ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿರುವವರು ಈ ಹಣ್ಣುಗಳಿಂದ ದೂರ ಇರಿ!

ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿರುವವರು ಯಾವ ಆಹಾರ ಸೇವಿಸಬೇಕು ಮತ್ತು ಯಾವ ಆಹಾರ ಸೇವಿಸಬಾರದು ಎಂಬ ಸಲಹೆಗಳನ್ನು ಜನರಿಂದ ನಿರಂತರವಾಗಿ ಪಡೆಯುತ್ತಿರುತ್ತಾರೆ. ನೀವು ಸೇವಿಸಲೇಬಾರದಂತಹ ರಸವತ್ತಾದ ಹಣ್ಣುಗಳ ಪಟ್ಟಿ ಹೀಗಿರುತ್ತದೆ: ಮಾವಿನಹಣ್ಣು, ಸೀತಾಫಲ, ಸಪೋಟ, ಬಾಳೆಹಣ್ಣು ಮತ್ತು ದ್ರಾಕ್ಷಿಗಳು.

ತಾರ್ಕಿಕವಾಗಿ ಹೇಳುವುದಾದರೆ ಮೇಲೆ ತಿಳಿಸಿರುವ ಹಣ್ಣುಗಳಲ್ಲಿ ಹೇರಳವಾದ ‘ಸಕ್ಕರೆ’ ಅಂಶ ಇರುತ್ತದೆ. ಇದರಿಂದ ಡಯಾಬಿಟಿಸ್ ಹೊಂದಿರುವವರಿಗೆ ತುಂಬಾ ಸಮಸ್ಯೆ ಉಂಟಾಗುತ್ತದೆ. ಹಾಗೆಯೇ, ನಿಮಗೆ ಹಣ್ಣುಗಳು ತುಂಬ ಇಷ್ಟ ಇದ್ದರೂ ಒಲ್ಲದ ಮನಸ್ಸಿನಲ್ಲಿ ಆ ರುಚಿಕರವಾದ ಹಣ್ಣುಗಳನ್ನು ನಿರಾಕರಿಸಬೇಕು. ಆದರೆ ಈಗ ಹಾಗೆ ಮಾಡುವ ಅಗತ್ಯ ಇಲ್ಲ.

ಸೇವಿಸಬಾರದ ಹಣ್ಣುಗಳ ಪಟ್ಟಿ!

#ಅನಾನಸ್:ಹೆಚ್ಚಿನ ಜನರು ಅನಾನಸ್ ತಿನ್ನಲು ಇಷ್ಟಪಡುತ್ತಾರೆ, ಆದರೆ ಅನಾನಸ್ನಲ್ಲಿ ಸಕ್ಕರೆಯ ಪ್ರಮಾಣವು ಅಧಿಕವಾಗಿದೆ ಎಂದು ನಿಮಗೆ ತಿಳಿದಿದೆಯೇ. ಆದ್ದರಿಂದ, ಅನಾನಸ್ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸಬಹುದು. ಆದ್ದರಿಂದ, ಮಧುಮೇಹಿಗಳು ಅನಾನಸ್ ಸೇವಿಸುವುದನ್ನು ತಪ್ಪಿಸಬೇಕು.

#ಆರೋಗ್ಯ ತಜ್ಞರು ಹೇಳುವ ಹಾಗೆ ಯಾರಿಗೆ ಸಕ್ಕರೆ ಕಾಯಿಲೆ ಕಂಟ್ರೋಲ್ ನಲ್ಲಿ ಇರುವುದಿಲ್ಲ ಅಂತಹವರು ಪ್ರತಿದಿನ 80 ಗ್ರಾಂ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಪೋಟ ಹಣ ತಿನ್ನಬಾರದು.ಇದರಿಂದ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅದರಲ್ಲೂ ಊಟ ಆದ ಮೇಲೆ ಸಪೋಟ ಹಣ್ಣು ತಿನ್ನಲೇಬಾರದು.

#ಬಾಳೆಹಣ್ಣು:ಮಧುಮೇಹಿಗಳಿಗೆ ಬಾಳೆಹಣ್ಣು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ ಇದರಲ್ಲಿ ಸಕ್ಕರೆ ಅಂಶವಿದೆ. ಆದ್ದರಿಂದ, ನೀವು ಮಧುಮೇಹ ರೋಗಿಗಳಾಗಿದ್ದರೆ ಮತ್ತು ನೀವು ಬಾಳೆಹಣ್ಣನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಮಧುಮೇಹ ರೋಗಿಗಳು ಬಾಳೆಹಣ್ಣನ್ನು ಸೇವಿಸುವುದನ್ನು ತಪ್ಪಿಸಬೇಕು.

#ಸೀತಾಫಲ: ಇದರಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾಗಿದ್ದು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಆಗುವಂತೆ ಮಾಡುವ ಸಾಧ್ಯತೆ ಇರುತ್ತದೆ.ಏಕೆಂದರೆ ಸೀತಾಫಲ ಹಣ್ಣು ಕೂಡ ತನ್ನಲ್ಲಿ ಅತಿಯಾದ ಸಿಹಿ ಅಂಶವನ್ನು ಒಳಗೊಂಡಿದ್ದು, ನಿಮ್ಮ ಮಧುಮೇಹ ಸಮಸ್ಯೆಯನ್ನು ನಿಯಂತ್ರಣ ತಪ್ಪುವಂತೆ ಮಾಡಬಹುದು

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group