ಓಂ ಕಾಳಿನಲ್ಲಿ ಅಚ್ಚರಿ ಮೂಡಿಸುವ ಕೆಲವು ಔಷಧೀಯ ಗುಣಗಳು!

ಓಂ ಕಾಳನ್ನು ಕರಿದ ಪದಾರ್ಥಗಳಿಗೆ ಸುವಾಸನೆಗೆಂದು ಬಳಸುತ್ತಾರೆ. ಆದರೆ ಓಮು ಕಾಳಿನಲ್ಲಿ ಅಚ್ಚರಿ ಮೂಡಿಸುವ ಕೆಲವು ಔಷಧೀಯ ಗುಣಗಳೂ ಇದೆ. ಔಷಧಗಳಲ್ಲೂ ಬಳಸಲಾಗುವ ಓಮು ಕಾಳಿನಿಂದ ಆರೋಗ್ಯಕ್ಕೆ ಇರುವ ಉಪಯೋಗದ ಕುರಿತು ತಿಳಿಯೋಣ.
#ಹೊಟ್ಟೆ ಹುಳು ಸಮಸ್ಯೆಗೆ ಮಜ್ಜಿಗೆಯಲ್ಲಿ ಓಂಕಾಳಿನ ಪುಡಿಯನ್ನು ಹಾಕಿಕೊಂಡು ಸೇವಿಸುವುದರಿಂದ ಹೊಟ್ಟೆಹುಳು ಸಮಸ್ಯೆ ನಿವಾರಣೆಯಾಗುತ್ತದೆ.
#ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ ಎರಡು ಚಮಚ ಓಂ ಕಾಳನ್ನು ಹಾಕಿ ನೆನೆಸಿಡಿ. ಬೆಳಿಗ್ಗೆ ಎದ್ದ ಬಳಿಕ ಆ ನೀರನ್ನು ಖಾಲಿ ಹೊಟ್ಟೆಗೆ ಕುಡಿಯಿರಿ. ಹೀಗೆ ಪ್ರತಿನಿತ್ಯ ಒಂದು ತಿಂಗಳ ಕಾಲ ಓಂ ಕಾಳಿನ ನೀರನ್ನು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.
#ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಹೆಚ್ಚಾಗಿದ್ದರೆ ಓಂಕಾಳಿನ ಪುಡಿಯನ್ನು ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಬಿಸಿಹಾಲಲ್ಲಿ ಬೆರಸಿ ಸೇವಿಸಬೇಕು ಹೀಗೆ ಸೇವಿಸುವುದರಿಂದ ಮಹಿಳೆಯತಿಗೆ ಕಾಡುವ ಒಂದು ಸಮಸ್ಯೆ ನಿವಾರಣೆಯಾಗುತ್ತದೆ.
#ಕೂದಲು ಉದುರುವ ಸಮಸ್ಯೆಗೆ ಓಂ ಕಾಳುಗಳನ್ನು ಬಳಸಿಕೊಳ್ಳಬಹುದು. ಓಂ ಕಾಳುಗಳನ್ನು ಬಿಳಿ ಕೂದಲನ್ನು ಹೋಗಲಾಡಿಸಲು ಸೇವಿಸಬೇಕು ಎಂದುಕೊಂಡಿದ್ದರೆ ಎರಡು ಚಮಚದಷ್ಟು ಓಂ ಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.