ಗಂಟಲು ನೋವಿಗೆ ಸರಳ ಮನೆಮದ್ದು!

ಸಾಮಾನ್ಯವಾಗಿ ಮಳೆಗಾಲದ ಅವಧಿಯಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಅನೇಕರಿಗೆ ಗಂಟಲಿನ ಸೋಂಕು ಬಾಧಿಸುತ್ತದೆ. ಇದರಿಂದ ಆಹಾರ ಸೇವಿಸುವುದು ಇರಲಿ, ನೀರು ಕುಡಿಯುವುದು ಕೂಡ ಕಷ್ಟವಾಗುತ್ತದೆ. ಇಂತಹ ಸಮಸ್ಯೆ ಕಾಣಿಸಿಕೊಂಡ್ರೆ ನೀವು ಕೆಲವೊಂದು ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಗಂಟಲು ನೋವು / ಗಂಟಲು ಕಿರಿಕಿರಿ ಕಾಣಿಸಿಕೊಳ್ಳುತಿದ್ರೆ ಇನ್ಮುಂದೆ ಹೀಗೆ ಮಾಡಿ.
#ಅಡಿಕೆಯನ್ನು ಸ್ವಲ್ಪ ನೀರಿನಲ್ಲಿ ಹಾಕಿ ಕುದಿಸಿ ಕಷಾಯ ಮಾಡಿ ಶೋಧಿಸಿಕೊಂಡು ಕಷಾಯವನ್ನು ಎಷ್ಟು ಬಿಸಿ ಬೇಕೋ ಅಷ್ಟೇ ಹದಕ್ಕೆ ಬಾಯಿಗೆ ಹಾಕಿ ಮುಕ್ಕಳಿಸಿದರೆ ಗಂಟಲು ನೋವು ಶಮನವಾಗುತ್ತದೆ.
#ಬೆಳ್ಳುಳ್ಳಿ:ಗಂಟಲು ಕೆರೆತ ಹೋಗಲಾಡಿಸಲು ಬೆಳ್ಳುಳ್ಳಿ ಅತ್ಯುತ್ತವಾದ ಮನೆಮದ್ದಾಗಿದೆ. ಇದರಲ್ಲಿರುವ ಅಲೆಸಿನ್ ಅಂಶ ಗಂಟಲು ಕೆರೆತಕ್ಕೆ ಕಾರಣವಾದ ಬ್ಯಾಕ್ಟಿರಿಯಾಗಳನ್ನು ಕೊಂದು ಹಾಕುತ್ತದೆ. ಹಸಿ ಬೆಳ್ಳೂಳ್ಳಿಯ ಒಂದು ಎಸಳು ಬಾಯಿಗೆ ಹಾಕಿ ಮೆಲ್ಲನೆ ಜಗಿಯಿತ್ತಾ ಅದರ ರಸ ನುಂಗಿ. ಹಸಿ ಬೆಳ್ಳುಳ್ಳಿ ಜಗಿದು ಅದರ ರಸ ನುಂಗುವುದು ಸ್ವಲ್ಪ ಕಷ್ಟ ಅನಿಸಿದರೂ ಗಂಟಲು ಕೆರೆತ ಬೇಗನೆ ಕಡಿಮೆಯಾಗುವುದು. ಇನ್ನು 2-3 ಬೆಳ್ಳುಳ್ಳಿ ಎಸಳನ್ನು ಒಂದು ಕಪ್ ನೀರಿಗೆ ಹಾಕಿ ಕುದಿಸಿ, ಆ ನೀರು ಬಿಸಿ ಬಿಸಿ ಇರುವಾಗಲೇ ಅದರಿಂದ ಬಾಯಿ ಮುಕ್ಕಳಿಸಿ (ನೀರು ತುಂಬಾ ಬಿಸಿ ಹಾಕಬೇಡಿ). ದಿನದಲ್ಲಿ 3-4 ಬಾರಿ ಬಾಯಿ ಮುಕ್ಕಳಿಸಿ. ಹೀಗೆ ಮಾಡಿದರೆ ಗಂಟಲು ಕೆರೆತ ಬೇಗನೆ ಕಡಿಮೆಯಾಗುವುದು
#ಧ್ವನಿ ಒಡೆದಾಗ ಮಾವಿನ ಎಲೆಯ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ.
#ನಿಂಬೆಹಣ್ಣು:ಇದರಲ್ಲಿರುವ ಆಸ್ಟ್ರಿಜೆಂಟ್ ಅಂಶ ಗಂಟಲು ಕೆರೆತ ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಇದು ಗಾಳಿಯಲ್ಲಿ ಬರುವ ಸೋಂಕಾಣು ಹಾಗೂ ಬ್ಯಾಕ್ಟಿರಿಯಾಗಳು ನಮ್ಮ ದೇಹದ ಮೇಲೆ ಪ್ರಭಾವ ಬೀರದಂತೆ ನಮ್ಮ ದೇಹವನ್ನು ರಕ್ಷಣೆ ಮಾಡುತ್ತದೆ.
ಬಳಸುವುದು ಹೇಗೆ?* ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ, ಅದಕ್ಕೆ ಅರ್ಧ ಚಮಚ ಜೇನು ಹಾಕಿ ಆ ನೀರಿನಲ್ಲಿ ಮುಕ್ಕಳಿಸಿ. ದಿನದಲ್ಲಿ 3-4 ಬಾರಿ ಈ ನೀರನ್ನು ಬಿಸಿ ಮಾಡಿ ಬಾಯಿ ಮುಕ್ಕಳಿಸಬೇಕು.
* ಒಂದು ಚಮಚ ಜೇನಿನ ರಸಕ್ಕೆ ನಿಂಬೆ ಹೋಳು ಚಿಕ್ಕದಾಗಿ ಕತ್ತರಿಸಿ ಹಾಕಿಡಿ. ಅದನ್ನು ದಿನದಲ್ಲಿ 2-3 ಬಾರಿ ತಿಂದರೆ ಗಂಟಲು ಕೆರೆತ ಕಡಿಮೆಯಾಗುವುದು.