು ಸಹ ತಡೆಯುತ್ತದೆ.ಇದರಲ್ಲಿನ ರೋಗನಿರೋಧಕ ಶಕ್ತಿ ಕೆಟ್ಟ ರಾಸಾಯನಿಕಗಳ ವಿರುದ್ಧ ಹೋರಾಡುತ್ತದೆ.
#ತೂಕ ಇಳಿಸಲು ಹಾಗೂ ಹೃದಯದ ಕ್ರಿಯೆಗಳಿಗೆ ಸಹಕಾರಿ ಆಗಿರುವ ಕಲ್ಲಂಗಡಿ ಹಣ್ಣು ಲೈಂಗಿಕ ಶಕ್ತಿ ಸುಧಾರಣೆ ಮಾಡುವುದು.
#ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಬಿಸಿಲಿನ ಬೇಗೆಯಿಂದ ಉಂಟಾಗುವ ಆಯಾಸ ಪರಿಹಾರವಾಗುವುದು, ಬಾಯಾರಿಕೆ ತಗ್ಗುವುದು, ದೇಹ ತಂಪಾಗುವುದು.