ತಲೆಹೊಟ್ಟಿನ ನಿವಾರಣೆಗೆ ಕೆಲವು ಸಲಹೆ!

ಕೂದಲು ಮನುಷ್ಯರ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕೂದಲಿಗೆ ಹಲವಾರು ಸಮಸ್ಯೆಗಳು ಉಂಟಾಗಿ ತೊಂದರೆಗಳನ್ನು ಅನುಭವಿಸುತ್ತೇವೆ. ಇಂತಹ ತೊಂದರೆಗಳಲ್ಲಿ ಹೆಚ್ಚಾಗಿ ಕಾಡುವುದೆಂದರೆ ತಲೆಯಲ್ಲಿ ಹೊಟ್ಟು ಉಂಟಾಗಿ, ತಲೆಯ ಚರ್ಮ ಉದುರುವುದು, ತಲೆಯಲ್ಲಿ ತುರಿಕೆ ಹೀಗೆ ಅನೇಕ ರೀತಿಯಲ್ಲಿ ತೊಂದರೆಗಳು ಆಗುತ್ತವೆ. ನಮ್ಮ ಈ ಸಮಸ್ಯೆಗೆ ರಾಸಾಯನಿಕಗಳ ಮೊರೆಹೊಗುವುದಕ್ಕಿಂತ ನೈಸರ್ಗಿಕ ವಿಧಾನಗಳಾವುದಾದರು ಇವೆಯೇ ಎಂದು ನೋಡುವುದು ಉತ್ತಮ. ನೀವು ಅಂತಹ ಹುಡುಕಾಟದಲ್ಲಿದ್ದಾರೆ ಸರಿಯಾದ ಸ್ಥಳದಲ್ಲಿ ಇದ್ದೀರಿ. ನಾವಿಂದು ತಲೆ ಹೊಟ್ಟು (ಡ್ಯಾಂಡ್ರಫ್) ನಿವಾರಿಸಿಕೊಳ್ಳುವ ನೈಸರ್ಗಿಕ ವಿಧಾನಗಳನ್ನು ತಿಳಿಸಿಕೊಡುತ್ತೀದ್ದೇವೆ.

#ಬಾಳೆಹಣ್ಣನ್ನು ಸೇವಿಸುವುದರಿಂದ ಅದು ಕೂದಲನ್ನು ಆಂತರಿಕವಾಗಿ ಪೋಷಣೆ ಮಾಡುತ್ತದೆ. ಬಾಳೆಹಣ್ಣನ್ನು ಮ್ಯಾಶ್‌ ಮಾಡಿ ತಲೆಗೆ ಹಚ್ಚಿದರೆ ತಲೆ ಹೊಟ್ಟು ಕಡಿಮೆಯಾಗುವುದರ ಜತೆಗೆ ಬೆಸ್ಟ್‌ ಹೇರ್‌ ಕಂಡೀಷನರ್ ಕೂಡ ಹೌದು.

#ಹರಳೆಣ್ಣೆ ಉತ್ತಮ ಔಷಧ:ತಲೆಹೊಟ್ಟಿನ ನಿವಾರಣೆಗೆ ಹರಳೆಣ್ಣೆ ಉತ್ತಮ ಔಷಧ. ವಿಟಮಿನ್​-ಇ ಅಂಶವಿರುವ ಹರಳೆಣ್ಣೆಯನ್ನು ಹತ್ತಿಯಲ್ಲಿ ಅದ್ದಿ ಕೂದಲಿನ ಬುಡಕ್ಕೆ ಹಚ್ಚಿದರೆ ತಲೆಹೊಟ್ಟು ಸಮಸ್ಯೆಯಿಂದ ಪಾರಾಗಬಹುದು.

#ಅಲೊವೇರಾ ನೈಸರ್ಗಿಕ ತಂಪಿನ ಗುಣಗಳನ್ನು ಹೊಂದಿದ್ದು ಇದು ತುರಿಕೆಯ ನೆತ್ತಿಯನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಅಲೊವೇರಾ ಜೆಲ್ ತೆಗೆದುಕೊಂಡು ಕೂದಲಿನ ಬುಡಕ್ಕೆ ನೆತ್ತಿಗೆ ಹಚ್ಚಿ ಹಾಗೂ 15-20 ನಿಮಿಷ ಹಾಗೆಯೇ ಬಿಡಿ. ವಾರದಲ್ಲಿ ಎರಡು ಬಾರಿ ಈ ವಿಧಾನ ಅನುಸರಿಸಿ.

#ಮೆಂತೆ ಕಾಳನ್ನು ನೆನೆಸಿ ಅದನ್ನು ರುಬ್ಬಿ ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿ 30 ನಿಮಿಷ ಬಿಟ್ಟು ತಲೆಸ್ನಾನ ಮಾಡಿದರೆ ತಲೆ ಹೊಟ್ಟು ನಿವಾರಣೆಯಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group