ಪಾಲಕ್ ಸೊಪ್ಪಿನಲ್ಲಿ ಅಡಗಿರುವ ಔಷದೀಯ ಗುಣಗಳು!

ಪಾಲಕ್ ಒಂದು ಹಸಿರು ತರಕಾರಿಯಾಗಿದೆ. ಇದು ಮೃದುವಾದ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು (Spinacia oleracea). ಪಾಲಕ್ ಸೊಪ್ಪು ಎಂದರೆ ಕೆಲವರು ಅಡುಗೆಗೆ ಮಾತ್ರ ಸೀಮಿತವಾಗಿದ್ದು ಎಂದು ತಿಳಿದಿರುತ್ತಾರೆ. ಪಾಲಕ್ ಸೊಪ್ಪನ್ನು ಆಹಾರವಾಗಿಯೂ ಮತ್ತು ಔಷಧವಾಗಿಯೂ ಉಪಯೋಗಿಸಬಹುದು. ಇದನ್ನುಪಯೋಗಿಸಿ ಅಡುಗೆಯಲ್ಲಿ ವಿವಿಧ ರೀತಿಯ ಖಾದ್ಯಗಳನ್ನ ತಯಾರಿಸುತ್ತಾರೆ.

#ದೃಷ್ಟಿಯನ್ನು ಮೊನಚಾಗಿಸುತ್ತದೆಕಣ್ಣಿನ ಪೊರೆ ಹಾಗೂ ಇರುಳು ಗುರುಡುತನದಂತಹ ಕೆಲವೊಂದು ಕಣ್ಣಿಗೆ ಸಂಬಂಧಿಸದ ರೋಗಗಳ ವಿರುದ್ಧ ಸೆಣಸಾಡಲು, ಕ್ಯಾರೇಟ್ ಜ್ಯೂಸ್ ನೊಂದಿಗೆ ಪಾಲಕ್ ಸೊಪ್ಪಿನ ಜ್ಯೂಸ್ ಅನ್ನು ಕೂಡ ಕುಡಿಯಿರಿ.

#ಪಾಲಕ್ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್​ನ್ನು ಕರಗಿಸ ಸಹಕರಿಸುತ್ತದೆ. ಇದು ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಗೊಳಿಸುತ್ತದೆ

#ಪಾಲಕ್ ಸೊಪ್ಪಿನಲ್ಲಿ ಆಂಟಿಆಕ್ಸಿಡೆಂಟ್, ವಿಟಮಿನ್ ಗಳು, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫಾಲಿಕ್ ಆಮ್ಲವು ಇದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ. ಈ ಎಲ್ಲಾ ವಿಟಮಿನ್ ಗಳು ರಕ್ತ ಸಂಚಾರವನ್ನು ಉತ್ತಮಪಡಿಸುವುದು ಮತ್ತು ರಕ್ತನಾಳವು ಬ್ಲಾಕ್ ಆಗದಂತೆ ಮಾಡುವುದು.

#ಬಿಸಿಲಿನಿಂದ ಕಪ್ಪಾಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರುವಲ್ಲಿ ಸಹಾಯ ಮಾಡುತ್ತದೆ.ಮುಖದ ಮೇಲಿನ ಕಪ್ಪು ಕಲೆಗಳನ್ನು ಮಾಯವಾಗಿಸುತ್ತದೆ.

#ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ನಾರಿನ ಅಂಶ ಇರುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

#ಪಾಲಕ್ ಸೊಪ್ಪಿನಲ್ಲಿರುವ ಔಷಧೀಯ ಗುಣಗಳಿಂದ ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುತ್ತದೆ.

#ಪಾಲಕ್ ಸೊಪ್ಪು ಮಲಬದ್ದತೆಯನ್ನು ನಿಯಂತ್ರಿಸುತ್ತದೆ:ಮಲಬದ್ಧತೆಯಿಂದ ಬಳಲುತ್ತಿರುವವರು, ಪಾಲಕ್ ಸೊಪ್ಪಿನ ಜ್ಯೂಸು ಮಾಡಿಕೊಂಡು ಕುಡಿಯುವುದರಿಂದ, ಅದರಲ್ಲಿರುವ ನಾರಿನಂಶ, ಜೀರ್ಣ ಕ್ರಿಯೆ ಸುಗಮವಾಗುವಂತೆ ಮಾಡುತ್ತದೆ. ಇದರಿಂದ ಮಲಬದ್ಧತೆಯ ನಿಯಂತ್ರಣವಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group