ಕೊತ್ತಂಬರಿ ಬೀಜದ ಆರೋಗ್ಯಉಪಯೋಗ!

ಕೊತ್ತಂಬರಿ ಬೀಜ ಕೂಡ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಉಪಯುಕ್ತ. ಪ್ರತಿದಿನ ಕೊತ್ತಂಬರಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ (Health) ಸಹಕಾರಿಯಾಗಿದೆ. ಇದರಿಂದ ಸಿಗುವ ಆರೋಗ್ಯ ಉಪಯೋಗಗಳನ್ನು ತಿಳಿಯೋಣ.

#ಕಣ್ಣುಬೇನೆ : ಕೊತ್ತಂಬರಿ ಬೀಜ ನೆನೆಸಿದ ನೀರ ಹನಿಯಲ್ಲಿ ಕಣ್ಣನ್ನು ತೊಳೆದರೆ, ಕಣ್ಣುಬೇನೆ ನಿವಾರಣೆಯಾಗುತ್ತದೆ.

#ನಾವು ಸೇವನೆ ಮಾಡಿದಂತಹ ಆಹಾರವು ಸರಿಯಾಗಿ ಜೀರ್ಣವಾಗದೆ ಇದ್ದರೆ, ಅದರಿಂದಾಗಿ ಅಜೀರ್ಣ ಸಮಸ್ಯೆ ಕಂಡುಬರುತ್ತದೆ. ಅಲ್ಲದೇ ಇದೇ ಸಮಸ್ಯೆಯಿಂದಾಗಿ ಗ್ಯಾಸ್, ಅಸಿಡಿಟಿ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕೂಡ ಕಾಡಲು ಶುರುವಾಗುತ್ತದೆ.ಆದರೆ ಈ ಅಜೀರ್ಣ ಸಮಸ್ಯೆ ವಿರುದ್ಧ ಹೋರಾಡಲು ಈ ಕೊತ್ತಂಬರಿ ಬೀಜವು ಅತ್ಯುತ್ತಮ ರೀತಿಯಲ್ಲಿ ಸಹಾಯ ಮಾಡುವುದು. ಇದಕ್ಕೆ ಮುಖ್ಯ ಕಾರಣ ಈ ಬೀಜಗಳಲ್ಲಿ ಅಡಗಿರುವ ಬೋರ್ನಿಯೋಲ್ ಮತ್ತು ಲಿನೂಲ್ ಸಂಯುಕ್ತಗಳು ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತವೆ.

#ಕೊತ್ತಂಬರಿ ವಿಟಮಿನ್ ಕೆ, ಸಿ ಮತ್ತು ಎ ಯಿಂದ ಸಮೃದ್ಧವಾಗಿದೆ. ಇದು ಕೂದಲನ್ನು ಬಲಪಡಿಸಲು (Hair care) ಮತ್ತು ಬೆಳೆಯಲು ಸಹಾಯ ಮಾಡುತ್ತದೆ.-ಕೊತ್ತಂಬರಿ ನೀರನ್ನು ಪ್ರತಿದಿನ ಸೇವಿಸಿದರೆ, ಅದು ಕೀಲು ನೋವನ್ನು ಕಡಿಮೆ ಮಾಡಬಹುದು.

#ಎದೆ ನೋವು : ಕೊತ್ತಂಬರಿಯನ್ನು ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ನೆನೆ ಹಾಕಿ ನಂತರ ಚೆನ್ನಾಗಿ ಕಿವುಚಿ, ಸೋಸಿ. ಹಾಲು ಸಕ್ಕರೆ ಹಾಕಿ ಕುಡಿದರೆ ತಂಪು. ಎದೆ ನೋವು ಕಡಿಮೆಯಾಗುತ್ತದೆ.

#ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ದೇಹದ ಫ್ರೀ ರಾಡಿಕಲ್ಸ್ ಗಳನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group