ಒಂದು ವೀಳ್ಯದೆಲೆಯ ಹಲವು ಪ್ರಯೋಜನ!

ವಿಳ್ಳೆದೆಲೆ ಬರಿ ಬಾಯಿರುಚಿ ಕೊಡುವುದಲ್ಲದೆ ಹಲವಾರು ಔಷಧಿ ಗುಣಗಳನ್ನು ಹೊಂದಿದೆ. ವಿಳ್ಳೆದೆಲೆಯನ್ನು ಹಳ್ಳಿಗಳ ಕಡೆ ಅಡಿಕೆ ಎಲೆ ಅಂತ ಊಟ ಆದ ತಕ್ಷಣ ವಿಳ್ಳೆದೆಲೆಗೆ ಅಡಿಕೆ ಮತ್ತು ಸುಣ್ಣ ಸೇರಿಸಿ ತಿನ್ನುತ್ತಾರೆ ಇದರಲ್ಲಿರುವ ಸುಣ್ಣದಿಂದ ಕಬ್ಬಿಣಾಂಶ ನಮ್ಮ ದೇಹವನ್ನು ಸೇರುತ್ತದೆ ಹೀಗೆ ಈ ವಿಳ್ಳೆದೆಲೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಳ್ಯದೆಲೆ ಆರೋಗ್ಯಕ್ಕೆ ಒಳ್ಳೆಯದು ಅನೇಕ ಕಡೆ ಪಾನ ರೂಪದಲ್ಲಿ ವೀಳ್ಯದೆಲೆಯನ್ನು ಸೇವನೆ ಮಾಡುತ್ತಾರೆ ಈ ವೀಳ್ಯದೆಲೆಯನ್ನು ಪಾನ ರೂಪದಲ್ಲಿ ಸೇವನೆ ಮಾಡುವುದರ ಜೊತೆಗೆ ಶುಭ ಕಾರ್ಯಗಳಲ್ಲಿ ದೇವರ ಮುಂದೆ ಕೂಡ ಇಡುತ್ತಾರೆ ಆದರೆ ಈ ವೀಳ್ಯದೆಲೆ ಅಷ್ಟಕ್ಕೆ ಸೀಮಿತವಲ್ಲಚರ್ಮದ ಕಾಂತಿಯನ್ನು ಈ ವೀಳ್ಯದೆಲೆ ಹೆಚ್ಚಿಸುತ್ತದೆ ವೀಳ್ಯದ ಎಳೆಯಲ್ಲಿರುವ ಆಂಟಿಆಕ್ಸಿಡೆಂಟಗಳು ಚರ್ಮದಲ್ಲಿ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತವೆ ಹಾಗೇನೇ ಮುಖದ ಚರ್ಮ ಕಾಂತಿ ಪಡೆಯಲು ನೆರವಾಗುತ್ತವೆ ಹಾಗಾದರೆ ಹೇಗೆ ಈ ವಿಳ್ಳೆದೆಲೆಯಿಂದ ಚರ್ಮದ ಕಾಂತಿಯನ್ನು ಪಡೆಯುವುದು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.
#ತಲೆ ಹೊಟ್ಟು ಇದ್ದಲ್ಲಿ ಬೇಕಾಗುವಷ್ಟು ವೀಳ್ಯದೆಲೆಯನ್ನು ನುಣ್ಣಗೆ ಅರೆದು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ. ಇದಕ್ಕೆ ಅರ್ಧ ಲಿಂಬೆರಸ ಬೆರೆಸಿ ತಲೆಯ ಪ್ರತಿಯೊಂದು ಭಾಗಕ್ಕೆ ಪೇಸ್ಟ್ ತರ ಹೆಚ್ಚಿಡಿ. ಅರ್ಧಗಂಟೆ ಬಳಿಕ ಸ್ನಾನ ಮಾಡಿದರೆ ತಲೆಯ ಹೊಟ್ಟು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ.
#ಒಂದು ವೀಳ್ಯದೆಲೆ, ಸ್ವಲ್ಪ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ 2 ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು.
