ಈರುಳ್ಳಿ ರಸದ ಪ್ರಯೋಜನ!

#ಈರುಳ್ಳಿಯಲ್ಲಿರುವ ವಿಟಮಿನ್ ಸಿ, ಈ ಮತ್ತು ಎ ಸ್ಕಿನ್ ಗ್ಲೋ ಆಗಲು ಸಹಕರಿಸುತ್ತೆ. ಅದಕ್ಕಾಗಿ ಎರಡು ಚಮಚ ಹೆಸರು ಬೇಳೆ ಹಿಟ್ಟು, ಅರ್ಧ ಚಮಚ ಈರುಳ್ಳಿ ರಸ ಮತ್ತು ಅರ್ಧ ಚಮಚ ಹಾಲು ಮಿಕ್ಸ್ ಮಾಡಿ ಮುಖ ಮತ್ತು ಕೈಗಳಿಗೆ ಹಚ್ಚಿ. ನಿಧಾನವಾಗಿ ಮಸಾಜ್ ಮಾಡಿ. ನಂತರ ಹಾಲಿನಿಂದಲೇ ಇದನ್ನು ತೊಳೆಯಿರಿ.. ಹೀಗೆ ಮಾಡಿದರೆ ಸ್ಕಿನ್ ಗ್ಲೋ ಆಗುತ್ತದೆ. – ಈರುಳ್ಳಿ ರಸದಿಂದ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ಸ್ಕಿನ್ ಮೇಲೆ ಕಾಣಿಸಿಕೊಳ್ಳುವ ಸುಕ್ಕು, ನೆರಿಗೆ ಮೊದಲಾದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಚಿರ ಯೌವ್ವನ ನಿಮ್ಮದಾಗುತ್ತದೆ.
#ರುಬ್ಬಿದ ಈರುಳ್ಳಿ ಪೇಸ್ಟ್ ಅನ್ನು ಮಿಕ್ಸರ್ ಜಾರ್ ನಿಂದ ಹೊರಗೆ ತೆಗೆದು ಒಂದು ಬಟ್ಟಲಿಗೆ ಹಾಕಿಕೊಳ್ಳಿ.*ಒಂದು ಸ್ಯಾಚುರೇಟೆಡ್ ಕಾಟನ್ ಪ್ಯಾಡ್ ನ ಸಹಾಯದಿಂದ ರುಬ್ಬಿದ ಈರುಳ್ಳಿ ಪೇಸ್ಟ್ ಅನ್ನು ತಲೆಯ ತುಂಬೆಲ್ಲ ಚೆನ್ನಾಗಿ ಹಚ್ಚಿ.*ನಿಮ್ಮ ಸಂಪೂರ್ಣ ತಲೆ ಈರುಳ್ಳಿ ರಸದಿಂದ ತುಂಬಿದ ಮೇಲೆ ಒಂದೆರಡು ನಿಮಿಷಗಳ ಕಾಲ ನಿಮ್ಮ ಕೈ ಬೆರಳುಗಳ ಸಹಾಯದಿಂದ ಚೆನ್ನಾಗಿ ಮಸಾಜ್ ಮಾಡಿ.*ನಂತರ ಸುಮಾರು 15 ನಿಮಿಷದಿಂದ ಒಂದು ಗಂಟೆಯ ಕಾಲ ಈರುಳ್ಳಿ ಜ್ಯೂಸ್ ನಿಮ್ಮ ತಲೆಯ ಕೂದಲಿನ ಮೇಲೆ ಹಾಗೆ ಇದ್ದು ಗಾಳಿಯಲ್ಲಿ ಒಣಗಲು ಬಿಡಿ.
ಒಂದು ಗಂಟೆಯ ನಂತರ ನಿಮ್ಮ ಕೂದಲನ್ನು ಶಾಂಪೂ ಉಪಯೋಗಿಸಿ ಚೆನ್ನಾಗಿ ತೊಳೆದುಕೊಳ್ಳಿ.
#ಅಧ್ಯಯನದ ಪ್ರಕಾರ, ಈರುಳ್ಳಿ ರಸವು ವೀರ್ಯದ ಸಂಖ್ಯೆಯನ್ನು ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಮತ್ತು ಅದರ ಕಾರ್ಯಸಾಧ್ಯತೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತದೆ. ಈರುಳ್ಳಿ ರಸವು ಬಲವಾದ ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದೆ, ಇದು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ವೀರ್ಯದ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಈರುಳ್ಳಿ ರಸವು ವೃಷಣದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಲ್ಯುಟೈನೈಜಿಂಗ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.