ದೇಹ ತೂಕ ಇಳಿಸಿಕೊಳ್ಳಲು ಈ 3 ಯೋಗಾಸಗಳು!

ದೇಹವನ್ನು ಆರೋಗ್ಯಕರವಾಗಿಡಲು, ಚಯಾಪಚಯವನ್ನು ಸರಿಯಾಗಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಚಯಾಪಚಯ ಕ್ರಿಯೆಯು ದೇಹದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳನ್ನು ಸೂಚಿಸುತ್ತದೆ. ಈ ರಾಸಾಯನಿಕ ಪ್ರತಿಕ್ರಿಯೆಗಳು ನಿಮ್ಮ ದೇಹವನ್ನು ಆರೋಗ್ಯಕರವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಹೆಚ್ಚಿನ ಚಯಾಪಚಯ ಕ್ರಿಯೆ, ನೀವು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೀರಿ, ಇದು ತೂಕ ಇಳಿಕೆಗೆ ಅವಶ್ಯಕವಾಗಿದೆ. ಹೆಚ್ಚಿನ ಚಯಾಪಚಯ ಕ್ರಿಯೆಯು ನಿಮಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ.
#ಸರ್ವಾಂಗಾಸನ : ಹೆಸರೇ ಸೂಚಿಸುವಂತೆ, ಸರ್ವಾಂಗಾಸನ ಯೋಗವು ದೇಹದ ಎಲ್ಲಾ ಅಂಗಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಚಯಾಪಚಯವನ್ನು ಉತ್ತೇಜಿಸುವ ಮತ್ತು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವ ಯೋಗವಾಗಿದೆ. ಈ ಯೋಗವನ್ನು ಮಾಡಲು, ಮೊದಲು ನಿಮ್ಮ ಬೆನ್ನಿನ ಮೇಲೆ ಮಲಗಿಕೊಳ್ಳಿ. ಈಗ ಕಾಲುಗಳನ್ನು 90 ಡಿಗ್ರಿಗಳಿಗೆ ಮೇಲಕ್ಕೆ ಸರಿಸಿ. ಪಾದಗಳನ್ನು ತಲೆಗೆ ಅನುಗುಣವಾಗಿ ಇರಿಸಿ. ಗಲ್ಲದ ಎದೆಗೆ ತಾಗುವ ರೀತಿಯಲ್ಲಿ ದೇಹವನ್ನು ನೇರವಾಗಿ ಇರಿಸಿ. ಸ್ವಲ್ಪ ಸಮಯದವರೆಗೆ ಈ ಸ್ಥಿತಿಯಲ್ಲಿದ್ದ ನಂತರ, ನಿಧಾನವಾಗಿ ಮೂಲ ಸ್ಥಾನಕ್ಕೆ ಹಿಂತಿರುಗಿ.
#ದಂಡಾಸನಈ ಆಸನದಲ್ಲಿ ಕೈಗಳು ನಿಮ್ಮ ದೇಹಕ್ಕೆ ಬಲ ನೀಡಲು ನೆರವಾಗುವುದು. ಈ ಆಸನ ಮಾಡುವ ಕಾರಣದಿಂದಾಗಿ ನಿಮ್ಮ ಕೈಗಳು ಹಾಗೂ ಭುಜವನ್ನು ಬಲಗೊಳಿಸುವುದು.
ಮಾಡುವ ವಿಧಾನ
•ನೆಲದ ಮೇಲೆ ಕುಳಿತುಕೊಳ್ಳಿ ಮತ್ತು ಕೈಗಳು ನಿಮ್ಮ ಸೊಂಟದ ಹತ್ತಿರವಿರಲಿ ಮತ್ತು ಬೆರಳುಗಳು ಮುಂದಿನ ಭಾಗಕ್ಕೆ ಇರಲಿ.
•ಮೊಣಕಾಲನ್ನು ಬಗ್ಗಿಸಿ ಮತ್ತು ಪಾದವು ನೆಲದ ಮೇಲಿರಲಿ.
•ಉಸಿರನ್ನು ಹೊರಗೆ ಬಿಡಿ ಮತ್ತು ಪಾದವನ್ನು ಒತ್ತಿ ಹಿಡಿಯಿರಿ ಮತ್ತು ಕೈಗಳನ್ನು ನೆಲಕ್ಕೆ ಒತ್ತಿ ಮತ್ತು ಸೊಂಟವನ್ನು ಮೇಲಕ್ಕೆ ಎತ್ತಿ.
•ಕಾಲುಗಳನ್ನು ನೇರವಾಗಿಸಿ ಮತ್ತು ತಲೆಯನ್ನು ನಿಧಾನವಾಗಿ ತಿರುಗಿಸಿ.•ಇದನ್ನು 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಮತ್ತೆ ಸಾಮಾನ್ಯ ಭಂಗಿಗೆ ಬಂದು ಉಸಿರನ್ನು ಬಿಡಿ.
#ಮತ್ಸ್ಯಾಸನಈ ಯೋಗಾಸನವು ದೇಹದ ಕೆಳಗಿನ ಭಾಗವಾಗಿರು ತೊಡೆಗಳು, ಹೊಟ್ಟೆಯ ಸ್ನಾಯುಗಳು ಮತ್ತು ಸೊಂಟಕ್ಕೆ ಒತ್ತಡ ಹಾಕುವುದು. ಈ ಯೋಗಾಸನವು ಬಾಗುವುದು ಮತ್ತು ದೇಹದ ಕೆಳಗಿನ ಭಾಗವನ್ನು ಮೇಲಕ್ಕೆ ಎತ್ತುವುದಾಗಿದೆ. ಇದರಿಂದ ಹೊಟ್ಟೆ ಮತ್ತು ತೊಡೆಯಲ್ಲಿ ಇರುವಂತಹ ಕೊಬ್ಬು ಕರಗುವುದು.
ಮಾಡುವ ವಿಧಾನ
•ನೆಲದ ಮೇಲೆ ಮಲಗಿ ಮತ್ತು ಮೊಣಕಾಲು ಸ್ವಲ್ಪ ಮಡಚಿ.
•ಉಸಿರಾಡಿ ಮತ್ತು ನೆಲದ ಮೇಲಿಂದ ಸೊಂಟವನ್ನು ಸ್ವಲ್ಪ ಮೇಲಕ್ಕೆತ್ತಿ ಮತ್ತು ಅಂಗೈಯನ್ನು ಪೃಷ್ಠದ ಅಡಿಗಿಡಿ.
•ಮೊಣಕೈಯನ್ನು ನೀವು ನೆಲಕ್ಕೆ ಒತ್ತಿಕೊಳ್ಳಿ.
•ತಲೆಯನ್ನು ನೆಲದ ಮೇಲಿಡಿ.•ಈ ಭಂಗಿಯಲ್ಲಿ 30 ಸೆಕೆಂಡು ಇರಿ ಮತ್ತು ಉಸಿರನ್ನು ಹೊರಬಿಡಿ.
ಗಮನಿಸಿ: ಋತುಚಕ್ರವಾಗುತ್ತಿದ್ದರೆ, ರಕ್ತದೊತ್ತಡ ಮತ್ತು ಮೈಗ್ರೇನ್ ನಿಂದ ಬಳಲುತ್ತಿದ್ದರೆ ಆಗ ನೀವು ಈ ಆಸನವನ್ನು ಮಾಡಬಾರದು.