ಹ್ಯಾಂಗ್ ಓವರ್ ಸಮಸ್ಯೆಗೆ ಪರಿಣಾಮಕಾರಿಯಾದ ನಿವಾರಕಗಳು!

ಕೆಲವೊಮ್ಮೆ ಈ ಹ್ಯಾಂಗ್ ಓವರ್ ಬಹಳ ಅಸಹ್ಯವಾಗಿರುತ್ತದೆ. ನಿಮ್ಮ ಇಡಿ ದಿನ ಕೆಲಸಗಳನ್ನು ಇದು ಹಾಳು ಮಾಡಬಹುದು ಅಥವಾ ಇನ್ನೂ ಹೆಚ್ಚು ಪರಿಣಾಮ ಬೀರಬಹುದು ಇವೆಲ್ಲವೂ ನೀವು ಎಷ್ಟರ ಮಟ್ಟಿಗೆ ಈ ಅಮಲನ್ನು ಸಹಿಸಿಕೊಳ್ಳಲು ಸಾಧ್ಯ ಎನ್ನುವುದರ ಮೇಲೆ ಅವಲಂಬಿತವಾಗಿದೆ. ನಿಮಗೆ ಗೊತ್ತಿಲ್ಲದ ಯಾವುದೋ ಒಂದು ಹ್ಯಾಂಗ್ ಓವರ್ ನಿವಾರಕವನ್ನು ಪ್ರಯತ್ನಿಸುವ ಬದಲು, ಪ್ರಯತ್ನಿಸಿ ಮತ್ತಷ್ಟು ತೊಂದರೆ ಪಟ್ಟುಕೊಳ್ಳುವ ಬದಲು ನೀವು ಮನೆಯಲ್ಲೇ ಮಾಡಬಹುದಾದ ಕೆಲವನ್ನು ನೀವು ಪ್ರಯತ್ನಿಸಬಹುದು. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
#ಬಾಳೆಹಣ್ಣು ತಿನ್ನಿ- ಬಾಳೆಹಣ್ಣುಗಳು ಪೊಟ್ಯಾಷಿಯಮ್‌ನ ಉತ್ತಮ ಮೂಲ. ದೇಹದ ಎಲೆಕ್ಟ್ರೋಲೈಟ್ ಗಳನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಕಡಿಮೆ ಎಲೆಕ್ಟ್ರೋಲೈಟ್ ಮಟ್ಟದಿಂದಾಗಿ, ಆಯಾಸ, ತಲೆನೋವು, ವಾಕರಿಕೆ, ಸ್ನಾಯು ಸೆಳೆತ ಮತ್ತು ಶಕ್ತಿಯ ಕೊರತೆಯಂತಹ ಸಮಸ್ಯೆ ಉಂಟಾಗುತ್ತದೆ, ಈ ಟೈಮ್ ಲ್ಲಿ ಬಾಳೆಹಣ್ಣನ್ನು ತಿಂದರೆ ಹೆಚ್ಚುಪರಿಣಾಮಕಾರಿ.
#ಜೇನು ತುಪ್ಪದಲ್ಲಿ ಪೊಟ್ಯಾಶಿಯಂ ಮತ್ತು ಇನ್ನಿತರ ಆಂಟಿ – ಆಕ್ಸಿಡೆಂಟ್ ಅಂಶಗಳು ಸಾಕಷ್ಟು ಕಂಡು ಬರುತ್ತವೆ. ಇದರ ಜೊತೆಗೆ ನಿಮ್ಮ ದೇಹದಲ್ಲಿ ಜೀರ್ಣ ಪ್ರಕ್ರಿಯೆಗೆ ಸಹಾಯ ಆಗುವಂತಹ ಎಂಜೈಮ್ ಗಳನ್ನು ಸ್ರವಿಸಲು ಜೇನು ತುಪ್ಪ ಸಹಾಯ ಮಾಡುತ್ತದೆ. ಇದರಲ್ಲಿನ ಆಂಟಿ – ಬ್ಯಾಕ್ಟಿರಿಯಲ್ ಗುಣ ಲಕ್ಷಣಗಳು ನಿಮ್ಮ ದೇಹಕ್ಕೆ ಲಭ್ಯ ಆಗಬೇಕಾದರೆ ನಿತ್ಯ ನಿಯಮಿತವಾಗಿ ಜೇನು ತುಪ್ಪವನ್ನು ಆಗಾಗ ಸೇವನೆ ಮಾಡಿ
#ಒಂದು ಕಪ್ ಸ್ಟ್ರಾಂಗ್ ಕಾಫಿ: ಒಂದೇ ಬಾರಿ ದೊಡ್ಡ ಕಪ್ ಕಾಫಿ ಕುಡಿಯುವ ಬದಲು ದಿನದಲ್ಲಿ ಆಗಾಗ ಸಣ್ಣ ಸಣ್ಣ ಕಪ್ ಕುಡಿಯಿರಿ. ಕಾಫಿ ಸೇವನೆ ಆಲಸ್ಯವನ್ನು ಕಡಿಮೆ ಮಾಡಿ ತಲೆನೋವನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಇದು ಮದ್ಯಪಾನನಿಂದಾದ ಅಮಲನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ.
#ಲಿಂಬೆರಸ ಕುಡಿಯಿರಿ (lemon juice) :ಹ್ಯಾಂಗೋವರ್ ಕಡಿಮೆ ಮಾಡಲು ನಿಂಬೆಹಣ್ಣಿನ ಜ್ಯೂಸ್ ಕುಡಿಯುವುದು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಆಲ್ಕೋಹಾಲ್ ನಶೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಸಿಟ್ರಿಕ್ ಹಣ್ಣುಗಳನ್ನು ಸೇವಿಸುವುದು ಸಹ ಪ್ರಯೋಜನಕಾರಿಯಾಗಿದೆ.
#ಕಿತ್ತಳೆ ಪಾನೀಯ, ಮೊಟ್ಟೆ ಮತ್ತು ತರಕಾರಿಗಳಿಗೆ ಹ್ಯಾಂಗ್ ಓವರ್ ಮಾಯ ಅಮಲನ್ನು ನಿವಾರಿಸಲು ಕಿತ್ತಳೆ ಪಾನೀಯ ಅತ್ಯಂತ ಸುಲಭವಾದ ಒಂದು ಸಾಧನವಾಗಿದೆ. ಇದು ಪುನರ್ಜಲೀಕರಣದ ಜೊತೆಗೆ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಹೊಂದಿರುತ್ತದೆ. ಹಾಗೂ ಅಮಲನ್ನು ನಿವಾರಿಸುತ್ತದೆ. ನೀವಿದನ್ನು ಬೇಯಿಸಿದ ಮೊಟ್ಟೆ ಹಾಗೂ ಸ್ವಲ್ಪ ಕಾಯಿಸಿದ ಬ್ರೆಡ್ ನೊಂದಿಗೆ ಸೇರಿಸಿಯೂ ಸೇವಿಸಬಹುದಾಗಿದೆ.