ತಲೆಯ ಹೇನುಗಳ್ಳನು ಕಡಿಮೆ ಮಾಡಿಕೊಳ್ಳಲು ಮನೆಮದ್ದು:

ತಲೆಯಲ್ಲಿ ಹೇನುಗಳು ಆದರೆ ಅದಕ್ಕೆ ಮುಖ್ಯವಾದ ಕಾರಣ ಏನು ಎಂದರೆ ಅಶುಚಿಯಿಂದಾಗಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ ಸರಿಯಾಗಿ ತಲೆಗೆ ಸ್ನಾನ ಮಾಡದೆ ಇರುವುದು 10 ದಿನ 15 ದಿನಗಳ ತನಕ ತಲೆ ಸ್ನಾನ ಮಾಡದೇ ಇರುವುದು ಈ ಹೇನು ಬರಲು ಮುಖ್ಯವಾದ ಕಾರಣವಾಗಿದೆ ಮತ್ತು ವಿವಿಧ ರೀತಿಯ ಎಣ್ಣೆಗಳನ್ನು ತಲೆಗೆ ಹಾಕಿಕೊಳ್ಳುವುದರಿಂದಲೂ ಮತ್ತು ಸರಿಯಾಗಿ ಶರೀರದ ಶುದ್ಧಿ ಇಲ್ಲದೆ ಇರುವುದು ಇವೆಲ್ಲವೂ ತಲೆಯಲ್ಲಿ ಹೇನು ಆಗುವುದಕ್ಕೆ ಕಾರಣ ವಾಗಿದೆ ಇನ್ನೂ ಕೆಲವೊಬ್ಬರಿಗೆ ದೇಹದ ತುಂಬವೂ ಕೂಡ ತಲೆಯ ಹೇನು ಹಬ್ಬಿರುತ್ತದೆ ಅಂತಹ ಸಮಸ್ಯೆಗಳಿಗೆ ಈ ಮನೆಮದ್ದು!
#ಒದ್ದೆ ಕೂದಲನ್ನು ಬಾಚುವುದು:ತಲೆಗೆ ಸ್ನಾನ ಮಾಡಿ ಕೂದಲು ಒದ್ದೆ ಇರುವಾಗಲೇ ಕೂದಲನ್ನು ಬಾಚುವುದರಿಂದ ಹೇನನ್ನು ತೆಗೆಯಬಹುದು. ಕೂದಲು ಒದ್ದೆ ಇರುವಾಗ ಹೇನುಗಳಿಗೆ ಕೂದಲಿನ ಮಧ್ಯೆ ಓಡಿ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದುದರಿಂದ ಅವುಗಳನ್ನು ಸುಲಭವಾಗಿ ತೆಗೆಯಬಹುದು.
#ಪೆಟ್ರೋಲಿಯಂ ಜೆಲ್ಲಿಯು ಹೇನು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಮಗುವಿನ ನೆತ್ತಿಯ ಮೇಲೆ ಪೆಟ್ರೋಲಿಯಂ ಜೆಲ್ಲಿಯ ದಪ್ಪವಾಗಿ ಹಚ್ಚಿ. ರಾತ್ರಿ ಮಲಗುವ ಮೊದಲು ಇದನ್ನು ಮಾಡಿದರೆ ಪ್ರಯೋಜನ ಸಿಗುತ್ತದೆ. ಹಾಗಾಗಿ ರಾತ್ರಿ ಇದನ್ನು ಹಚ್ಚಿ ಟವೆಲ್ ಕಟ್ಟಿ ಬಿಡಿ. ಬೆಳಗ್ಗೆ ಚನ್ನಾಗಿ ತಲೆ ಬಾಚಿ, ನಂತರ ತೊಳೆಯಿರಿ.
#ಸ್ವಲ್ಪ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ನೆತ್ತಿಗೆ ಹಚ್ಚಿ. ಎರಡು ಗಂಟೆಗಳ ನಂತರ ಬಾಚಿ ಹೇನುಗಳನ್ನು ತೆಗೆಯಿರಿ. ಅಥವಾ ರಾತ್ರಿಯಿಡಿ ಎಣ್ಣೆಯನ್ನು ಹಚ್ಚಿ ಬಿಟ್ಟು ಬಿಡಿ, ಬೆಳಗ್ಗೆ ಅದನ್ನು ಬಾಚಿ ನಂತರ ತಲೆಸ್ನಾನ ಮಾಡಿ.
#ಬೆಳ್ಳುಳ್ಳಿ:ಪರಾವಲಂಬಿ ಜೀವಿಗಳನ್ನು ತೊಡೆದುಹಾಕಲು 8 ರಿಂದ 10 ಲವಂಗ, ಬೆಳ್ಳುಳ್ಳಿಯನ್ನು ಪುಡಿಮಾಡಿ ಮತ್ತು ಅದರಲ್ಲಿ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿಕೊಂಡು, ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಸುಮಾರು 30 ನಿಮಿಷಗಳ ಕಾಲ ಬಿಡಿ. ಇದರ ನಂತರ ಕೂದಲನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.