ಸುಖ ನಿದ್ರೆಗೆ ಸುಲಭ ಉಪಾಯ!

ಮಲಗುವ ಸಮಯಕ್ಕೆ ಒಂದು ಸೂಕ್ತ ದಿನಚರಿಯನ್ನು ರಚಿಸುವುದು ಉತ್ತಮ. ನಿಮ್ಮ ನಿದ್ರೆಯ ಸಮಯವನ್ನು ಆನಂದಿಸಲು ನೀವು ಮಾಡಬಹುದಾದ ಸುಲಭ ವಿಧಾನ ಇದು. ಕಣ್ಣಿಗೆ ಮಲಗಿದ ತಕ್ಷಣ ಮತ್ತು ಒಂದಷ್ಟು ಸಮಯ ಸರಿಯಾಗಿ ನಿದ್ದೆ ಬರಲು ಈ ರೀತಿ ಮಾಡಿ.
#ಒಳ್ಳೆ ನಿದ್ದೆ ಬರಬೇಕಾದರೆ ದೈಹಿಕ ಕಸರತ್ತು ತುಂಬಾ ಮುಖ್ಯ. ಈಜಾಡುವುದು, ನಡಿಗೆ, ಸೈಕಲ್ ತುಳಿಯುವುದು ಮುಂತಾದ ಚಟುವಟಿಕೆಗಳಿಗೆ ಸಾಕಷ್ಟು ಸಮಯ ಕೊಡಿ.
#ಮೊಬೈಲ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಿಟ್ಟುಬಿಡಿ:ನೀವು ಮಲಗುವ ಸಮಯ ಹತ್ತಿರವಾದರೂ, ಕೆಲವೊಮ್ಮ ನೀವು ನೋಡುತ್ತಿರುವ ಸಿನಿಮಾ ಅಥವಾ ಸಾಮಾಜಿಕ ಜಾಲತಾಣಗಳು ನಿಮ್ಮನ್ನು ಮಲಗಲು ಬಿಡುವುದಿಲ್ಲ. ಕಂಪ್ಯೂಟರ್, ಟೆಲಿವಿಷನ್, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳು ಬಲವಾದ ನೀಲಿ ಬೆಳಕನ್ನು ಹೊರಸೂಸುತ್ತವೆ. ನೀವು ಈ ಸಾಧನಗಳನ್ನು ಬಳಸುವಾಗ, ಆ ನೀಲಿ ಬೆಳಕು ನಿಮ್ಮ ಮೆದುಳನ್ನು ತುಂಬಿಸುತ್ತದೆ. ಇದು ಹಗಲಿನ ಸಮಯ ಎಂದು ಭಾವಿಸುವಂತೆ ಮೆದುಳನ್ನು ಪ್ರಚೋದಿಸುತ್ತದೆ. ಇದರ ಪರಿಣಾಮವಾಗಿ, ನಿಮ್ಮ ಮೆದುಳು ಮೆಲಟೋನಿನ್ ಉತ್ಪಾದನೆಯನ್ನು ನಿಗ್ರಹಿಸಿ, ನೀವು ಎಚ್ಚರವಾಗಿರಲು ಕೆಲಸ ಮಾಡುತ್ತದೆ.ಹೀಗಾಗಿ ನಿಮ್ಮ ಮೆದುಳಿನ ವಿಚಾರವಾಗಿ ಯಾವುದೇ ಆಟ ಆಡಬೇಡಿ. ಇದು ನೀವು ಮೆದುಳಿಗೆ ಮಾಡುವ ಮೋಸ. ಅಸ್ವಾಭಾವಿಕ ಪ್ರಕ್ರಿಯೆಗೆ ಅವಕಾಶ ನೀಡಿದಂತಾಗುತ್ತದೆ. ಮಲಗುವ ಸಮಯ ನಿಗದಿಪಡಿಸಿದ ಆರಂಭದಲ್ಲಿ ನಿಮ್ಮ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ವಿದಾಯ ಹೇಳಿ. ಸಾಧ್ಯವಾದಷ್ಟು ಸಂಜೆ ವೇಳೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಬಳಸುವುದನ್ನು ತಪ್ಪಿಸಿ. ನಿಮ್ಮ ಮಲಗುವ ಸಮಯದ ದಿನಚರಿ ಪ್ರಾರಂಭವಾಗುವ ಮೊದಲು ನಿಮ್ಮ ಫೋನ್‌ನ ಕೆಂಪು ಬೆಳಕಿನ ಫಿಲ್ಟರ್ ಅನ್ನು ಆನ್ ಮಾಡಲು ಮರೆಯದಿರಿ. ಆದ್ದರಿಂದ ನೀವು ಆಕಸ್ಮಿಕವಾಗಿ ಅದನ್ನು ನೋಡಿದರೆ, ಅದು ನಿಮ್ಮ ಮೆದುಳನ್ನು ಅಡ್ಡಿಪಡಿಸುವುದಿಲ್ಲ.
#ಮೆಹಂದಿಯ ಎಲೆಯನ್ನು ಪೇಸ್ಟ್ ಮಾಡಿ ಪಾದಗಳಿಗೆ ಹಚ್ಚಿದರೆ ಬೇಸಿಗೆ ಕಾಲದಲ್ಲಿ ನಿದ್ದೆ ಚೆನ್ನಾಗಿ ಬರುತ್ತದೆ.-ಹೊಟ್ಟೆ ಗ್ಯಾಸ್ ಸಮಸ್ಯೆಯಿಂದ ನಿದ್ದೆ ಬಾರದಿದ್ದರೆ ಕೊತ್ತಂಬರಿ ಸೊಪ್ಪಿನ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ಮಲಗುವ ಮುನ್ನ ಕುಡಿದರೆ ಗ್ಯಾಸ್ ಕಡಿಮೆಯಾಗಿ ನಿದ್ದೆ ಚೆನ್ನಾಗಿ ಬರುತ್ತದೆ .