ಮರಗೆಣಸಿನ ಪ್ರಯೋಜನಗಳೇನು ?

ಮರಗೆಣಸಿನ ಸೇವನೆ ಮಾಡುವುದು ಕೂಡ ಒಳ್ಳೆಯ ಮಾರ್ಗವಾಗಿದೆ. ಹಾಗಾದರೆ ಮರಗೆಣಸಿನ ಪ್ರಯೋಜನಗಳೇನು ಎಂಬುದನ್ನು ನೋಡೋಣ…
#ಮೈಗ್ರೇನ್ ಇರುವವರು ಮರಗೆಣಸನ್ನು ಬೇಯಿಸಿ ತಿನ್ನುವುದು ಇಲ್ಲವೇ ಮರ ಗೆಣಸಿನ ಎಲೆಗಳು ಅಥವಾ ಅದರ ಬೇರುಗಳನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಸುಮಾರು ಎರಡು ಗಂಟೆ ನೆನೆಸಿ ಜ್ಯೂಸ್ ತಯಾರಿಸಿ ಕುಡಿಯುವುದನ್ನು ರೂಢಿಸಿಕೊಂಡರೆ ಸಮಸ್ಯೆ ದೂರವಾಗುತ್ತದೆ.
#ದೇಹದ ಎಲ್ಲಾ ಅಂಗಗಳಂತೆ ಕಣ್ಣುಗಳು ಕೂಡ ಅಷ್ಟೇ ಮುಖ್ಯ. ಕಣ್ಣುಗಳೇ ಇಲ್ಲಾಂದ್ರೆ ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಹಾಗಾಗಿ ಇದರ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ನಮ್ಮೆಲ್ಲರ ಜವಾಬ್ದಾರಿ.
#ಹೀಗಾಗಿ ಕಣ್ಣುಗಳ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ, ನಿಯಮಿತವಾಗಿ ಮರಗೆಣಸನ್ನು ಆಹಾರಕ್ರಮದಲ್ಲಿ ಸೇರಿಸಿಕೊಂಡರೆ ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿರುವುದರಿಂದ ಕಣ್ಣು ಮಂಜಾಗುವ ಸಮಸ್ಯೆ ದೂರವಾಗುತ್ತದೆ
#ಮಲಬದ್ಧತೆ, ಅಜೀರ್ಣತೆಯನ್ನು ಕಡಿಮೆ ಮಾಡುತ್ತದೆ:ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಬೇಕು. ಗ್ಯಾಸ್ಟಿಕ್ ಸಮಸ್ಯೆ, ಮಲಬದ್ಧತೆ ಹಾಗೂ ಅಜೀರ್ಣತೆಯನ್ನು ದೂರ ಮಾಡಲು ಆಹಾರದಲ್ಲಿ ಮರಗೆಣಸಿನ ಸಣ್ಣ ಸಣ್ಣ ಚೂರುಗಳನ್ನು ಮಿಶ್ರಣ ಮಾಡಿ ಸೇವಿಸಬೇಕು. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಹೊಟ್ಟೆ ಹಸಿವು ಆಗುತ್ತದೆ ಮತ್ತು ಅಜೀರ್ಣತೆ ಸಮಸ್ಯೆ ದೂರವಾಗುತ್ತದೆ.
#ದೇಹದ ತೂಕ ಇಳಿಕೆಗೆ ಸಹಾಯಕಾರಿ:ಮರಗೆಣಸಿನ ಸೇವನೆ ದೇಹದಲ್ಲಿನ ಕೊಬ್ಬಿನ ಅಂಶವನ್ನು ತೆಗೆದು ಹಾಕುತ್ತದೆ. ದೇಹದಲ್ಲಿ ಬೊಜ್ಜು ಶೇಖರಣೆ ಆಗದಂತೆ ತಡೆಯುತ್ತದೆ. ಪದೇ ಪದೇ ತಿನ್ನುವ ಬಯಕೆ ಕಡಿಮೆಯಾಗಿ ದೇಹದ ತೂಕ ನಿಯಂತ್ರಣಕ್ಕೆ ಬರುವಂತೆ ಮಾಡುತ್ತದೆ