ಹಾವಿನ ಕಡಿತಕ್ಕೆ ಒಳಗಾದಗ ಹೀಗೆ ಮಾಡಿ!

ಹಾವುಗಳನ್ನು ನೋಡಿದರೆ ಭಯ ಪಡದೇ ಇರುವಂತಹವರು ತುಂಬಾ ಕಡಿಮೆ. ಹಾವುಗಳ ಲೋಕವನ್ನು ತಿಳಿದುಕೊಂಡಿರುವವರಿಗೆ ಇದರಿಂದ ಭಯವಾಗದೆ ಇದ್ದರೂ ಕೆಲವೊಂದು ಸಲ ಹಾವು ಕಡಿತದಿಂದಾಗಿ ತುಂಬಾ ನೋವು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಇದರಿಂದ ಕಡಿದಿರುವಂತಹ ಹಾವು ವಿಷಕಾರಿಯೇ ಅಥವಾ ನಿರ್ವಿಷವಾಗಿರುವುದೇ ಎಂದು ತಿಳಿಯುವುದು ಅತೀ ಅಗತ್ಯ. ಇದನ್ನು ತಿಳಿದುಕೊಂಡರೆ ಆಗ ಹಾವು ಕಡಿತದಿಂದಾಗಿ ಉಂಟಾಗುವಂತಹ ಪ್ರಾಣಹಾನಿಯನ್ನು ಒಂದು ಹಂತದಲ್ಲಿ ತಪ್ಪಿಸಬಹುದಾಗಿದೆ.

#ಕಡಿತಕ್ಕೊಳಗಾದ ಅಂಗವನ್ನು ನಿಶ್ಚಲಗೊಳಿಸುವುದು ಅತಿ ಮುಖ್ಯ. ಮುರಿದ ಮೂಳೆಯನ್ನು ಅಥವಾ ಫ್ರಾಕ್ಚರ್ ಅನ್ನು ಹೇಗೆ ನಿಶ್ಚಲಗೊಳಿಸಲಾಗುತ್ತದೆ ಹಾಗೆ ನಿಶ್ಚಲಗೊಳಿಸುವುದು ಮುಖ್ಯ. ಅದನ್ನು ಮಾಡಲು ಬ್ಯಾಂಡೇಡ್ ಮುಂತಾದವುಗಳನ್ನು ಬಳಸಬಹುದು.ರಕ್ತ ಸಂಚಲನವನ್ನು ಕಡಿಮೆ ಮಾಡುವುದು ಅಥವಾ ದಾರ ಕಟ್ಟುವುದು ಇದನ್ನು ಮಾಡಬಾರದು.

#ಸೂಜಿಯಿಲ್ಲದ ಸಿರಂಜಿಯಿಂದ ಹಾವು ಕಚ್ಚಿದ ಜಾಗದಲ್ಲಿ ಇಟ್ಟು ರಕ್ತವನ್ನು ಎಳೆಯಬೇಕು. ಮೊದಲು ರಕ್ತ ಕಪ್ಪು ಬಣ್ಣದಲ್ಲಿರುತ್ತದೆ. ಅದು ವಿಷಯುಕ್ತ ರಕ್ತವಾಗಿರುತ್ತದೆ. ಹೀಗೆ ಎರಡು ಮೂರು ಸಾರಿ ಎಳೆಯಬೇಕು.

#ಕಡಿತವಾದ ಮುಖ್ಯ ಜಾಗದ ಮೇಲೆ ಕನ್ಸ್‍ಟ್ರಕ್ಟಿವ್ ಬ್ಯಾಂಡೇಜ್‍ನನ್ನು ಮೊದಲು ಹಾಕಬೇಕು(20 ನಿಮಿಷಗಳಿಗಿಂತ ಹೆಚ್ಚು ಸಮಯ ಅದನ್ನು ಸತತವಾಗಿ ಹಾಕಬಾರದು).

#ಹಾವು ಕಚ್ಚಿದ ಸಂದರ್ಭದಲ್ಲಿ ಕಚ್ಚಿದ ಜಾಗಕ್ಕೆ ಯಾವುದಾದರೂ ಚಾಕುವಿಂದ ಸ್ವಲ್ಪ ಗಾಯವನ್ನು ದೊಡ್ಡದು ಮಾಡಿ ವಿಷವನ್ನು ಹೊಂದಿರುವ ರಕ್ತವನ್ನು ಹೊರಹಾಕಬೇಕು. ಇದರ ಬಳಿಕ ಪೊಟಾಶಿಯಂ ಪಾರಾಗ್ನೆಟ್ ಹುಡಿಯನ್ನು ಹಾಕಿಕೊಳ್ಳಿ. ಹಿಂದಿನ ಕಾಲದಲ್ಲಿ ಹಾವು ಕಚ್ಚಿದಾಗ ಗಾಯಕ್ಕೆ ಬಾಯಿ ಹಾಕಿ ವಿಷವನ್ನು ಹೀರಿ ತೆಗೆಯಲಾಗುತ್ತಾ ಇತ್ತು. ಆದರೆ ವಿಷ ಹೀರುವವರಿಗೆ ಇದು ಅಪಾಯಕಾರಿ. ಬೆಟ್ಟ ಪ್ರದೇಶದಲ್ಲಿರುವ ಕೆಲವು ತಜ್ಞರು ಈಗಲೂ ಇದೇ ತಂತ್ರವನ್ನು ಅನುಸರಿಸುತ್ತಾರೆ.

ಗಮನಿಸಿ: ವಿಷ ಶರೀರದ ಎಲ್ಲಾಭಾಗಗಳಿಗೆ ಸೇರಲು ಮೂರು ಗಂಟೆ ಸಮಯ ತೆಗೆದುಕೊಳ್ಳಬಹುದು. ಅಷ್ಟರ ಒಳಗೆ ಆ ವ್ಯಕ್ತಿಗೆ ಚಿಕಿತ್ಸೆ ನೀಡದಿದ್ದರೆ ಬದುಕಲಾರ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group