ಸಕ್ಕರೆ ಕಾಯಿಲೆ ಬರುವಿಕೆಯನ್ನು ತಡೆಯಲು ಸರಳ ಮಾರ್ಗ!

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಎಂದರೆ ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ಕಾಡುವಂಥಹ ರೋಗವಾಗಿದೆ. ವಿಶ್ವದಲ್ಲಿ ಸುಮಾರು 425 ಮಿಲಿಯನ್ ಜನರು ಡಯಾಬಿಟೀಸ್ ನಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಮತ್ತು ಗ್ಲೂಕೋಸ್ ಅಧಿಕವಾದರೆ ಮಧುಮೇಹ ರೋಗ ಕಾಡುತ್ತದೆ. ಈ ಸಮಸ್ಯೆ ಇರುವವರು ಪ್ರತಿದಿನ ಕೆಲವು ಹಣ್ಣುಗಳನ್ನು ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಸಕ್ಕರೆ ಕಾಯಿಲೆ ಇದ್ದವರು ವೈದ್ಯರ ಬಳಿ ಹೋಗಿ ತಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ತಪಾಸಣೆಯನ್ನು ಮಾಡಿಕೊಳ್ಳಬೇಕು. ಇದರ ಆಧಾರದ ಮೇಲೆ ನೀವು ಯಾವ ಹಣ್ಣನ್ನು ಸೇವನೆ ಮಾಡುವುದು, ಮತ್ತು ಮಾಡಬಾರದು ಎಂಬುದನ್ನು ನೀವೇ ನಿರ್ಧಾರ ಮಾಡುತ್ತೀರಿ. ಮಧುಮೇಹಿ ರೋಗಿಗಳಿಗೆ ಸಾಮಾನ್ಯವಾಗಿ ಎಲ್ಲರೂ ಒಂದೇ ಸಲಹೆಯನ್ನು ನೀಡುತ್ತಾರೆ. ಅದು ಎಂದರೆ ನೀವು ಸಿಹಿಯಾದ ಆಹಾರವನ್ನು ಹಣ್ಣುಗಳನ್ನು ತಿನ್ನಬಾರದು ಎಂದು. ಆದರೆ ಇದು ತಪ್ಪು ಸಲಹೆ. ಕೆಲವೊಂದು ತಾಜಾ ಹಣ್ಣುಗಳಲ್ಲಿ ಉತ್ತಮವಾದ ಪೋಷಕಾಂಶ ವಿಟಮಿನ್ಸ್ ಖನಿಜಗಳು ಲವಣಗಳನ್ನು ಒಳಗೊಂಡಿರುತ್ತವೆ. ಪೌಷ್ಟಿಕಾಂಶ ಮತ್ತು ಪ್ರೊಟೀನ್ ಭರಿತ ಆಹಾರ ದಟ್ಟವಾದ ಆಹಾರವಾಗಿ ಪರಿಣಮಿಸುತ್ತದೆ.

ಅದರಲ್ಲೂ ಕೆಲವು ಹಣ್ಣುಗಳ ಆಯ್ಕೆಯಲ್ಲಿ ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಎಲ್ಲದಕ್ಕಿಂತ ಹೆಚ್ಚಾಗಿ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನೀವು ಯಾವ ಹಣ್ಣು ತಿನ್ನುತ್ತೀರಿ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೀರಿ ಎಂದು ಉತ್ತಮವಾದ ನಿರ್ಧಾರ ತೆಗೆದು ಕೊಳ್ಳಬೇಕಾಗುತ್ತದೆ.

