ನೆನಪಿನ ಶಕ್ತಿ ವೃದ್ಧಿಸಲು ಒಂದೆಲಗ!

ಒಂದೆಲಗ ಎಂಬುದು ಒಂದು ವಿಶೇಷವಾದ ಔಷಧೀಯ ಗಿಡಮೂಲಿಕೆಯಾಗಿದೆ. ಇದನ್ನು ಆಹಾರವಾಗಿಯೂ ಉಪಯೋಗಿಸುತ್ತಾರೆ. ಒಂದೆಲಗವು ಹೆಸರೇ ಸೂಚಿಸುವಂತೆ ಒಂದೇ ಎಲೆಯನ್ನು ಹೊಂದಿರುವ ಸಸ್ಯವಾಗಿದೆ. ಇದನ್ನು ಬ್ರಾಹ್ಮಿ ಎಂಬುದಾಗಿಯೂ ಕರೆಯುತ್ತಾರೆ. ಮತ್ತು ಆಡು ಭಾಷೆಯಲ್ಲಿ ಇಲಿಕಿವಿ ಸೊಪ್ಪು ಎಂದು ಕರೆಯುತ್ತಾರೆ. ಒಂದೆಲಗವು ನೆಲವನ್ನೇ ಅಂಟಿಕೊಂಡು ಬಳ್ಳಿಯಂತೆ ಬೆಳೆಯುವ ಗಿಡವಾಗಿದ್ದು, ಜೌಗುಪ್ರದೇಶಗಳಲ್ಲಿ ಮತ್ತು ನೀರಿನ ಪ್ರದೇಶಗಳಲ್ಲಿ ಅಂದರೆ ಗದ್ದೆ, ತೋಟಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
#ಮಕ್ಕಳು ಪ್ರತಿದಿನ ಬೆಳಿಗ್ಗೆ 2 ರಿಂದ 3 ಒಂದೆಲಗ ಎಲೆಯನ್ನು ಹಸಿದ ಹೊಟ್ಟೆಯಲ್ಲಿ ತಿನ್ನಬೇಕು.ಮಕ್ಕಳು ಹಸಿ ಎಲೆ ತಿನ್ನಲು ಹಿಂಜರಿಯುತ್ತಾರೆ, ಆದ್ದರಿಂದ ಒಂದೆಲಗದ ಎಲೆಯ ಒಂದು ಚಮಚ ರಸವನ್ನು ಜೇನುತುಪ್ಪ ಬೆರಸಿ ಕೊಡಬೇಕು ಅಥವಾ ಬೆಳಿಗ್ಗೆ ಮಾಡೊ ದೋಸೆ ಹಿಟ್ಟಿನ ಜೊತೆ ಹಾಕಿ ರುಬ್ಬಿ ನಂತರ ದೋಸೆ ಮಾಡಿ ಕೊಡುವುದರಿಂದ ಅದರಲ್ಲಿ ಬೈಕೊಸೈಡ್ ಎ ಮತ್ತು ಬಿ ಎಂಬ ರಾಸಾಯನಿಕ ಇರುವುದರಿಂದ ಇದು ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಪುನಶ್ಚೇತನ ನೀಡುತ್ತದೆ. ಆದ್ದರಿಂದ ಜ್ಞಾಪಕ ಶಕ್ತಿ, ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಬುದ್ಧಿಶಕ್ತಿಯು ಹೆಚ್ಚುತ್ತದೆ.
#ಬ್ರಾಹ್ಮಿ ಎಲೆಗಳು ಆಂಟಿಹೈಪರ್ಗ್ಲೈಸೆಮಿಕ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ ಮತ್ತು ಮಧುಮೇಹಿಗಳಿಗೆ ಉತ್ತಮ. ಬ್ರಾಹ್ಮಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹಕ್ಕೆ ಸಂಬಂಧಿಸಿದ ರೋಗಗಳಿಗೆ ಪರಿಹಾರ ನೀಡುತ್ತದೆ.
#ಆಘಾತ ಚಿಕಿತ್ಸೆಗೆ ಬ್ರಾಹ್ಮಿ ತುಂಬಾ ಸಹಕಾರಿ ಎಂದು ಹೇಳಲಾಗಿದೆ. ಅಧ್ಯಯನಗಳು ಹೇಳುವ ಪ್ರಕಾರ ಅಪಸ್ಮಾರದಂತಹ ಸಮಸ್ಯೆಗಳು ಇರುವವರಲ್ಲಿ ಬ್ರಾಹ್ಮಿಯು ಉರಿಯೂತ ನಿಯಂತ್ರಿಸುವುದು, ನರವ್ಯವಸ್ಥೆ ಸರಿಪಡಿಸಿ ಆಘಾತವನ್ನು ತಡೆಯುವುದು.ಅಪಸ್ಮಾರವು ಯಾವಾಗ ಬೇಕಾದರೂ ಬರಬಹುದಾಗಿರುವ ಕಾರಣದಿಂದಾಗಿ ಅದು ಪ್ರಾಣಹಾನಿ ಉಂಟು ಮಾಡುವ ಬದಲು ಅದಕ್ಕೆ ನೈಸರ್ಗಿಕದತ್ತವಾದ ಆಯುರ್ವೇದಿಕ್ ಗಿಡಮೂಲಿಕೆಯನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು.
#ಸರಿಯಾಗಿ ನಿದ್ದೆ ಬರದಿದ್ದರೆ…ತಲೆಯ ಚರ್ಮವನ್ನು ಬ್ರಾಹ್ಮಿ ತೈಲದಿಂದ ಮಸಾಜ್ ಮಾಡಿ ಕೊಂಚ ನಡೆದಾಡಿ ಒಂದು ಲೋಟ ಹಾಲು ಕುಡಿದು ಮಲಗಿದಾಗ ಗಾಢ ನಿದ್ದೆ ಆವರಿಸುವುದನ್ನು ಕಂಡುಕೊಳ್ಳಲಾಗಿದೆ. ಉತ್ತಮ ಆರೋಗ್ಯಕ್ಕೆ ನಿದ್ದೆ ತುಂಬಾ ಅಗತ್ಯ ನಿದ್ರಾರಾಹಿತ್ಯದ ಕಾರಣ ಮನೋವಿಕಲ್ಪ, ಖಿನ್ನತೆ, ಒತ್ತಡ ಮೊದಲಾದವುಗಳಿಂದ ರಕ್ಷಣೆ ಪಡೆದಂತಾಗುತ್ತದೆ. ಅಷ್ಟೇ ಅಲ್ಲ, ಕೆಲವು ಮಕ್ಕಳು ಅಗತ್ಯಕ್ಕಿಂತಲೂ ಹೆಚ್ಚು ಚುರುಕಾಗಿರುವುದು (hyperactive) ಅಪಾಯಕ್ಕೆ ಎದುರಾಗ ಬಹುದಾದುದರಿಂದ ಮಕ್ಕಳ ತಲೆಗೂ ಬ್ರಾಹ್ಮಿ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಸಹಜ ಸ್ಥಿತಿಗೆ ತರಲು ಸಾಧ್ಯ.
ಮಾಹಿತಿ ಚೆನ್ನಾಗಿದೆ…ಆದರೆ ಇದನ್ನು ಇಲಿಕಿವಿ ಎಂದು ಕರೆಯಲಾಗುವುದಿಲ್ಲ…ಇಲಿಕಿವಿ ಅಂದರೆ ಅದು ಬೇರೆ ಸಸ್ಯ…