ಅರೆ ತಲೆನೋವು ಕಡಿಮೆಯಾಗಲು ಹೀಗೆ ಮಾಡಿ!

ಮನುಷ್ಯನಿಗೆ ತಲೆನೋವು ಎನ್ನುವುದು ಆತ ಯಾವುದಾದರೂ ಒಂದು ವಿಚಾರದ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡಿದಾಗ ಬರುತ್ತದೆ ಅದರಲ್ಲೂ ಅರ್ಧ ತಲೆನೋವು ಬಂತು ಎಂದರೆ ನಾವು ಮಾನಸಿಕವಾಗಿ ತುಂಬಾನೆ ಹಿಂಸೆಯನ್ನು ಅನುಭವಿಸುತ್ತೇವೆ ಈ ಅರೆ ತಲೆನೋವನ್ನು ಸಹಿಸಿಕೊಳ್ಳಲು ಆಗದಷ್ಟು ನೋವು ಕೊಡುತ್ತದೆ ಇಂತಹ ಅರ್ಧ ತಲೆನೋವಿಗೆ ಮನೆಯಲ್ಲೇ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗಾದರೆ ಅರ್ಧ ತಲೆ ನೋವಿಗೆ ಮನೆ ಮದ್ದು ಯಾವುದು ಮತ್ತು ಅದನ್ನು ಹೇಗೆ ಮಾಡಬೇಕು ಎನ್ನುವುದನ್ನು ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.
#ಶುಂಠಿ ನಿಂಬೆ ರಸ ಉಪ್ಪು ಮಾಡುವ ವಿಧಾನ ಮೊದಲಿಗೆ ಶುಂಠಿಯನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಚೆನ್ನಾಗಿ ತೊಳೆದು ನಂತರ ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು ಅದಾದಮೇಲೆ ಅದಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಹಾಗೂ ಉಪ್ಪು ಎಲ್ಲವನ್ನೂ ಹಾಕಿ ಮಿಶ್ರಣ ಮಾಡಬೇಕು ನಂತರ ಈ ಮಿಶ್ರಣವನ್ನು ನಾವು ಆಗಿದ್ದು ಜಗಿದು ತಿನ್ನುವುದರಿಂದ ನಮ್ಮ ತಲೆನೋವಿನ ಸಮಸ್ಯೆ ನಿವಾರಣೆ ಆಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ.
#ಹೊಟ್ಟ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡರೆ ನಿಮ್ಮ ಬಹುತೇಕ ಸಮಸ್ಯೆ ಕಡಿಮೆ ಆದಂತೆ. ಅಂದರೆ, ಹೊಟ್ಟೆಯಲ್ಲಿ ಪಿತ್ತ ಕಡಿಮೆ ಆದರೆ, ತಲೆನೋವು ಕಡಿಮೆ ಆಗುತ್ತದೆ. ಹೊಟ್ಟೆಯಲ್ಲಿ ಪಿತ್ತ ಕಡಿಮೆ ಆಗಲು ಬೆಳಗ್ಗೆ ಎದ್ದು ನಿತ್ಯ ಬಿಸಿನೀರು ಕುಡಿಯಿರಿ. ಆಗಲೂ ಕಡಿಮೆ ಆಗಿಲ್ಲ ಎಂದರೆ, ಬಿಳಿ ಈರುಳ್ಳಿ ಮತ್ತು ಜೀರಿಗೆಯನ್ನು ತೆಗೆದುಕೊಳ್ಳಿ. ಮೊದಲು ಜೀರಿಗೆಯನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ನಂತರ ಈರುಳ್ಳಿಯನ್ನು ಕಟ್ ಮಾಡಿ ಅದನ್ನು ಕುಟ್ಟಿ ರಸ ತೆಗೆದುಕೊಳ್ಳಿ. ಈ ರಸವನ್ನು ಮೂಗಿಗೆ ಬಿಟ್ಟುಕೊಳ್ಳಿ. ಇದರಿಂದ ಶೀಘ್ರ ಪರಿಹಾರ ಕಂಡುಕೊಳ್ಳಬಹುದು.
#ಬಿಸಿ ನೀರಿನೊಂದಿಗೆ ನಿಂಬೆರಸ ಮಿಶ್ರ ಮಾಡಿ ಒಂದು ಕಪ್ಪಿನಂತೆ ಪ್ರತಿದಿನ ಒಂದು ವಾರದವರೆಗೆ ಸೇವಿಸಿದರೆ ತಲೆಸುತ್ತುವಿಕೆ ನಿಲ್ಲುವುದು.
#ಪ್ರತಿದಿನವೂ ಊಟದೊಂದಿಗೆ ಈರುಳ್ಳಿ ಗಡ್ಡೆಯನ್ನು ನಂಜಿಕೊಂಡು ತಿಂದರೆ ಕಣ್ಣು ನೋವು ಮತ್ತು ತಲೆನೋವು ದೂರವಾಗುತ್ತದೆ.
#ಏಲಕ್ಕಿ ಪುಡಿಯನ್ನು ಜೀರಿಗೆ ಕಷಾಯಕ್ಕೆ ಹಾಕಿಕೊಂಡು ಕುಡಿಯುವುದರಿಂದ ಪಿತ್ತದ ಬಾಧೆ ಇರುವುದಿಲ್ಲ ತಲೆ ಸುತ್ತುವಿಕೆ ನಿಂತು ಹೋಗುವುದು.