ಕಣ್ಣು ತುರಿಸುವುದು, ಕಣ್ಣು ಉರಿ ಇವೆಲ್ಲಾ ಸಮಸ್ಯೆಗಳಿಗೆ ಮನೆಮದ್ದು!

ಕಣ್ಣು ತುರಿಸುವುದು, ಕಣ್ಣು ಉರಿ ಇವೆಲ್ಲಾ ಸಾಮನ್ಯವಾದ ಸಮಸ್ಯೆಗಳು. ಆದರೆ ಈ ರೀತಿ ಉಂಟಾದಾಗ ತುಂಬಾ ಕಿರಿಕಿರಿ ಉಂಟಾಗುವುದು. ಕಣ್ಣಿಗೆ ಅಲರ್ಜಿಯಾದಾಗ ಕಂಪ್ಯೂಟರ್ ಮುಂದೆ ಕೂತಾಗ, ಟಿವಿ ನೋಡುವಾಗ ಕಣ್ಣಿನಿಂದ ನೀರು ಸುರಿಯುತ್ತಿರುತ್ತದೆ. ಈ ರೀತಿಯ ಸಮಸ್ಯೆಗಳನ್ನು ಈ ಕೆಳಗಿನ ಮನೆ ಮದ್ದಿನಿಂದ ಪರಿಹರಿಸಬಹುದು.
#ಅಲೋವೆರಾದಲ್ಲಿ ಸಾಕಷ್ಟು ಬಗೆಯ ಔಷಧೀಯ ಗುಣಗಳು ಇರುವುದು ನಿಮಗೆಲ್ಲ ಗೊತ್ತೇ ಇದೆ. ಚರ್ಮದ ಕಾಂತಿಯನ್ನು ಹೆಚ್ಚಿಸಲು ಮತ್ತು ಚರ್ಮದ ಕಿರಿಕಿರಿ ತಪ್ಪಿಸಲು ಅಲವೇರಾ ಬಳಕೆಯಾಗುತ್ತದೆ. ಅದೇ ರೀತಿ ಕಣ್ಣುಗಳ ಆರೋಗ್ಯದಲ್ಲೂ ಕೂಡ ಅಲೋವೆರಾ ತುಂಬಾ ಅಚ್ಚುಕಟ್ಟಾಗಿ ಕೆಲಸ ಮಾಡುತ್ತದೆ.ಕಣ್ಣುಗಳ ನವೆಯಿಂದ ಪಾರಾಗಲು ನೀವು ಒಂದು ಬ್ಲೆಂಡರ್ ನಲ್ಲಿ 1 ಟೀ ಸ್ಪೂನ್ ಅಲೋವೆರಾ ಜೆಲ್, 1 ಐಸ್ ಕ್ಯೂಬ್ ಮತ್ತು 1 ಟೀ ಚಮಚ ನೀರು ಮಿಶ್ರಣ ಮಾಡಿ ಅದನ್ನು ಒಂದು ಬೌಲ್ ಗೆ ವರ್ಗಾಯಿಸಿಕೊಂಡು ಒಂದು ಹತ್ತಿ ಉಂಡೆಯನ್ನು ತೆಗೆದುಕೊಂಡು ಈ ಮಿಶ್ರಣದಲ್ಲಿ ಅದ್ದಿ ನಿಮ್ಮ ಕಣ್ಣು ಗಳನ್ನು ಮುಚ್ಚಿಕೊಂಡು ಮೇಲ್ಭಾಗದಲ್ಲಿ ಇಟ್ಟುಕೊಳ್ಳಿ. ಕೇವಲ 2 ರಿಂದ 3 ನಿಮಿಷದಲ್ಲಿ ನಿಮಗೆ ತಕ್ಷಣವೇ ಪರಿಹಾರ ಸಿಗುತ್ತದೆ.
#ಮೊಸರಲ್ಲಿ ಬಾಳೆಹಣ್ಣನ್ನು ಕಿವುಚಿ ಪ್ರತಿದಿನ ತಿನ್ನುವುದು ಸಹ ಕಣ್ಣಿನ ಆರೋಗ್ಯಕ್ಕೆ ಉತ್ತಮ. ಹೀಗೆ ನಿರಂತರ ಸೇವಿಸುವುದರಿಂದ ಕಣ್ಣು ಉರಿ ಕೂಡ ಕಡಿಮೆಯಾಗುತ್ತದೆ.
#ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವಾಗ 1 ಗಂಟೆಯಲ್ಲಿ 2-3 ನಿಮಿಷ ಕಣ್ಣಿಗೆ ವಿಶ್ರಾಂತಿ ಕೊಡಬೇಕು. ಸ್ವಲ್ಪ ದೂರಕ್ಕೆ ನೋಡುವುದು, ಕಣ್ಣು ಮಿಟುಕಿಸುವ ವ್ಯಾಯಾಮ ಒಳ್ಳೆಯದು.
#ಬದನೆಕಾಯಿ ಕೂಡ ನಯನಗಳ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಬದನೆಕಾಯಿ ಪಲ್ಯವನ್ನು ಮಿತವಾಗಿ ಸೇವಿಸುತ್ತಿದ್ದರೆ ದೃಷ್ಟಿ ಮಾಂದ್ಯತೆ ಕಡಿಮೆಯಾಗುತ್ತದೆ.