ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪರಿಹಾರ ಹೊಂದಲು ಇಲ್ಲಿವೇ ಸಲಹೆ!

ನಮ್ಮ ಕಿಡ್ನಿಯಲ್ಲಿ ಸಂಗ್ರಹಗೊಂಡ ಕೊಳಕು ಅಂಶವವನ್ನು ಮೂತ್ರದ ರೂಪದಲ್ಲಿ ದೇಹದಿಂದ ಹೊರಹಾಕುತ್ತದೆ. ನಮ್ಮ ಕಿಡ್ನಿ ಮಾಡುವ ಪ್ರಮುಖ ಕಾರ್ಯ ಇದಾಗಿದೆ. ನಮ್ಮ ಕಿಡ್ನಿಯನ್ನು ಆರೋಗ್ಯಕರವಾಗಿರಿಸಬೇಕು ಎಂದಾದಲ್ಲಿ ನೀವು ಸಾಕಷ್ಟು ನೀರು ಸೇವನೆಯನ್ನು ಮಾಡಬೇಕು. ಇದರಿಂದ ನಮ್ಮ ಕಿಡ್ನಿಯಲ್ಲಿ ಸಂಗ್ರಹಗೊಂಡಿರುವ ವಿಷಕಾರಿ ಅಂಶಗಳು ಮೂತ್ರ ರೂಪದಲ್ಲಿ ಹೊರಹೋಗಿ ಕಿಡ್ನಿ ಸ್ವಾಸ್ಥ್ಯವಾಗಿರುತ್ತದೆ. ನಿಮ್ಮ ಕಿಡ್ನಿಯಲ್ಲಿ ಸಂಗ್ರಹಗೊಂಡಿರುವ ಕಲ್ಮಶ ಅಂಶಗಳು ನೀರಿನ ವಿತರಣೆ ಕಡಿಮೆಯಾದಾಗ ದೇಹದಿಂದ ಹೊರಹೋಗದೆ ಕಲ್ಲಾಗಿ ಮಾರ್ಪಡುತ್ತದೆ ಇದನ್ನೇ ಕಿಡ್ನಿ ಸ್ಟೋನ್ ಎಂದು ಕರೆಯುತ್ತಾರೆ.ಈ ಸಮಯದಲ್ಲಿ ನಿಮ್ಮ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಇಲ್ಲಿ ಕೆಲವೊಂದು ಆಹಾರಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ಇವುಗಳ ನಿಯಮಿತ ಸೇವನೆಯಿಂದ ನಿಮ್ಮ ಕಿಡ್ನಿಯ ಆರೋಗ್ಯವನ್ನು ನಿಮಗೆ ಕಾಪಾಡಿಕೊಳ್ಳಬಹುದಾಗಿದೆ.
#ಅರ್ಧ ಗ್ಲಾಸ್ ನೀರು,ನಾಲ್ಕು ಚಮಚ ಬೀಟ್ರೂಟ್ ಜ್ಯೂಸ್,ಎರಡು ನಿಂಬೆ ರಸ.
ಮಾಡುವ ವಿಧಾನ:ಮೊದಲು ಅರ್ಧ ಲೋಟ ನೀರು ತೆಗೆದುಕೊಳ್ಳಿ. ಈಗ ಅದರಲ್ಲಿ ಬೀಟ್ರೂಟ್ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ರಾತ್ರಿಯಲ್ಲಿ ಆಹಾರವನ್ನು ತಿನ್ನುವ ಮೊದಲು ಪ್ರತಿದಿನ ಈ ರಸವನ್ನು ಕುಡಿಯಿರಿ. ಕೆಲವೇ ದಿನಗಳಲ್ಲಿ ನೀವು ಮೂತ್ರಪಿಂಡದ ಕಲ್ಲುಗಳಿಂದ ಪರಿಹಾರ ಪಡೆಯುತ್ತೀರಿ.
#ತುಳಸಿ ಎಲೆಗಳು:ತುಳಸಿ ಎಲೆಗಳು ಸಾಮಾನ್ಯವಾಗಿ ಮೂತ್ರದ ಯಾವುದೇ ತೊಂದರೆಗೆ ತುಳಸಿ ಉತ್ತಮವಾಗಿದೆ. ಶೀತದಿಂದ ಹಿಡಿದು ಜ್ವರ, ಶ್ವಾಸ, ಮೂತ್ರಪಿಂಡಗಳ ಕಲ್ಲಿಗೂ ಉತ್ತಮವಾಗಿದೆ. ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕ ಗುಣ ಮೂತ್ರಪಿಂಡಗಳ ಕಲ್ಲುಗಳನ್ನು ಹೊರಹಾಕಲು ಸಮರ್ಥವಾಗಿವೆ. ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು ಈ ಆಮ್ಲದಲ್ಲಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ. ಕಲ್ಲುಗಳು ಕರಗುತ್ತಾ ಹೋದಂತೆ ನೋವು ಸಹಾ ಕಡಿಮೆಯಾಗುತ್ತದೆ.
#ಬಾರ್ಲಿ ನೀರು:ಬಾರ್ಲಿಯನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಂಬಲಾಗಿದೆ. ಬಾರ್ಲಿ ನೀರಿನಲ್ಲಿ ಕಂಡುಬರುವ ಪೋಷಕಾಂಶಗಳು ಕಲ್ಲುಗಳನ್ನು ತೊಡೆದುಹಾಕಲು ಬಹಳ ಪರಿಣಾಮಕಾರಿ. ಕಿಡ್ನಿ ಸಮಸ್ಯೆ ಇರುವವರು ಇದನ್ನು ಪ್ರತಿದಿನ ಸೇವಿಸಬೇಕು. ಇದಕ್ಕಾಗಿ ಬಾರ್ಲಿಯನ್ನು ನೀರಿನಲ್ಲಿ ನೆನೆಸಿ ಇಟ್ಟುಕೊಳ್ಳಿ. ಈ ನೀರನ್ನು ಕುಡಿಯುವುದರಿಂದ ಈ ಸಮಸೆಯಿಂದ ಪರಿಹಾರ ಪಡೆಯಬಹುದು.
#ದಿನಕ್ಕೆ ಕನಿಷ್ಠ 2 ರಿಂದ 3 ಲೀ. ನೀರು ಕುಡಿಯಬೇಕು. ಆಹಾರದಲ್ಲಿ ಉಪ್ಪು 5 ಗ್ರಾಂ, ಮಾಂಸಾಹಾರ 170 ರಿಂದ 250 ಗ್ರಾಂ ಮೀರದಂತೆ ಸೇವಿಸಬೇಕು. ವಿಟಮಿನ್ ಸಿ, ಕ್ಯಾಲ್ಷಿಯಂ ಸಪ್ಲಿಮೆಂಟ್‌ಗಳು, ಮುಖ್ಯವಾಗಿ ಕೆಲವು ಮಾತ್ರೆಗಳನ್ನು ವೈದ್ಯರ ಸಲಹೆಯ ಮೇರೆಗೇ ತೆಗೆದುಕೊಳ್ಳಬೇಕು. ಆಹಾರದಲ್ಲಿ ದಿನಕ್ಕೆ 1000 ದಿಂದ 1200 ಮಿ.ಗ್ರಾಂ ಕ್ಯಾಲ್ಷಿಯಂ ಇರುವ ಹಾಗೆ ಸೇವಿಸಬೇಕು. ತಂಪು ಪಾನೀಯಗಳನ್ನು ಸೇವಿಸಬಾರದು.