ದೇಹದ ದುರ್ವಾಸನೆ ತಡೆಯಲು ಕೆಲವು ಸಲಹೆ!

ಬೇಸಿಗೆಯಲ್ಲಿ ಬೆವರು ಸ್ವಲ್ಪ ಹೆಚ್ಚು ಬರುತ್ತದೆ. ಕೆಲವರಿಗೆ ಮೈ ತುಂಬಾ ದುರ್ವಾಸನೆ ಬೀರುತ್ತದೆ. ನಮ್ಮ ಬೆವರಿನ ವಾಸನೆ ನಮ್ಮ ಸಮೀಪ ನಿಲ್ಲುವವರಿಗೆ ಕಿರಿಕಿರಿ ಉಂಟು ಮಾಡಿದರೆ, ಇದರಿಂದ ನಮಗೆ ಮುಜುಗರ ಉಂಟಾಗುವುದು.ಬೆವರಿನ ದುರ್ವಾಸನೆಯನ್ನು ಈ ಕೆಳಗಿನ ವಿಧಾನಗಳಿಂದ ಕಡಿಮೆ ಮಾಡಬಹುದು:

#ಹೆಚ್ಚು ಎಣ್ಣೆಯುಕ್ತ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸದಿರಲು ಪ್ರಯತ್ನಿಸಿ ಏಕೆಂದರೆ ಇವುಗಳು ಹೆಚ್ಚಿನ ಬೆವರುವಿಕೆಗೆ ಕಾರಣವಾಗಬಹುದು ಮತ್ತು ದೇಹದ ವಾಸನೆಯನ್ನು ಕೊಲ್ಲಿಯಲ್ಲಿ ಇರಿಸಲು ಸಿಂಥೆಟಿಕ್ ಬಟ್ಟೆಗಳಿಂದ ಮಾಡಿದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ ಎಂದು ತಜ್ಞರು ಹೇಳುತ್ತಾರೆ.

#ನಿಂಬೆ ಸಿಪ್ಪೆ:ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿರುವ ನಿಂಬೆ ಸಿಪ್ಪೆ ಬೆವರಿನ ವಾಸನೆಯನ್ನು ಹೋಗಲಾಡಿಸುತ್ತದೆ. ನಿಂಬೆ ಸಿಪ್ಪೆಯ ಪುಡಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದರಲ್ಲಿ ರೋಸ್ ವಾಟರ್ ಮಿಶ್ರಣ ಮಾಡಿ. ಈಗ ಅದನ್ನು ಅಂಡರ್ ಆರ್ಮ್ಸ್ ಮೇಲೆ ಹಚ್ಚಿ ಮತ್ತು ಲಘುವಾಗಿ ಉಜ್ಜಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ನಂತರ ತಣ್ಣೀರಿನಿಂದ ಸ್ವಚ್ಛಗೊಳಿಸಿ.

#ಪ್ರತಿ ದಿನ ಎರಡು ಬಾರಿ ಬಟ್ಟೆಗಳನ್ನು ಬದಲಿಸಿ. ಏಕೆಂದರೆ ಬೆವರಿರುವ ಬಟ್ಟೆಯಲ್ಲಿ ಬ್ಯಾಕ್ಟೀರಿಯಾಗಳಿರುತ್ತದೆ. ಇದು ದೇಹದ ದುರ್ಗಂಧವನ್ನು ಹೆಚ್ಚಿಸುತ್ತದೆ

#ಆಲೂಗಡ್ಡೆ ರಸ:ಆಲೂಗಡ್ಡೆ ಸೌಂದರ್ಯವರ್ಧಕವೂ ಹೌದು. ಮುಖದ ಮೇಲಿನ ಕಪ್ಪು ಕಲೆಯನ್ನು ಹೋಗಲಾಡಿಸಲು ಆಲೂಗಡ್ಡೆ ರಸವನ್ನು ಬಳಸಲಾಗುತ್ತದೆ. ಕಂಕುಳಲ್ಲಿ ದುರ್ವಾಸನೆ ಕಂಡು ಬಂದರೆ ಆಲೂಗೆಡ್ಡೆಯ ತುಂಡನ್ನು ತೆಗೆದುಕೊಂಡು ಆ ಭಾಗಕ್ಕೆ ಉಜ್ಜಿ. 10 ನಿಮಿಷಗಳ ಬಿಟ್ಟು ತಣ್ಣನೆಯ ನೀರಿನಿಂದ ತೊಳೆಯಿರಿ. ನಂತರ ಬಟ್ಟೆಗಳನ್ನು ಧರಿಸಿ.

#ಕೊಬ್ಬರಿ ಎಣ್ಣೆ:ತ್ವಚೆ ಮತ್ತು ಕೂದಲಿಗೆ ಕೊಬ್ಬರಿ ಎಣ್ಣೆಗಿಂತ ಉತ್ತಮ ತೈಲ ಇನ್ನೊಂದಿಲ್ಲ. ಇದರಲ್ಲಿರುವ ಮಧ್ಯಮ-ಸಂಕಲೆಯ ಕೊಬ್ಬಿನ ಆಮ್ಲಗಳು ಪ್ರಬಲ ಅತಿಸೂಕ್ಷ್ಮಜೀವಿ ನಿವಾರಕಗಳೂ ಆಗಿವೆ. ಈ ಎಣ್ಣೆಯ ವಾತಾವರಣದಲ್ಲಿ ವಾಸನೆ ಬರಿಸುವ ಬ್ಯಾಕ್ಟೀರಿಯಾಗಳು ಬದುಕಲಾರವು. ಅಲ್ಲದೇ ತ್ವಚೆಯ ಪಿಎಚ್ ಸಮತೋಲನವನ್ನೂ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group