ಸತತವಾಗಿ ತುರಿಕೆ ಕಾಣುತ್ತಿದ್ದರೆ ಹೀಗೆ ಮಾಡಿ!

Dermatitis, eczema, allergy, psoriasis concept. Annoyed middle-aged man in white t-shirt scratching itch on his arm, grey studio background. Bearded man itching rash on his elbow, copy space

ಒಂದು ವೇಳೆ ತುರಿಕೆಯ ಜೊತೆಗೇ ಚರ್ಮದಲ್ಲಿ ದದ್ದುಗಳು, ಚಿಕ್ಕ ಬೊಕ್ಕೆಗಳು, ಕೆಂಪಗಾದ ಚರ್ಮ, ತುರಿಸಿದಲ್ಲಿ ಗೆರೆಗಳಂತೆ ಗಾಯವಾಗುವುದು ಇತ್ಯಾದಿಗಳು ಎದುರಾದರೆ ಮಾತ್ರ ಇದು ಚಿಂತೆಗೆ ಕಾರಣವಾಗಿದೆ. ಕೆಲವೊಮ್ಮೆ ಒಂದೇ ಕಡೆ ಪದೇ ಪದೇ ತುರಿಸಿ ಗಾಯವಾಗಿ ಚರ್ಮ ಹರಿಯಲೂ ಬಹುದು ಅಥವಾ ಚಿಕ್ಕ ಚಿಕ್ಕ ಚೂರುಗಳಾಗಿ ಉಗುರುಗಳಲ್ಲಿ ಸಿಲುಕಿಕೊಳ್ಳಬಹುದು. ಇದು ಚರ್ಮಕ್ಕೆ ಅತಿ ಹೆಚ್ಚು ಘಾಸಿ ಮಾಡಬಹುದು. ಹೀಗಾದಾಗ ಚರ್ಮವೈದ್ಯರ ಭೇಟಿ ಅಗತ್ಯವಾಗಿದೆ. ಒಂದು ವೇಳೆ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರದ ಸೋಂಕಿನಿಂದ ತುರಿಕೆ ಉಂಟಾಗಿದ್ದರೆ ಇದನ್ನು ನಿವಾರಿಸಲು ಕೆಲವು ಸಮರ್ಥವಾದ ಮನೆಮದ್ದುಗಳಿವೆ. ಬನ್ನಿ, ಈ ವಿಧಾನಗಳ ಬಗ್ಗೆ ಅರಿಯೋಣ..

#ಅಲೋವೆರಾ: ಅಲೋವೆರಾ ಅನೇಕ ಚರ್ಮ ರೋಗಗಳಿಗೆ ರಾಮಬಾಣವಾಗಿದೆ, ಅಲೋವೆರಾದ ಜೆಲ್ ಅನ್ನು ತುರಿಕೆ ಇರುವ ಸ್ಥಳಕ್ಕೆ ಹಚ್ಚಿದರೆ ಉತ್ತಮ ಫಲಿತಾಂಶ ಕಾಣುತ್ತೀರ.

#ಒಂದು ಬಕೆಟ್ ನೀರಿಗೆ ಒಂದು ಟೀ ಚಮಚ ಅಡುಗೆ ಸೋಡಾ ಮತ್ತು ಒಂದು ಟೀ ಚಮಚ ನಿಂಬೆ ರಸವನ್ನು ಸೇರಿಸಿದರೂ ತುರಿಕೆಯನ್ನು ನಿವಾರಿಸಬಹುದು

#ತುಳಸಿ ಹಾಗೂ ತಿನ್ನುವ ಸುಣ್ಣ: 15 ರಿಂದ 20 ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ತಿನ್ನುವ ಸುಣ್ಣದ ಜೊತೆಗೆ ಮಿಶ್ರಣ ಮಾಡಿ ತುರಿಕೆ ಇರುವ ಸ್ಥಳಕ್ಕೆ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.

#ಬೇವು:ಬೇವು ತುರಿಕೆಗೆ ಬಹಳ ಪರಿಣಾಮಕಾರಿ. ನೀವು ಬೇವಿನ ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿ ದೇಹಕ್ಕೆ ಅನ್ವಯಿಸಬಹುದು. ಅಥವಾ ಅದರ ಎಣ್ಣೆಯನ್ನು ಬಳಸಬಹುದು. ಬೇವಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತುರಿಕೆ ಕಡಿಮೆ ಮಾಡುತ್ತದೆ.

#ಸತತವಾಗಿ ತುರಿಕೆಯಿದ್ದರೆ ಒಂದು ಲೀಟರ್ ನೀರಿನಲ್ಲಿ ಸ್ವಲ್ಪ ಜೀರಿಗೆಯನ್ನು ಕುದಿಸಿ. ತಣ್ಣಗಾದ ನಂತರ ನೀರನ್ನು ಸೋಸಿ ಜೀರಿಗೆಯನ್ನು ಬೇರ್ಪಡಿಸಿ ಈ ನೀರಿನಿಂದ ಸ್ನಾನ ಮಾಡಿ. ಈ ನೀರಿನಿಂದ 3-4 ದಿನಗಳ ಕಾಲ ನಿರಂತರವಾಗಿ ಸ್ನಾನ ಮಾಡುವುದರಿಂದ ವ್ಯತ್ಯಾಸವಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group