ರಕ್ತದೊತ್ತಡವನ್ನು ತಗ್ಗಿಸುವುದು ಈ ಜ್ಯೂಸ್!

ಕಿತ್ತಳೆ ಜ್ಯೂಸ್ ರಕ್ತದೊತ್ತಡವನ್ನು ತಗ್ಗಿಸುವುದು ಮತ್ತು ಹೃದಯದ ಆರೋಗ್ಯ ಕಾಪಾಡುವುದು. ಕ್ಲೆವೆಲೆಂಡ್ ಕ್ಲಿನಿಕ್ ನಡೆಸಿರುವಂತಹ ಅಧ್ಯಯನವೊಂದರ ಪ್ರಕಾರ, ಅಧ್ಯಯನಕ್ಕೆ ಒಳಪಟ್ಟವರು ಪ್ರತೀ ದಿನ ಎರಡು ಲೋಟ ಕಿತ್ತಳೆ ಜ್ಯೂಸ್ ಕುಡಿದ ವೇಳೆ ಅವರ ರಕ್ತದೊತ್ತಡ ಮಟ್ಟವು ಗಣನೀಯವಾಗಿ ಕಡಿಮೆ ಆಗಿರುವುದು ಸಾಬೀತು ಆಗಿದೆ. ಅಧ್ಯಯನ ಮುಕ್ತಾಯಗೊಳ್ಳುವ ಎರಡು ವಾರಕ್ಕೆ ಮೊದಲು ಹೆಚ್ಚಿನ ರೋಗಿಗಳಲ್ಲಿ ರಕ್ತದೊತ್ತಡವು ಸಾಮಾನ್ಯ ಹಂತಕ್ಕೆ ಬಂದು ನಿಂತಿದೆ. ಕಿತ್ತಳೆ ಹಣ್ಣು ರಕ್ತದೊತ್ತಡ ಕಡಿಮೆ ಮಾಡಲು ಒಂದು ಅದ್ಭುತವಾಗಿರುವ ಪಾನೀಯವೆಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
#ಆಂಟಿಬ್ಯಾಕ್ಟೀರಿಯಲ್ ಮತ್ತು ಸೋಂಕುನಿವಾರಕ ಗುಣಗಳು ಕಿತ್ತಳೆ ರಸದಲ್ಲಿ ಹೇರಳವಾಗಿರುವುದರಿಂದ ಶೀತ ಮತ್ತು ಇನ್ನಿತರ ಶೀತದ ಸಮಸ್ಯೆಗಳನ್ನು ಇದು ಹೋಗಲಾಡಿಸಲಿದೆ.
#ಕಿತ್ತಳೆ ಹಣ್ಣು ಜ್ಯೂಸ್ ಆಗಾಗ ಕುಡಿಯುವುದರಿಂದ ನಿಮಗೆ ಒಂದು ವೇಳೆ ಕಿಡ್ನಿ ಸಮಸ್ಯೆಗಳು ಇದ್ದರೆ ಅವುಗಳು ದೂರವಾಗುವ ಸಾಧ್ಯತೆ ಇರುತ್ತದೆ. ಕಿಡ್ನಿಗಳಲ್ಲಿ ಕಲ್ಲುಗಳು ಕಂಡುಬರುವುದು ಇಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.ನಿಮಗೆ ಮಧುಮೇಹ ಇಲ್ಲದೆ ಇದ್ದರೆ ನೀವು ಯಾವುದೇ ಅಂಜಿಕೆ ಇಲ್ಲದೆ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯಬಹುದು. ಆದರೂ ಕೂಡ ಇದು ಹಲ್ಲುಗಳಿಗೆ ಅಪಾಯಕಾರಿ ಎಂದು ಹೇಳಲಾಗಿದೆ.
#ಮಧುಮೇಹ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಕಿತ್ತಳೆ ಹಣ್ಣಿನ ಜ್ಯೂಸ್ ನಲ್ಲಿ ನೈಸರ್ಗಿಕವಾಗಿ ಸಿಹಿ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು.
#ಪುರುಷರ ವೀರ್ಯಾಣು ವೃದ್ಧಿಗೆ ಕಿತ್ತಳೆ ರಸ ತುಂಬ ಪ್ರಯೋಜನಕಾರಿ. ವೀರ್ಯದ ಗುಣಮಟ್ಟ ಮತ್ತು ವೀರ್ಯದ ಸಂಖ್ಯೆಯನ್ನು ಕಿತ್ತಳೆ ಹೆಚ್ಚಿಸುತ್ತದೆ.
#ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಲು ಸಹಕಾರಿ:ನೀವು ನಿರಂತರವಾಗಿ ಕಿತ್ತಳೆ ರಸವನ್ನು ಕುಡಿಯುತ್ತಿದ್ದರೆ, ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಅತಿಯಾದ ಬೊಜ್ಜಿನ ಸಮಸ್ಯೆ ಇರುವವರು ಆರೆಂಜ್ ಜ್ಯೂಸ್ ಕುಡಿಯೋದು ಉತ್ತಮ. ತೂಕ ನಷ್ಟದ ಸಮಯದಲ್ಲಿ ಕಿತ್ತಳೆ ರಸ ಕುಡಿಯೋದ್ರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಹಸಿವಿನ ಭಾವನೆಯನ್ನು ಮಂದಗೊಳಿಸುತ್ತದೆ.
#ಕೇವಲ ಕಿತ್ತಳೆ ಜ್ಯೂಸ್ ನ್ನು ಕುಡಿಯುವುದರಿಂದ ರಕ್ತದೊತ್ತಡವು ಕಡಿಮೆಯಾಗುವುದಿಲ್ಲ. ಇದರೊಂದಿಗೆ ನೀವು ಆಹಾರ ಪಥ್ಯವನ್ನು ಕೂಡ ಮಾಡಬೇಕು. ಸೋಡಿಯಂ ಕಡಿಮೆ ಇರುವ ಆಹಾರ ಸೇವಿಸಿ ಮತ್ತು ವ್ಯಾಯಾಮ ಮಾಡಿದರೆ ಅದರಿಂದ ಹೃದಯದ ಆರೋಗ್ಯ ಕಾಪಾಡಬಬಹುದು. ನೀವು ಮನೆಮದ್ದನ್ನು ಪ್ರಯೋಗಿಸುವ ಮೊದಲು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯಿರಿ.