ಒಣ ಗಂಟಲು ಸಮಸ್ಯೆಗೆ ಇಲ್ಲಿದೆ ಪರಿಹಾರ!

ಅದೃಷ್ಟವಶಾತ್ ಒಣ ಗಂಟಲು ಸಮಸ್ಯೆಯು ಅಂತಹ ಗಂಭೀರ ಸಮಸ್ಯೆಯೇನು ಅಲ್ಲ ಅಲ್ಲದೇ ಮನೆಯಲ್ಲಿಯೇ ಇಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಈ ಮನೆಮದ್ದುಗಳು ಒಣ ಗಂಟಲಿನ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡುವುದರ ಜೊತೆಗೆ, ಇದನ್ನು ತೆಗೆದುಕೊಳ್ಳಲು ಯಾವುದೇ ವೈದ್ಯಕೀಯ ಸಲಹೆಗಳ ಅಗತ್ಯವಿಲ್ಲ. ಆದರೆ ಒಂದು ವೇಳೆ ಈ ಮನೆಮದ್ದುಗಳನ್ನು ತೆಗೆದುಕೊಂಡರೂ ಗುಣಮುಖರಾಗದೇ, ಇದ್ದರೆ ತಪ್ಪದೇ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಲ್ಲು ಮರೆಯದಿರಿ. ಬನ್ನಿ ಒಣ ಗಂಟಲಿಗೆ ಮನೆಯಲ್ಲಿ ಯಾವ ಯಾವ ಔಷಧಿಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ನೋಡೋಣ.
#ಉಪ್ಪು ನಂಜುನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ ಗಂಟಲಿನ ಸೋಂಕನ್ನು ನಿವಾರಣೆ ಮಾಡುವ ಮೂಲಕ ಪದೇ ಪದೇ ಗಂಟಲು ಒಣಗುವ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.ಅಲ್ಲದೆ ಇದು ಗಂಟಲಿನಿಂದ ಲೋಳೆ ಮತ್ತು ಕಫವನ್ನು ಹೊರತೆಗೆಯಲು ಮತ್ತು ಬಾಯಿಯನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ.
#ಸೂಪ್‌ಗಳನ್ನು ನಿಯಮಿತವಾಗಿ ಸೇವಿಸಿ:ಸುಗರು ಎಲಿಕ್ಸಿರ್‌ನಂತೆ ಸೂಪ್ ಸಹ ನಿಮ್ಮ ಬಾಯಿಯಲ್ಲಿ ತೇವಾಂಶವನ್ನು ತಂದು ಕೊಡುವ ಪಾನೀಯವಾಗಿರುತ್ತದೆ.ಜೊತೆಗೆ ಇದು ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನದಲ್ಲಿಡುತ್ತದೆ. ಒಣ ಗಂಟಲು ತೇವಾಂಶ ಹೀನತೆಯ ಸಂಕೇತ. ಇದು ದೇಹಕ್ಕೆ ನೀರಿನಂಶದ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತದೆ. ತರಕಾರಿ ಸೂಪ್‌ಗಳಲ್ಲಿ ವಿಟಮಿನ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ ಮತ್ತು ಖನಿಜಾಂಶಗಳು ಸಹ ಇದರಿಂದ ದೇಹಕ್ಕೆ ಸಿಗುತ್ತವೆ.
#ಅಲೋವೆರಾ:ಅಲೋವೆರಾ ಸಸ್ಯದ ಎಲೆಗಳೊಳ ಗಿನ ಜೆಲ್ ಅಥವಾ ರಸವು ಬಾಯಿಗೆ ಆಧ್ರìಕವಾಗಿರುತ್ತದೆ. ಅಲೋವೆರಾ ಜ್ಯೂಸ್‌ನಿಂದ ಒಣ ಬಾಯಿಗೆ ಚಿಕಿತ್ಸೆ ನೀಡಲು ಉತ್ತಮ ಮಾರ್ಗವಾಗಿದೆ.
#ನಿಂಬೆಪಾನಕ ಕುಡಿಯಿರಿ ಅಥವಾ ಸೋಂಪು ಅಗಿಯಿರಿ, ಇದು ಬಾಯಿಯಲ್ಲಿ ಸಲೈವಾ ರಚನೆಯನ್ನು ವೇಗಗೊಳಿಸುತ್ತದೆ ಮತ್ತು ಗಂಟಲು ಒಣಗುವುದಿಲ್ಲ.
#ಸಕ್ಕರೆ ಬಿಡಿ:ಆಲ್ಕೋಹಾಲ್ ಮತ್ತು ಧೂಮಪಾನ ದಂತೆ, ಸಕ್ಕರೆ ಕೂಡ ನಿಮ್ಮ ಬಾಯಿಯ ಒಣ ಸಮಸ್ಯೆಗೆ ಕಾರಣವಾಗುತ್ತದೆ. ನಿಮಗೆ ಸಾಧ್ಯವಾದರೆ, ಒಣ ಬಾಯಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಕ್ಕರೆ ಆಹಾರವನ್ನು ಕಡಿಮೆ ಮಾಡಿ.