ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ!

ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿಲ್ಲ. ಈ ಔಷಧಿಗಳು ಮಾಡುವ ಕೆಲಸವನ್ನು ಕೆಲವೊಂದು ಸ್ವಾಭಾವಿಕ ಆಹಾರ ಪದಾರ್ಥಗಳು ಮಾಡುತ್ತವೆ. ಈ ಆಹಾರ ಪದಾರ್ಥಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆ, ವೀರ್ಯದ ಗುಣಮಟ್ಟಗಳನ್ನು ಹೆಚ್ಚಿಸುತ್ತವೆ, ನಿಮಿರುವಿಕೆಯ ದೋಷಗಳನ್ನು ಸರಿಪಡಿಸುತ್ತವೆ ಮತ್ತು ಲೈಂಗಿಕ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತವೆ. ಈ ಆಹಾರ ಪದಾರ್ಥಗಳು ವಯಾಗ್ರಕ್ಕೆ ಬದಲಿಯಾಗಿ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.. ಬನ್ನಿ ಇನ್ನು ತಡಮಾಡದೆ ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ…..
#ಮೆಂತೆ:ಮೆಂತೆಸೊಪ್ಪನ್ನು ನಾವು ತರಕಾರಿಯಾಗಿ ಬಳಸುತ್ತೇವೆ. ಮೆಂತೆ ಸಿರಪ್ ಅನ್ನು ಯುರೋಪಿಯನ್ನರು ಹೇರಳವಾಗಿ ಬಳಸುತ್ತಾರೆ. ಇದರಲ್ಲಿರುವ ಫೈಟೋಈಸ್ಟ್ರೋಜೆನ್‌ಗಳು ಮಹಿಳೆಯರಲ್ಲಿ ಮೊಲೆಯ ಟಿಶ್ಯೂಗಳನ್ನು ಆರೋಗ್ಯಕರವಾಗಿ ಸುಪುಷ್ಟಗೊಳಿಸುತ್ತವೆ. ಎದೆಯೆ ಗಾತ್ರವನ್ನು ಹಿಗ್ಗಿಸುತ್ತದೆ ಎಂದೂ ಹೇಳುತ್ತಾರೆ. ಸೆಕ್ಸ್ ಆಸಕ್ತಿಯನ್ನಂತೂ ಉತ್ತೇಜಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
#ಶೇಂಗಾಬೀಜಗಳಲ್ಲಿರುವ ಸತು ಆರೋಗ್ಯಕರ ವೀರ್ಯಾಣುಗಳನ್ನು ಸೃಷ್ಟಿಸಲು ನೆರವಾಗುತ್ತದೆ. ಹಾಗೂ ಈ ಮೂಲಕ ವೀರ್ಯಾಣುಗಳ ಸಂಖ್ಯೆಯೂ ಹೆಚ್ಚುತ್ತದೆ. ಈ ಸಂಖ್ಯೆ ಹೆಚ್ಚಿದಷ್ಟೂ ಫಲವತ್ತತೆಯೂ ಹೆಚ್ಚುತ್ತದೆ.
#ಆಹಾರದ ರುಚಿ ಹೆಚ್ಚಿಸಲು ಬಳಸುವಂತಹ ಈರುಳ್ಳಿ ಸೇವನೆ ಮಾಡಿದರೆ, ಅದು ಕೂಡ ಕಾಮೋತ್ತೇಜಕವಾಗಿ ಕೆಲಸ ಮಾಡುವುದು. ಇದು ಕಾಮಾಸಕ್ತಿ ವೃದ್ಧಿಸುವುದು ಮತ್ತು ಸಂತಾನೋತ್ಪತ್ತಿ ಅಂಗಾಂಗಗಳನ್ನು ಬಲಪಡಿಸುವುದು.ನಿಮಿರು ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ತುಂಬಾ ಲಾಭಕಾರಿ. ಬಿಳಿ ಈರುಳ್ಳಿ ತಿಂದರೆ ಅದು ಇನ್ನಷ್ಟು ಲಾಭಗಳನ್ನು ನೀಡುವುದು.
#ಮೊಟ್ಟೆಯ ಪ್ರಯೋಜನಗಳು ಒಂದೆರೆಡಲ್ಲ. ಮೊಟ್ಟೆಯನ್ನು ಅರ್ಧ ಬೇಯಿಸಿ ಅದಕ್ಕೆ ಶುಂಠಿ ರಸ ಮತ್ತು ಜೇನುತುಪ್ಪ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವನೆ ಮಾಡುವುದು ಲೈಂಗಿಕ ಜೀವನ ಚನ್ನಾಗಿರಲು ಸಹಾಯ ಮಾಡುತ್ತದೆ.
#ಮೀನು:ಸಾಮಾನ್ಯವಾಗಿ ಎಲ್ಲಾ ಮೀನುಗಳಲ್ಲಿಯೂ ಒಮೆಗಾ ೩ ಕೊಬ್ಬಿನ ಆಮ್ಲಗಳಿರುತ್ತವೆ. ಮೀನಿನ ಸೇವನೆ ಹಾಗೂ ಮೀನೆಣ್ಣೆಯ ಗುಳಿಗೆಗಳನ್ನು ಹೆಚ್ಚುವರಿಯಾಗಿ ಸೇವಿಸುವ ಮೂಲಕ ಲೈಂಗಿಕ ಆರೋಗ್ಯ ಉತ್ತಮವಾಗುತ್ತದೆ.