ಅತಿಯಾದ ಮೊಟ್ಟೆ ಸೇವನೆಯ ಅಡ್ಡ ಪರಿಣಾಮಗಳು!

ಕೋಳಿ ಮೊಟ್ಟೆ ಒಂದು ಆರೋಗ್ಯದಾಯಕ ಪೌಷ್ಟಿಕ ಆಹಾರ. ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಕೋಳಿ ಮೊಟ್ಟೆಗಳು ವ್ಯಕ್ತಿಯ ದೇಹಕ್ಕೆ ಶಕ್ತಿ ನೀಡುತ್ತವೆ. ಅದರಲ್ಲೂ ಮಕ್ಕಳಿಗೆ ಮತ್ತು ನಿಶ್ಯಕ್ತಿ ಸಮ್ಯಸೆ ಹೊಂದಿರುವ ವಯಸ್ಕರಿಗೆ ಈ ಮೊಟ್ಟೆಗಳು ಅತುತ್ತಮ ಚೈತನ್ಯದಾಯಕ ಆಹಾರಗಳೆನಿಸಿವೆ. ಮೊಟ್ಟೆಯಲ್ಲಿ ದೇಹಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳೂ ಇವೆ. ಹೀಗಾಗಿಯೇ ದಿನಕ್ಕೊಂದು ಮೊಟ್ಟೆ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಅದನ್ನು ಅತಿಯಾಗಿ ಸೇವಿಸಿದರೆ ಅಷ್ಟೆ ಮಾರಕ ಕೂಡ ಹೌದು. ಅದಕ್ಕಾಗಿಯೇ ನೀವು ಪ್ರತಿ ದಿನ ಹತ್ತಿಪ್ಪತ್ತು ಮೊಟ್ಟೆ ತಿನ್ನುತ್ತಿದ್ದರೆ ಮೊದಲು ಅದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ.

#ದಿನಕ್ಕೆ ಬೇಕಾಗಿರುವ ಪ್ರಮಾಣದ ಕೊಲೆಸ್ಟ್ರಾಲ್ ಅಂಶದ ಅರ್ಧ ಪ್ರಮಾಣದಷ್ಟು ಒಂದು ಮೊಟ್ಟೆಯಿಂದಲೇ ಸಿಗುತ್ತದೆ. ಹಾಗಾಗಿ ದಿನದಲ್ಲಿ ಹೆಚ್ಚು ಮೊಟ್ಟೆಗಳ ಸೇವನೆ ಮಾಡಿದರೆ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚುತ್ತದೆ. ಇದರಿಂದ ಹೃದಯಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ.

#ಮೊಟ್ಟೆಯ ಬಿಳಿಭಾಗವನ್ನು ತಿನ್ನುವುದರಿಂದ ಆಗುವ ಅಡ್ಡಪರಿಣಾಮಗಳು :ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ತಿನ್ನುವುದರಿಂದ ಫುಡ್ ಪಾಯಿಸನ್ (food poision) ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಕೆಲವೊಮ್ಮೆ ಮೊಟ್ಟೆಯ ಬಿಳಿ ಭಾಗವು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾಗಬಹುದು. ಇದು ಕೋಳಿಯ ಕರುಳಿನಲ್ಲಿ ಕಂಡುಬರುತ್ತದೆ. ಈ ಅಪಾಯವನ್ನು ತಪ್ಪಿಸಬೇಕಾದರೆ, ಪ್ರತಿದಿನ ಮೊಟ್ಟೆಯ ಬಿಳಿಭಾಗವನ್ನು ತಿನ್ನುದಿರುವುದೇ ಒಳ್ಳೆಯದು.

#ಮೊಟ್ಟೆಯ ಬಿಳಿ ಭಾಗವು ಕಡಿಮೆ ಕೊಬ್ಬು ಮತ್ತು ಕಡಿಮೆ ಕ್ಯಾಲರಿಗಳನ್ನು ಹೊಂದಿರುತ್ತದೆ. ಕೆಲವರಿಗೆ ಮೊಟ್ಟೆಯ ಬಿಳಿ ಭಾಗ ಸೇವನೆಯಿಂದ ಅಲರ್ಜಿ ಉಂಟಾಗುತ್ತದೆ. ಇಂತಹ ಸ್ಥಿತಿಯು ಚರ್ಮದ ದದ್ದು, ಊತ, ಕೆಂಪಾಗುವುದು, ಮರಗಟ್ಟುವಿಕೆ, ಅತಿಸಾರ ಮತ್ತು ತುರಿಕೆಗೆ ಕಾರಣವಾಗಬಹುದು. ಅಲರ್ಜಿ ಸಮಸ್ಯೆ ಇರುವವರು ಮೊಟ್ಟೆಗಳನ್ನು ಅತಿಯಾಗಿ ಸೇವಿಸಬಾರದು ಎಂದು ವೈದ್ಯರು ಸೂಚಿಸಿದ್ದಾರೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group