# ಸೀಬೆ ಹಣ್ಣು ಇದರಲ್ಲಿ 68 ಕ್ಯಾಲೋರಿ ಇರುತ್ತದೆ. ಇದರಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಿರುತ್ತದೆ. ಸೀಬೆ ಹಣ್ಣಿನಲ್ಲಿ ವಿಟಮಿನ್ ಎ ಪೋಲಿಕ ಆಸಿಡ್ ಪೊಟ್ಯಾಷಿಯಂ ಹೆಚ್ಚಿರುತ್ತದೆ. ಸೀಬೆ ಹಣ್ಣು ಇದು ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇಡುತ್ತದೆ. ಹಾರ್ಮೋನ್ ಅಸಮತೋಲನ ಉಂಟಾದವರಿಗೆ ಇದು ಒಂದು ಅತ್ಯುತ್ತಮ ಹಣ್ಣು ಆಗಿದ್ದು, ಡಯಾಬಿಟೀಸ್ ಮತ್ತು ಹೃದಯ ಸಂಭಂದ ಪಟ್ಟ ರೋಗಗಳಿಗೆ ಉತ್ತಮವಾಗಿದೆ. ಆದ್ದರಿಂದ ಮಧುಮೇಹಿಗಳೇ ನೀವು ಸೀಬೆ ಹಣ್ಣು ಸೇವನೆ ಮಾಡುವುದು ಉತ್ತಮ.

#ಇನ್ನು ಕಿವಿ ಹಣ್ಣು ಇದು ಹುಳಿ ಮತ್ತು ಸ್ವಾದಿಷ್ಟ ಹಣ್ಣು ಆಗಿದ್ದು, ಇದು ಡಯಾಬಿಟೀಸ್ ನಿವಾರಿಸಲು ಸಹಕಾರಿಯಾಗಿದೆ.

#ಹಸಿರು ತರಕಾರಿಗಳು ಅತ್ಯಂತ ಪೌಷ್ಟಿಕ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಅವು ಜೀರ್ಣವಾಗುವ ಕಾರ್ಬೋಹೈಡ್ರೇಟ್‌ಗಳು ಅಥವಾ ದೇಹದಿಂದ ಹೀರಲ್ಪಡುವ ಕಾರ್ಬೋಹೈಡ್ರೇಟ್‌ಗಳಲ್ಲಿ ತುಂಬಾ ಕಡಿಮೆಯಾಗಿದೆ. ಆದ್ದರಿಂದ ಇವು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ. ಪಾಲಕ್, ಕೇಲ್ ಮತ್ತು ಇತರ ಎಲೆಗಳ ಸೊಪ್ಪುಗಳು ವಿಟಮಿನ್ ಸಿ ಸೇರಿದಂತೆ ಅನೇಕ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲಗಳಾಗಿವೆ. ಕೆಲವು ಪುರಾವೆಗಳು ಮಧುಮೇಹ ಹೊಂದಿರುವ ಜನರು ಮಧುಮೇಹವಿಲ್ಲದ ಜನರಿಗಿಂತ ಕಡಿಮೆ ವಿಟಮಿನ್ ಸಿ ಮಟ್ಟವನ್ನು ಹೊಂದಿರುತ್ತಾರೆ. ಆದರೆ ಅವರಿಗೆ ಹೆಚ್ಚಿನ ವಿಟಮಿನ್ ಸಿ ಅಗತ್ಯವಿರಬಹುದು. ವಿಟಮಿನ್ ಸಿ ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ವಿಟಮಿನ್ ಸಿ-ಭರಿತ ಆಹಾರಗಳ ಆಹಾರ ಸೇವನೆಯನ್ನು ಹೆಚ್ಚಿಸುವುದರಿಂದ ಮಧುಮೇಹ ಹೊಂದಿರುವ ಜನರು ತಮ್ಮ ವಿಟಮಿನ್ ಸಿ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಉರಿಯೂತ ಮತ್ತು ಸೆಲ್ಯುಲಾರ್ ಹಾನಿಯನ್ನು ಕಡಿಮೆ ಮಾಡುತ್ತದೆ.

#ಬೆಂಡೆಕಾಯಿ: ಎರಡು ಬೆಂಡೆಕಾಯಿಯನ್ನು ಉದ್ದುದ್ದ ಕತ್ತರಿಸಿ ರಾತ್ರಿ ನೀರಿನಲ್ಲಿ ನೆನೆಸಬೇಕು. ಮರುದಿನ ಬೆಳಿಗ್ಗೆ ನೆನೆಹಾಕಿದ ನೀರಿನಿಂದ ಬೆಂಡೆಕಾಯಿಯನ್ನು ತೆಗೆದು, ಲೋಳೆಯ ನೀರನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದನ್ನು ಕ್ರಮವಾಗಿ ಮಾಡಿಕೊಂಡು ಬಂದರೆ ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group