ಚಳಿಗಾಲದಲ್ಲಿ ನಿಮ್ಮ ಕೂದಲಿನ ಆರೈಕೆಗೆ ಈ ಸಲಹೆ!

ನಿಮ್ಮ ಕೂದಲಿಗೆ ನಿಯಮಿತವಾಗಿ ಎಣ್ಣೆ (Hair Care Oil) ಹಚ್ಚುವುದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ. ಇದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದರ ಇದರ ಇನ್ನಷ್ಟು ಸಲಹೆ ಸೂಚನೆಗಳನ್ನು ತಿಳಿಯೋಣ.

#ತೆಂಗಿನಕಾಯಿ ಮತ್ತು ಮೆಂತ್ಯ ಎಣ್ಣೆ:>> ಇದಕ್ಕಾಗಿ ಮೊದಲು ನಿಮಗೆ 500 ಮಿಲಿ ತೆಂಗಿನ ಎಣ್ಣೆ ಬೇಕಾಗುತ್ತದೆ. >> ಇದರ ನಂತರ 1/2 ಕಪ್ ಮೆಂತ್ಯ ಬೇಕಾಗುತ್ತದೆ. >> ತೆಂಗಿನ ಎಣ್ಣೆ ಮತ್ತು ಮೆಂತ್ಯ ಕಾಳುಗಳನ್ನು ಒಂದು ಜಾರ್ನಲ್ಲಿ ಹಾಕಿ. >> ಸುಮಾರು 1 ವಾರ ಬಿಸಿಲಿನಲ್ಲಿ ಇರಿಸಿ. >> ಒಂದು ವಾರದ ನಂತರ ಈ ಎಣ್ಣೆ ಸಿದ್ಧವಾಗುತ್ತದೆ. >> ನೀವು ಈ ಎಣ್ಣೆಯನ್ನು ವಾರಕ್ಕೆ 2 ರಿಂದ 3 ಬಾರಿ ಬಳಸಬಹುದು.

#ತೆಂಗಿನಕಾಯಿ ಮತ್ತು ಮೆಂತ್ಯ ಎಣ್ಣೆ ಪ್ರಯೋಜನಗಳು:ತೆಂಗಿನ ಎಣ್ಣೆಯು ಕೂದಲನ್ನು ತೇವಗೊಳಿಸುತ್ತದೆ. ಮೆಂತ್ಯ ಕೂದಲು ಉದುರುವುದನ್ನು ತಡೆಯುತ್ತದೆ. ಇದು ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

#ಹೆಚ್ಚಿನ ಸಂದರ್ಭದಲ್ಲಿ ನಾವು ಮನೆಯಲ್ಲಿರುವಾಗ ತಲೆಕೂದಲನ್ನು ಗಂಟುಕಟ್ಟಿ ಇಡುತ್ತೇವೆ. ಇದರಿಂದ ನಮಗೆ ತಿಳಿಯದೆ ನಮ್ಮ ಕೂದಲಿಗೆ ಹೆಚ್ಚಿನ ಘಾಸಿ ಆಗುವ ಸಾಧ್ಯತೆ ಇದೆ. ಅದರಲ್ಲೂ ಮಳೆಗಾಲದಲ್ಲಿ ಒದ್ದೆ ತಲೆಯನ್ನು ಈ ರೀತಿ ಗಂಟು ಕಟ್ಟುವ ಅಭ್ಯಾಸ ನಿಮಗಿದ್ದರೆ ತಕ್ಷಣಕ್ಕೆ ಅದನ್ನು ಬಿಟ್ಟು ಬಿಡಿ. ಇದರಿಂದ ಕೂದಲು ಉದುರುವಿಕೆಯ ಮತ್ತು ತಲೆಹೊಟ್ಟಿನ ಸಮಸ್ಯೆ ಎದುರಾಗಬಹುದು. ಅನಿವಾರ್ಯ ಸಂದರ್ಭಗಳಲ್ಲಿ ಕೂದಲು ಅರೆಬರೆ ಒಣಗಿದಾಗ ಗಂಟು ಕಟ್ಟಿಕೊಳ್ಳುವ ಸಂದರ್ಭ ಎದುರಾದರೆ ಸಡಿಲವಾಗಿ ಕಟ್ಟಿ ಇಂದಿಗೂ ಕೂದಲಿಗೆ ಹೆಚ್ಚಿನ ಒತ್ತಡವನ್ನು ನೀಡದಿರಿ.

#ದಾಸವಾಳ ಮತ್ತು ಕೊಬ್ಬರಿ ಎಣ್ಣೆಕೇರಳದಲ್ಲಿ ಮಹಿಳೆಯರು ಉದ್ದ ಹಾಗೂ ನೈಸರ್ಗಿಕ ತಲೆಗೂದಲು ಹೊಂದಿರಲು ಅವರು ಹೆಚ್ಚಾಗಿ ಉಪಯೋಸುವ ದಾಸವಾಳ ಮತ್ತು ಕೊಬ್ಬರಿ ಎಣ್ಣೆಯ ಬಳಕೆ ಎಂದು ಅರ್ಥೈಸಿಕೊಳ್ಳಬಹುದು. ದಾಸವಾಳದ ನಿಯಮಿತ ಉಪಯೋಗದಿಂದ ಕೂದಲು ಬೇಗನೇ ಬಿಳಿಯಾಗುವುದನ್ನು, ತಲೆಹೊಟ್ಟು ಬರುವುದನ್ನು ಹಾಗೂ ಉದುರುವಿಕೆಯನ್ನು ತಡೆಗಟ್ಟಬಹುದು. ವಿಧಾನ: ದಾಸವಾಳ ಹೂವಿನ ಎಸಳುಗಳನ್ನು ಜಜ್ಜಿ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಚೆನ್ನಾಗಿ ಕುದಿಸಿ ತಣಿಸಿಟ್ಟುಕೊಳ್ಳಬೇಕು. ತಣಿದ ಈ ಎಣ್ಣೆಯ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಬೇಕು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group