ಮಧುಮೇಹಿಗಳಿಗೆ ಉತ್ತಮ ಈ ಒಂದು ಹಣ್ಣು!

ಫೆಬ್ರವರಿ ಮಾರ್ಚ್ ತಿಂಗಳು ಬಂತೆಂದರೆ ರಾಂಫಲ ಹಣ್ಣು ಸವಿಯಲು ಸಿಗುತ್ತದೆ. ಹಳ್ಳಗಳಲ್ಲಿ, ಕಾಡುಗಳಲ್ಲಿರುವ ರಾಂಫಲ ಮರಗಳಲ್ಲಿ ಈ ಸಮಯದಲ್ಲಿ ರಾಂಫಲ ಹಣ್ಣು ಸವಿಯಲು ಸಿಗುತ್ತವೆ. ಇದೊಂದು ಸೀಸನ್ ಹಣ್ಣಾಗಿದೆ. ಈ ಹಣ್ಣನ್ನು ಇಂಗ್ಲಿಷ್‌ನಲ್ಲಿ bullock’s heart ಎಂದು ಕರೆಯಲಾಗುವುದು.ಇದು ಮಾರುಕಟ್ಟೆಯಲ್ಲೂ ಸಿಗುತ್ತವೆ. ಈ ಹಣ್ಣುಗಳು ಕಣ್ಣಿಗೆ ಬಿದ್ದಾಗ ಸವಿಯಲು ಮರೆಯಬೇಡಿ. ಏಕೆಂದರೆ ಈ ಹಣ್ಣು ನಿಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು. ಬನ್ನಿ ಇದರಲ್ಲಿ ಯಾವೆಲ್ಲಾ ಗುಣಗಳಿವೆ ಎಂದು ನೋಡೋಣ:
#ತೂಕ ಇಳಿಸಲು ರಾಮ ಫಲ ಅತ್ಯುತ್ತಮ ಸಂಗಾತಿಯಾಗುವುದು. ತೂಕ ಇಳಿಸಲು ಬಯಸುವವರು ನಿಯಮಿತವಾಗಿ ರಾಮ ಫಲ ಹಣ್ಣನ್ನು ಸೇವಿಸಿದರೆ ದೇಹದ ತೂಕವನ್ನು ಇಳಿಸಬಹುದು. ಯಾವುದೇ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದು, ತೂಕ ಇಳಿಸುವ ಹಂಬಲದಲ್ಲಿ ಇದ್ದರೆ ಯಾವ ಪ್ರಮಾಣದಲ್ಲಿ ರಾಮ ಫಲ ಸೇವಿಸಬೇಕು ಎನ್ನುವುದನ್ನು ವೈದ್ಯರಲ್ಲಿ ಪರಿಶೀಲಿಸಿಕೊಳ್ಳಬೇಕು.
#ಮಧುಮೇಹಿಗಳಿಗೆ ಉತ್ತಮ:ಹಣ್ಣುಗಳ ವಿಷಯಕ್ಕೆ ಬಂದರೆ, ಮಧುಮೇಹಿಗಳು ಏನು ತಿನ್ನಬೇಕು? ಏನು ತಿನ್ನಬಾರದು? ಎಂದು ಗೊಂದಲಗಳಿವೆ. ರಾಮ ಫಲ ಒಂದು ಹೈಪರ್ ಸ್ಥಳೀಯ ಹಣ್ಣು. ಇದು ರಕ್ತದಲ್ಲಿನ ಗ್ಲೂಕೋಸ್ನ್ನು ಕಡಿಮೆ ಮಾಡುವ ಗುಣವನ್ನು ಹೊಂದಿರುವುದರಿಂದ ಮಧುಮೇಹ ಪೀಡಿತರಿಗೆ ಇದು ಪ್ರಯೋಜನಕಾರಿ ಎಂದು ಹೇಳಬಹುದು. ಇದು ಮಧುಮೇಹಕ್ಕೆ ಪರಿಪೂರ್ಣವಾದ ಖನಿಜಗಳನ್ನು ಹೊಂದಿರುತ್ತದೆ. ಇದು ಕ್ಯಾನ್ಸರ್ ವಿರೋಧಿ ಗುಣಗಳನ್ನು ಸಹ ಹೊಂದಿದೆ. ಸಿಹಿಯ ವಿಷಯಕ್ಕೆ ಬಂದರೆ, ಸೀತಾಫಲಕ್ಕಿಂತ ರಾಮಹಣ್ಣು ಕಡಿಮೆ ಸಿಹಿಯಾಗಿರುತ್ತದೆ. ಅದಕ್ಕಾಗಿಯೇ ಮಧುಮೇಹಿಗಳು ಈ ಹಣ್ಣನ್ನು ತಿನ್ನಬಹುದು. ಇದರ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ರಾಮ ಫಲದಲ್ಲಿ ವಿಟಮಿನ್ ಬಿ ಮತ್ತು ವಿಟಮಿನ್ ಸಿ ಅಧಿಕವಾಗಿದೆ.
#ಇನ್ನೂ ಕೆಲವು ಅಧ್ಯಯನಗಳ ಪ್ರಕಾರ ಕೆಲವು ರೀತಿಯ ಯಕೃತ್ತು ಮತ್ತು ಸ್ತನ ಕ್ಯಾನ್ಸರ್ ಕೋಶಗಳನ್ನು ಈ ಹಣ್ಣಿನ ಸಾರ ಕೊಲ್ಲುತ್ತವೆ. ಈ ಜೀವಕೋಶಗಳು ಕೆಲವು ಕಿಮೊಥೆರಪಿ ಔಷಧಿಗಳಲ್ಲಿ ಸಹಾಯ ಮಾಡುತ್ತದೆ ಎನ್ನಲಾಗುತ್ತದೆ.
#ವಿಟಮಿನ್‌ಗಳ ಆಗರ:ಅದರಲ್ಲೂ 30 ವರ್ಷ ಮೇಲ್ಪಟ್ಟವರಲ್ಲಿ ಮೊಡವೆ ಸಮಸ್ಯೆ ಇದ್ದರೆ ದಿನಾ ಒಂದು ರಾಂಫಲ ಹಣ್ಣು ತಿನ್ನುತ್ತಾ ಬಂದರೆ ಮೊಡವೆ ದೂರವಾಗುವುದು. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಈ ಹಣ್ಣು ಮಕ್ಕಳಿಗೆ ಕೂಡನೀಡಬಹುದಾಗಿದೆ. ಅದರ ಬೀಜ ನುಂಗಿದರೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಈ ಹಣ್ಣು ಈ ಸೀಸನ್‌ನಲ್ಲಿ ಎಲ್ಲಿ ಕಂಡರೂ ಕೊಂಡು ತಿನ್ನಿ, ಸೀಸನ್‌ನಲ್ ಹಣ್ಣುಗಳಲ್ಲಿ ಆ ಕಾಲಕ್ಕೆ ತಕ್ಕಂತೆ ಆರೋಗ್ಯವನ್ನು ಜೋಪಾನ ಮಾಡುವ ಗುಣವಿರುತ್ತದೆ.
#ಲಕ್ಷ್ಮಣ ಫಲದ ಹೂವುಗಳು ಮತ್ತು ಅವುಗಳ ಮೊಗ್ಗುಗಳು ಕೆಮ್ಮನ್ನು ನಿವಾರಿಸುತ್ತದೆ. ಅಲ್ಲದೇ, ಜ್ವರ, ಭೇದಿ, ಹೊಟ್ಟೆ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತವೆ ಎಂಬುದು ಸಾಬೀತಾಗಿದೆ.