ಮುಖದಲ್ಲಿ ಸುಕ್ಕುಗಳು ಉಂಟಾದರೆ ಇವುಗಳನ್ನು ಬಳಸಿ!

ನಮ್ಮ ಮುಖದ ಚರ್ಮವು (Skin Care) ಪ್ರತಿದಿನ ಮಾಲಿನ್ಯ, ಧೂಳು-ಮಣ್ಣು, ಸೂರ್ಯನ ಬೆಳಕು ಮತ್ತು ಇತರ ಅನೇಕ ವಿಷಯಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸರಿಯಾದ ಆರೈಕೆಯ ಕೊರತೆಯಿಂದಾಗಿ, ಮುಖದ ಮೇಲೆ ಸುಕ್ಕುಗಳು ಉಂಟಾಗುತ್ತವೆ. ಅಂತಹ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ ನೋಡಿ!
#ಬೇವು, ಪುದೀನಾ, ತುಳಸಿ ಎಲೆಗಳ ಪುಡಿ ಮತ್ತು ಮೆಂತ್ಯ ಪುಡಿ ನಂಜುನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಜೇನುತುಪ್ಪದಲ್ಲಿ ಕೆನೆ ಮತ್ತು ನಿಂಬೆ ರಸವನ್ನು (Lemon) ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದನ್ನು ಮುಖ ಮತ್ತು ಕಣ್ಣುಗಳ ಕೆಳಗೆ ಹಚ್ಚಿ. ಇದು ಕಣ್ಣಿನ ಕೆಳಗಿರುವ ಕಪ್ಪನ್ನು ಹೋಗಲಾಡಿಸುತ್ತದೆ ಮತ್ತು ಸುಕ್ಕುಗಳನ್ನು ನಿವಾರಿಸುತ್ತದೆ.
#ಚೆರ್‍ರಿ ಜ್ಯೂಸ್ಚೆರ್‍ರಿ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಉತ್ತಮ ಪ್ರಮಾಣದಲ್ಲಿವೆ ಹಾಗೂ ತ್ವಚೆಯ ಮೇಲೆ ಅದ್ಭುತವಾದ ಪರಿಣಾಮವನ್ನು ಉಂಟುಮಾಡುತ್ತವೆ. ಅಧ್ಯಯನದ ಪ್ರಕಾರ ಇದರಲ್ಲಿ ಹದಿನೇಳು ಬಗೆಯ ಆಂಟಿ ಆಕ್ಸಿಡೆಂಟುಗಳಿವೆ. ಇವು ಚರ್ಮಕ್ಕೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ್ ವಿಉರ್ದ್ದ ಹೋರಾಡುತ್ತವೆ ಹಾಗೂ ವಯಸ್ಸಿಗೂ ಮುನ್ನ ಚರ್ಮ ಸೆಳೆತ ಕಳೆದು ಕೊಳ್ಳುವುದನ್ನು ತಡೆಯುತ್ತದೆ. ಇದಕ್ಕಾಗಿ ತಾಜಾ ಚೆರ್‍ರಿ ಹಣ್ಣುಗಳ ರಸವನ್ನು ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಿ. ಜೊತೆಗೇ ಇದರ ರಸವನ್ನೂ ಆಗಾಗ ಸೇವಿಸುತ್ತಿರಿ.
#ಪೇರಳೆ ಹಣ್ಣುಇದರಲ್ಲಿ ನೈಸರ್ಗಿಕವಾದ ಪ್ರಬಲ ಆಂಟಿ ಆಕ್ಸಿಡೆಂಟುಗಳಿವೆ. ಜೊತೆಗೇ ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಹಾಗೂ ಪೊಟ್ಯಾಶಿಯಂ ಉತ್ತಮ ಆಂಟಿ ಆಕ್ಸಿಡೆಂಟುಗಳಾಗಿವೆ. ವಿಶೇಷವಾಗಿ ಮೊಡವೆಗಳನ್ನು ನಿವಾರಿಸಲು ಪೇರಳೆ ಉತ್ತಮ ವಾಗಿದೆ. ಅಲ್ಲದೇ ಪೇರಳೆ ಎಲೆಯ ರಸವನ್ನು ಹಚ್ಚುವ ಮೂಲಕ ಚರ್ಮದಲ್ಲಿರುವ ಕಪ್ಪು ಕಲೆಗಳು ನಿವಾರಣೆ ಯಾಗುತ್ತವೆ.
#ಚರ್ಮಕ್ಕೂ ವರ್ಕೌಟ್ ಮಾಡಿನಿಮ್ಮ ಮುಖದ ಚರ್ಮ ಬಿಗಿಯಾಗಿರಲು, ದೇಹದ ಬೇರೆಲ್ಲ ಭಾಗಗಳಂತೆ ಅದನ್ನು ಬಲಗೊಳಿಸಿ, ಟೋನ್ ಮಾಡುವುದು ಮುಖ್ಯ. ಇದಕ್ಕಾಗಿ ಕಲ್ಲಿನಿಂದ ಮಸಾಜ್ ಮಾಡುವುದು, ಎಣ್ಣೆಯಿಂದ ಮಸಾಜ್ ಮಾಡುವುದು, ಮುಖದ ವ್ಯಾಯಾಮ ಮಾಡುವುದು ಅಗತ್ಯ.
#ಪಪ್ಪಾಯಿ ಮತ್ತು ಜೇನುತುಪ್ಪವನ್ನು (Honey) ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.