#ಆ್ಯಂಟಿಆಕ್ಸಿಡೆಂಟ್, ಆ್ಯಂಟಿಮೈಕ್ರೊಬಿಯಲ್ ಗುಣಗಳು ವೀಳ್ಯದೆಲೆಯೊಳಗೆ ಇರುತ್ತವೆ. ಇದರ ಸೇವನೆಯಿಂದ ಕೆಮ್ಮಿನ ಸಮಸ್ಯೆಯನ್ನು ಸಹ ನಿವಾರಿಸಿಕೊಳ್ಳಬಹುದು. ಅಲ್ಲದೆ ಗಂಟಲನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.ವೀಳ್ಯದೆಲೆ ಹೊಟ್ಟೆಯ ಫಿಟ್‍ನೆಸ್‍ಗೆ ತುಂಬಾ ಒಳ್ಳೆಯದು. ಇದರ ನಿಯಮಿತ ಸೇವನೆಯಿಂದ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಬಹುದು. ವೀಳ್ಯದೆಲೆ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ.
#ಮಕ್ಕಳ ಆರೋಗ್ಯಕ್ಕೆ ವೀಳ್ಯದೆಲೆ ರಾಮಬಾಣ:ಪುಟ್ಟ ಮಕ್ಕಳಿಗೆ ಮಾತ್ರೆ, ಇನ್ನಿತರ ಔಷಧಿಗಳನ್ನು ತಂದು ಕೊಡುವುದರ ಬದಲು ಒಂದು ವೀಳ್ಯದೆಲೆಯನ್ನು ಚೆನ್ನಾಗಿ ಜಜ್ಜಿ ಅದರಿಂದ ತೆಗೆದ ರಸವನ್ನು ಮಕ್ಕಳಿಗೆ ಕೂಡಿಸುವುದು ಉತ್ತಮವಾದ ಅಭ್ಯಾಸ. ಕ್ಯಾಲ್ಸಿಯಂ ಅಂಶ ಈ ಎಲೆಗಳಲ್ಲಿ ಹೇರಳವಾಗಿರುವುದರಿಂದ ಇದು ಮಕ್ಕಳಿಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಇನ್ನು ಕೆಮ್ಮು, ಶೀತದಂತಹ ಸಮಸ್ಯೆಗಳು ಬಾಲ್ಯದಲ್ಲಿ ಮಕ್ಕಳನ್ನು ಆಗಾಗ ಕಾಡುತ್ತಿರುತ್ತದೆ. ಹೀಗಾಗಿ ವೀಳ್ಯದೆಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಸ್ವಲ್ಪ ಬಿಸಿ ಮಾಡಿ ಮಕ್ಕಳ ಎದೆಗೆ ಮತ್ತು ಬೆನ್ನಿಗೆ ಉಜ್ಜಿದರೆ ಈ ಸಮಸ್ಯೆ ದೂರವಾಗುತ್ತದೆ.
#ಒಸಡುಗಳಲ್ಲಿ ಒಸರುವ ರಕ್ತ:ಬಾಯಿಯ ಆರೋಗ್ಯಕ್ಕೆ ವೀಳ್ಯದೆಲೆ ತುಂಬಾ ಉತ್ತಮ. ಇದರ ಸೇವನೆಯಿಂದ ಒಸಡುಗಳಲ್ಲಿ ಒಸರುತ್ತಿರುವ ರಕ್ತ ತಕ್ಷಣವೇ ನಿಲ್ಲುತ್ತದೆ. ಒಂದು ವೇಳೆ ಹಲವು ಕಡೆಗಳಿಂದ ಒಸಡುಗಳಲ್ಲಿ ರಕ್ತ ಒಸರುತ್ತಿದ್ದರೆ ಕೆಲವು ವೀಳ್ಯದೆಲೆಗಳನ್ನು ನೀರಿನಲ್ಲಿ ಬೇಯಿಸಿ, ತಣಿಸಿ ಅರೆದು ಲೇಪನವನ್ನು ರಕ್ತ ಜಿನುಗುತ್ತಿರುವೆಡೆ ದಪ್ಪನಾಗಿ ಹಚ್ಚಿಕೊಂಡು ರಾತ್ರಿಯಿಡೀ ಬಿಟ್ಟರೆ ಮರುದಿನ ಗುಣವಾಗಿರುತ್ತದೆ.