ಉದ್ದಿನ ಬೇಳೆಯಲ್ಲಿ ಇರುವ ಅದ್ಭುತ ಪ್ರಯೋಜನ!

ಉದ್ದಿನ ಬೇಳೆಯಲ್ಲಿ ಪ್ರೊಟೀನ್, ವಿಟಮಿನ್ ಬಿ, ಕಾರ್ಬೋಹೈಡ್ರೇಟ್ಸ್ ಅಧಿಕವಾಗಿದೆ, ಮಹಿಳೆಯರಿಗೆ ಸಾಮಾನ್ಯವಾಗಿ ಕ್ಯಾಲ್ಸಿಯಂ ಮತ್ತು ಫಾಲಿಕ್ ಆಸಿಡ್ ಸಮಸ್ಯೆ ಕಂಡು ಬರುವುದು ಸಹಜ. ಉದ್ದಿನ ಬೇಳೆ ತಿಂದರೆ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಫಾಲಿಕ್ ಆಸಿಡ್ ಅಂಶವನ್ನು ಸಮತೋಲನದಲ್ಲಿ ಇಡಬಹುದು. ಇದನ್ನು ತಿನ್ನುವುದರಿಂದ ಇನ್ನು ಅನೇಕ ಪ್ರಯೋಜನಗಳನ್ನು ಪಡೆಯಬಹುದು, ಅವು ಯಾವುವು ಎಂದು ತಿಳಿಯಲು ಮುಂದೆ ಓದಿ.
#ಇದು ಕೀಲುಗಳು ಮತ್ತು ಸ್ನಾಯುಗಳಲ್ಲಿನ ನೋವು ಮತ್ತು ಊತವನ್ನು ನಿವಾರಿಸಲು ಸಹಕಾರಿಯಾಗಿದೆ. ಇದು ಹೆಚ್ಚಿನ ಪ್ರಮಾಣದ ವಿಟಮಿನ್ ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ.
#ನಮ್ಮ ದೇಹದ ಯಾವುದೇ ಅಂಗಾಂಗದಲ್ಲಿ ಕಾಣಿಸುವ ನೋವನ್ನು ಉದ್ದು ಕಡಿಮೆ ಮಾಡಬಲ್ಲದು . ಉದ್ದಿಗೆ ಈ ನೋವು ನಿವಾರಣಾ ಶಕ್ತಿ ಇದೆ . ಹಾಗಾದರೆ ಉದ್ದನ್ನು ಹೇಗೆ ನೋವನ್ನು ನಿವಾರಿಸಲು ಬಳಸುವುದು ತಿಳಿಯೋಣ ಬನ್ನಿ. ಉದ್ದನ್ನು ಚೆನ್ನಾಗಿ ಅರಿದು ಬಿಸಿ ಮಾಡಿ ನೋವಿರು ಜಾಗಕ್ಕೆ ಭಟ್ ಕೊಡುವ ಮುಖಾಂತರ ನೋವನ್ನು ಕಡಿಮೆ ಮಾಡಬಹುದು . ನಾವು ಸಾಮಾನ್ಯವಾಗಿ ನೋವಿರುವ ಜಾಗಕ್ಕೆ ಹಾಕುವ ನೋವಿನ ಎಣ್ಣೆ , ಕಾಳು ಮೆಣಸಿನ ಜೊತೆಗೆ ಉದ್ದನ್ನು ಸೇರಿಸುವುದರಿಂದ ಅದು ಇನ್ನಷ್ಟು ಪರಿಣಾಮಕಾರಿಯಾಗಿ ನೋವನ್ನು ನಿವಾರಿಸಲು ಸಹಾಯವಾಗಲಿದೆ ಎನ್ನುತ್ತಾರೆ ಆಯುರ್ವೇದಿಕ್ ತಜ್ಞರು.
#ಇದನ್ನು ಫೇಸ್ ಪ್ಯಾಕ್ ನಂತೆ ಹಚ್ಚಿದರೆ ಮುಖದಲ್ಲಿ ಬೇಗನೆ ನೆರಿಗೆಗಳು ಬೀಳುವುದಿಲ್ಲ, ಅಲ್ಲದೆ ಮುಖದ ಕಾಂತಿಯನ್ನು ಕೂಡ ಹೆಚ್ಚಿಸುವುದು.
#ಇದರಲ್ಲಿ ಫೈಬರ್ ಸಮೃದ್ಧವಾಗಿದ್ದು ಇದು ರಕ್ತದಲ್ಲಿನ ಸಕ್ಕರೆ ಮತ್ತು ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುತ್ತದೆ. ಇದು ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ.