ನಿಮ್ಮ ಉಗುರುಗಳನ್ನು ಆರೋಗ್ಯಕರವಾಗಿಡಲು ಇಲ್ಲಿವೆ ಸಲಹೆಗಳು!

ಉದ್ದವಾದ, ಸುಂದರವಾದ ಉಗುರುಗಳನ್ನು ಪ್ರತಿಯೊಬ್ಬ ಹುಡುಗಿ ಮತ್ತು ಮಹಿಳೆ ಬಯಸುತ್ತಾದರೂ, ಉಗುರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಿವೆ. ಈಗ, ನಾವು ಉಗುರುಗಳನ್ನು ಆರೋಗ್ಯಕರವಾಗಿಡಲು ಪ್ರಮುಖವಾಗಿ ಕಾರಣವಾಗುವ ಕೆಲವು ಅಭ್ಯಾಸಗಳ ಬಗ್ಗೆ ನೋಡೋಣ.
#ಉಗುರುಗಳನ್ನು ಕಚ್ಚದಿರಿ:ಇದೊಂದು ವಿಶ್ವವ್ಯಾಪಿ ದುರಭ್ಯಾಸ. ಮಕ್ಕಳಲ್ಲಿ ಈ ಅಭ್ಯಾಸ ಅತಿ ಹೆಚ್ಚು ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಈ ಅಭಾಸ ಈಗ ವಯಸ್ಕರಾಗಿ ನಿಮ್ಮಲ್ಲಿದ್ದರೆ ಇದು ನಿಮ್ಮ ಚಿಕ್ಕಂದಿನ ಅಭ್ಯಾಸವೇ ಆಗಿರಬಹುದು. ಈ ಅಭ್ಯಾಸವನ್ನು ಬಿಡಿ ಎಂದು ಯಾರೇ ಹೇಳಿದರೂ ಸರಿ, ಅಥವಾ ನೀವೇ ಇಚ್ಛಿಸಿದರೂ ನಿಮ್ಮ ಅರಿವಿಗೇ ಬಾರದಂತೆ ಬೆರಳುಗಳು ಹಲ್ಲುಗಳ ನಡುವೆ ಇರುತ್ತವೆ. ಹಾಗಾಗಿ ಮೊದಲಿಗೆ ನೀವು ಈ ಅಭ್ಯಾಸವನ್ನು ಬಿಡುವತ್ತ ದೃಢ ಚಿತ್ತ ತೋರಬೇಕು.
#ನೀವು ಪ್ರತಿದಿನ ಸಾಕಷ್ಟು ನೀರು ಕುಡಿಯದಿದ್ದರೆ ಮತ್ತು ನಿಮ್ಮ ದೇಹಕ್ಕೆ ಅಗತ್ಯವಾಗಿರುವಷ್ಟು ನೀರು ಪಡೆಯದಿದ್ದರೆ, ಅದು ನಿಮ್ಮ ಉಗುರುಗಳು ದುರ್ಬಲವಾಗುತ್ತದೆ. ಉಗುರುಗಳು ದುರ್ಬಲವಾದಾಗ ಸುಲಭವಾಗಿ ಮುರಿಯಲು ಕಾರಣವಾಗುತ್ತದೆ. ಆದ್ದರಿಂದ ಆರೋಗ್ಯಕರ ಮತ್ತು ಶಕ್ತಿಯುತವಾದ ಉಗುರುಗಳನ್ನು ಪಡೆಯಲು , ಸಾಕಷ್ಟು ನೀರು ಕುಡಿಯುವುದು ಅಗತ್ಯ. ದೇಹಕ್ಕೆ ನೀರು ಹೆಚ್ಚಾದಂತೆ ಉಗುರಿನ ಆರೋಗ್ಯ ಸಹ ವೃದ್ಧಿಯಾಗುತ್ತದೆ.
#ಉಗುರು ಬಿರುಕು ಬಿಡದಂತೆ ಮಾಯಿಶ್ಚರೈಸರ್ ಹಚ್ಚಿ.ಉಗುರುಗಳನ್ನು ನಾಜೂಕಾಗಿ ಕತ್ತರಿಸಿ.ಕಾಲುಬೆರಳುಗಳ ಉಗುರುಗಳನ್ನು ಅದಷ್ಟು ಹಿಂದಕ್ಕೆ ಕತ್ತರಿಸುತ್ತಾ ಹೋಗಬೇಡಿ.
#ನಿಮ್ಮ ಉಗುರುಗಳಲ್ಲಿ ಹೆಚ್ಚಿನ ತೇವಾಂಶವಿರಲಿ:ನಿಮ್ಮ ಉಗುರುಗಳು ತೇವಾಂಶದಿಂದ ಯಾವಾಗಲೂ ಕೂಡಿರಲಿ. ಸಾಧ್ಯವಾದಷ್ಟು ಹ್ಯಾಂಡ್ ಕ್ರೀಮ್ ಬಳಕೆ ಮಾಡಿ. ಕೆಲವೊಮ್ಮೆ ನೀರಿಗೆ ಅಥವಾ ಕೆಲವು ಕೆಲಸಗಳನ್ನು ನಿರಂತರವಾಗಿ ಮಾಡುವಾಗ ನಿಮ್ಮ ಉಗುರುಗಳನ್ನು ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ, ನೀವು ಪ್ರತಿ ಬಾರಿ ನಿಮ್ಮ ಕೈಗಳನ್ನು ತೊಳೆಯುವಾಗ ನಿಮ್ಮ ಉಗುರುಗಳನ್ನು ತೇವಗೊಳಿಸಿ.