ಉರಿ ಮೂತ್ರ ಸಮಸ್ಯೆಗೆ ಸುಲಭ ಪರಿಹಾರ!

ಮೂತ್ರವನ್ನು ತುಂಬಾ ಸಮಯ ತಡೆ ಹಿಡಿದಾಗ: ಮೂತ್ರ ವಿಸರ್ಜನೆಗೆ ಹೋಗದೆ ತುಂಬಾ ಸಮಯ ತಡೆ ಹಿಡಿದರೆ ಮೂತ್ರ ವಿಸರ್ಜನೆ ಬಳಿಕ ಉರಿ ಉಂಟಾಗುವುದು ಸಾಕಷ್ಟು ನೀರು ಕುಡಿಯದಿದ್ದರೆ: ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ದೇಹದಲ್ಲಿ ಕಶ್ಮಲ ಹಾಗೇ ಉಳಿದು ಮೂತ್ರ ವಿಸರ್ಜನೆ ಮಾಡಿದ ಬಳಿಕ ಉರಿ ಉಂಟಾಗುವುದು.ಈ ಕಾರಣಗಳಿಂದ ಉರಿ ಮೂತ್ರ ಸಮಸ್ಯೆ ಉಂಟಾದರೆ ಸಾಕಷ್ಟು ನೀರು ಕುಡಿದರೆ ಸರಿಯಾಗುವುದು. ದಿನಾ ಅಥವಾ 3-4 ಬಾರಿ ಎಳನೀರು ಕುಡಿಯುವುದರಿಂದ ಈ ಸಮಸ್ಯೆ ತಡೆಗಟ್ಟಬಹುದು.
ಪರಿಹಾರಗಳು:
#ಸೋರೆಕಾಯಿಯನ್ನು ಉರಿ ಮೂತ್ರ ನಿವಾರಣೆಗೆ ಮನೆ ಮದ್ದಾಗಿ ಬಳಸಬಹುದು. ಒಂದು ಲೋಟ ಸೋರೆಕಾಯಿ ಜ್ಯೂಸ್ ಮಾಡಿಕೊಂಡು ಅದಕ್ಕೆ ಒಂದು ಹೋಳು ಲಿಂಬೆ ರಸವನ್ನು ಬೆರೆಸಿ ಊಟದ ನಂತರ ಅರ್ಧ ಗಂಟೆ ಬಿಟ್ಟು ಕುಡಿಯಬೇಕು. ಈ ರೀತಿ ಎರಡರಿಂದ ಮೂರು ದಿನಗಳ ಕಾಲ ಮಾಡುವುದರಿಂದ ನಿವಾರಣೆ ಆಗುತ್ತದೆ.
#ನಿರಂತರ ಉರಿಮೂತ್ರ ಸಮಸ್ಯೆ ಕಾಡುತ್ತಿದ್ರೆ ಪ್ರತಿನಿತ್ಯ ದಾಳಿಂಬೆ ಜ್ಯೂಸ್ ಕುಡಿಯಿರಿ. ಇದರಿಂದ ಈ ಸಮಸ್ಯೆ ದೂರವಾಗುವುದು.
#ಹೆಚ್ಚು ನೀರು ಕುಡಿಯಿರಿ: ಉರಿಮೂತ್ರದ ಸಮಸ್ಯೆ ಕಡಿಮೆಯಾಗಬೇಕೆಂದರೆ ನೀವು ಮೊದಲು ಮಾಡಬೇಕಾದ ಕೆಲಸ ಹೆಚ್ಚೆಚ್ಚು ನೀರು ಕುಡಿಯಬೇಕು. ಅದು ನೀರು, ಎಳನೀರು, ಜ್ಯೂಸ್, ನೀರು ತುಂಬಿದ ತರಕಾರಿಗಳು ಯಾವುದೇ ರೂಪದಲ್ಲಾದರೂ ಸರಿ. ನೀರಿನಂಶವುಗಳ್ಳ ಹಣ್ಣು (Fruits), ತರಕಾರಿ (Vegetables)ಗಳನ್ನು ಹೆಚ್ಚು ಕುಡಿಯುವುದರಿಂದಲೂ ಉರಿಮೂತ್ರದ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು.
#ಉರಿ ಮೂತ್ರ ನಿವಾರಣೆಗೆ ಎಳನೀರು ತುಂಬಾ ಸಹಾಯಕಾರಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಎಳನೀರನ್ನು ಕುಡಿಯಿರಿ. ಹಾಗೆಯೇ ಒಂದು ಗಂಟೆಗಳ ಕಾಲ ಯಾವುದೇ ಆಹಾರವನ್ನು ಸೇವಿಸಬೇಡಿ. ನಂತರ ರಾತ್ರಿ ಮಲಗುವ ಸಮಯದಲ್ಲಿ ಮತ್ತೆರಡು ಎಳನೀರುನ್ನು ಕುಡಿದು ಮಲಗಿ. ಈ ರೀತಿ ಮಾಡುವುದರಿಂದ ಉರಿ ಮೂತ್ರದ ಸಮಸ್ಯೆಯು ದೂರವಾಗುತ್ತದೆ.
#ತಿಳಿ ಮಜ್ಜಿಗೆಗೆ ನಿಂಬೆ ರಸ ಹಾಗೂ ಕಲ್ಲು ಸಕ್ಕರೆ ಮಿಕ್ಸ್ ಮಾಡಿ ಪ್ರತಿನಿತ್ಯ ಕುಡಿಯುವುದರಿಂದ ಕೂಡ ಉರಿಮೂತ್ರ ಸಮಸ್ಯೆಯನ್ನು ಹೋಗಲಾಡಿಸಬಹುದು.