ದಾಳಿಂಬೆ ಸಿಪ್ಪೆಯಿಂದ ಸಿಗುವ ಈ ಉಪಯೋಗ ತಿಳಿಯಿರಿ!

ಹೌದು, ಈ ಸಿಪ್ಪೆ ನಮ್ಮ ನಾಲಿಗೆಗೆ ರುಚಿಯಾಗಿಲ್ಲದಿದ್ದರೂ, ಚರ್ಮ, ಕೂದಲುಗಳಿಗೆ ಅತ್ಯುತ್ತಮವಾಗಿದೆ. ಮುಂದಿನ ದಾಳಿಂಬೆಯ ಸಿಪ್ಪೆಯನ್ನು ಎಸೆಯುವ ಮುನ್ನ ಕೊಂಚ ಯೋಚಿಸಲು ಇಲ್ಲಿ ನೀಡಿರುವ ಮಾಹಿತಿಗಳು ನಿಮ್ಮ ನೆರವಿಗೆ ಬರುತ್ತವೆ ಮುಂದೆ ಓದಿ.

#ದುರ್ವಾಸನೆಯ ಉಸಿರಾಟವನ್ನು ನಿವಾರಿಸಲು ಒಂದು ಚಮಚ ಬಿಸಿಲಿನಿಂದ ಒಣಗಿಸಿದ ದಾಳಿಂಬೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಬೆಳಗ್ಗೆ ಎದ್ದ ಕೂಡಲೇ ಈ ಮಿಶ್ರಣದಿಂದ ನಿಮ್ಮ ಬಾಯಿಯನ್ನು ತೊಳೆಯಿರಿ.

#ಗಂಟಲು ಟಾನ್ಸಿಲ್, ಹೃದ್ರೋಗ, ಸುಕ್ಕುಗಳು, ಬಾಯಿಯ ದುರ್ವಾಸನೆ, ಕೆಮ್ಮು ಮತ್ತು ರಕ್ತಸ್ರಾವ ಮುಂತಾದ ಕಾಯಿಲೆಗಳನ್ನು ನಿವಾರಿಸಲು ದಾಳಿಂಬೆ ಸಿಪ್ಪೆ ಪ್ರಯೋಜನಕಾರಿಯಾಗಿದೆ.

#ದಾಳಿಂಬೆ ಸಿಪ್ಪೆಯು ವಿಟಮಿನ್ ಸಿ ಯಿಂದ ಕೂಡಿದ್ದು, ಇದು ದೇಹದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೇ ಜೀವಕೋಶಗಳಿಗೆ ಯಾವುದೇ ಹಾನಿಯಾಗದಂತೆ ತಡೆಯುತ್ತದೆ. ಅಲ್ಲದೇ ರಕ್ತವನ್ನು ಶುದ್ಧೀಕರಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ತಡೆಯಲು ಸಹಾಯ ಮಾಡುತ್ತದೆ.

#ದಾಳಿಂಬೆ ಸಿಪ್ಪೆಗಳನ್ನು ಸನ್‌ ಕ್ರೀಮ್​ನಂತೆ ಅನ್ವಯಿಸಬಹುದು. ಒಣ ಸಿಪ್ಪೆಯನ್ನು ಯಾವುದೇ ಎಣ್ಣೆಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಸನ್​ ಟ್ಯಾನಿಂಗ್ ಸಮಸ್ಯೆಯನ್ನು ದೂರ ಮಾಡಬಹುದು.

#ದಾಳಿಂಬೆ ಸಿಪ್ಪೆಯಿಂದ ಮಾಡಿದ ಚಹಾ ಕರುಳಿನ ಕಾರ್ಯಾಚರಣೆಯನ್ನು ಸುಧಾರಿಸುತ್ತದೆ. ದಾಳಿಂಬೆ ಸಿಪ್ಪೆಗಳು ಟ್ಯಾನಿನ್‌ಗಳನ್ನು ಹೊಂದಿರುವುದರಿಂದ, ಇದು ಕರುಳಿನ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಈ ಅಂಶಗಳು ಮತ್ತಷ್ಟು ಸಹಾಯ ಮಾಡುತ್ತವೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group