ಬಿಳಿಯ ಕೂದಲನ್ನು ಕಪ್ಪಾಗಿಸಲ್ಲು ಮನೆಮದ್ದು!

ನಿಮ್ಮ ತಲೆಯ ಕೂದಲು ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ಆರೋಗ್ಯಕರವಾಗಿ ಬೆಳೆಯಬೇಕು ಎಂದರೆ ಇವತ್ತು ನಾವು ಹೇಳುವ ಈ ನ್ಯಾಚುರಲ್ ಹೇರ್ ಪ್ಯಾಕನ್ನು ನೀವು ನಿಮ್ಮ ತಲೆಯ ಕೂದಲಿಗೆ ಹಚ್ಚಿದೆ ಆದಲ್ಲಿ ಖಂಡಿತ ನಿಮ್ಮ ಬಿಳಿಯ ಕೂದಲು ಮಾಯವಾಗಿ ನಿಮ್ಮ ತಲೆಯಲ್ಲಿ ಕಪ್ಪು ಕೂದಲು ಉದ್ದವಾಗಿ ದಟ್ಟವಾಗಿ ಮತ್ತು ಕಪ್ಪಾಗಿ ಆರೋಗ್ಯಕರವಾಗಿ ಬೆಳೆಯುತ್ತದೆ ಆ ಮನೆಮದ್ದು ಯಾವುದು ಎಂದು ಈಗ ತಿಳಿಯೋಣ ಬನ್ನಿ.
#ಮದರಂಗಿ/ಗೋರಂಟಿ:ಇದು ನೈಸರ್ಗಿಕವಾದ ಕೂದಲ ಬಣ್ಣ. ಇದು ಕೂದಲ ಬಣ್ಣವನ್ನು ಕಾಪಾಡುವುದರ ಜೊತೆಗೆ ಬಲಪಡಿಸುತ್ತದೆ. ಅಲ್ಲದೆ ಆರೋಗ್ಯಕರವಾಗಿ ಇರುವಂತೆ ಮಾಡುವುದು. ಕ್ಯಾಸ್ಟರ್ ಎಣ್ಣೆ, ನಿಂಬೆ ರಸ, ಮದರಂಗಿ ಪುಡಿ ಮತ್ತು ಸ್ವಲ್ಪ ರಸವನ್ನು ಸೇರಿಸಿ ಮಿಶ್ರಗೊಳಿಸಿ. ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ, 2 ಗಂಟೆಗಳ ಕಾಲ ಹೀರಿಕೊಳ್ಳಲು ಬಿಡಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿ ವಾರಕ್ಕೊಮ್ಮೆ ಈ ಕ್ರಮವನ್ನು ಅನ್ವಯಿಸಿ.
#ತೆಂಗಿನೆಣ್ಣೆ ಮತ್ತು ಲಿಂಬೆ:ತೆಂಗಿನೆಣ್ಣೆ ಮತ್ತು ಲಿಂಬೆಯು ಕೂದಲಿಗೆ ತುಂಬಾ ಒಳ್ಳೆಯದು. ಇದು ಕೂದಲಿನ ಕಿರುಚೀಲದ ಕೋಶಗಳು ವರ್ಣಕಳೆದುಕೊಳ್ಳದಂತೆ ತಡೆಯುವುದು ಮತ್ತು ದಿನಕಳೆದಂತೆ ಕೂದಲು ಕಪ್ಪಾಗುವಂತೆ ಮಾಡುವುದು. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ದಿನ ಇದನ್ನು ಬಳಸಿಕೊಳ್ಳಿ
#ಕರಿಬೇವಿನ ಎಲೆ:ಕರಿಬೇವಿನ ಎಲೆಯು ಕೂದಲ ರಕ್ಷಣೆ ಹಾಗೂ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೆಂಗಿನೆಣ್ಣೆಯಲ್ಲಿ ಕರಿಬೇವಿನ ಎಲೆಯನ್ನು ಸೇರಿಸಿ ಕುದಿಸಿ. ನಂತರ ತೈಲವನ್ನು ಸೋಸಿ ಸಂಗ್ರಹಿಸಿಟ್ಟುಕೊಳ್ಳಿ. ತಲೆ ಸ್ನಾನ ಮಾಡುವ ಮೊದಲು ನೆತ್ತಿ ಹಾಗೂ ಕೂದಲಿಗೆ ಅನ್ವಯಿಸಿ ಒಂದು ಗಂಟೆಗಳ ಕಾಲ ಬಿಡಿ. ಬಳಿಕ ತೊಳೆಯಿರಿ. ಈ ವಿಧಾನದಿಂದ ಉತ್ತಮ ಕೇಶ ವೃದ್ಧಿ ಹಾಗೂ ಬಣ್ಣಗಳ ರಕ್ಷಣೆ ಮಾಡಬಹುದು.
#ಸೀಗೆಕಾಯಿ:ಮೂರರಿಂದ ನಾಲ್ಕು ಸೀಗೆಕಾಯಿಯ ಕೋಡು ಹಾಗೂ ಹತ್ತರಿಂದ ಹನ್ನೆರಡು ಅಂಟುವಾಳದ ಬೀಜ (soap nut seeds) ಗಳನ್ನು ಒಂದು ಜಗ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಬೇಕು. ಬೆಳಿಗ್ಗೆ ಇದನ್ನು ಕುದಿಸಿ ತಣಿದ ಬಳಿಕ ಒಂದು ಬಾಟಲಿಯಲ್ಲಿ ಶೇಖರಿಸಿಡಬೇಕು. ಇದು ಪ್ರತಿದಿನ ಉಪಯೋಗಿಸುವ ಶಾಂಪೂವಿನಂತೆ ಉಪಯೋಗಿಸಬೇಕು. ಕೆಲವು ನೆಲ್ಲಿಕಾಯಿಗಳನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಕುದಿಸಿ ತಣಿಸಿದ ಬಳಿಕ ನೆಲ್ಲಿಕಾಯಿಯನ್ನು ಕಿವುಚಿ ತೆಗೆದ ನೀರು ಕಂಡೀಶನರ್ ನಂತೆ ಬಳಸಬಹುದು. ಈ ಜೋಡಿ ಕೂದಲು ಬೆಳ್ಳಗಾಗುವುದನ್ನು ತಡೆಯುವುದು ಮಾತ್ರವಲ್ಲದೇ ಕೂದಲು ಉದುರುವಿಕೆಯಿಂದ, ಕೂದಲಿನ ಹೊಳಪನ್ನು ಕಾಪಾಡುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.
#ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ :ಬಿಳಿ ಕೂದಲು ಪ್ರಾರಂಭವಾದಾಗ, ಕೆಫೀನ್ ಹೊಂದಿರುವ ವಸ್ತುಗಳ ಸೇವನೆಯನ್ನು ಕಡಿಮೆ ಮಾಡಿ. ಇದಲ್ಲದೆ, ಫೋಲಿಕ್ ಆಮ್ಲ ಸಮೃದ್ಧವಾಗಿರುವ ವಸ್ತುಗಳನ್ನು ಸೇವಿಸಿ