ಮಕ್ಕಳಿಗೆ ವಾಂತಿಯಾಗುತಿದ್ದರೆ ಈ ಮನೆಮದ್ದುಗಳನ್ನು ಬಳಸಿ ನೋಡಿ!

ಮಕ್ಕಳಿಗೆ ಅರ್ಜೀಣ ಸಮಸ್ಯೆಯಾದಾಗ, ಪಿತ್ತವಾದಾಗ, ಪುಡ್ ಪಾಯಿಸನ್ ಆದಾಗ ವಾಂತಿಯಾಗುತ್ತದೆ. ಈ ವಾಂತಿ ನಿಲ್ಲಲು ಔಷಧಗಳನ್ನು ಕುಡಿಸುವ ಬದಲು ಈ ಮನೆಮದ್ದುಗಳನ್ನು ಬಳಸಿ ನೋಡಿ. ಇದು 1-10 ವರ್ಷದೊಳಗನ ಎಲ್ಲಾ ಮಕ್ಕಳಿಗೂ ವಾಂತಿ ನಿಲ್ಲಿಸಲು ಉಪಯೋಗಕಾರಿಯಾಗಿದೆ.
#ಏಲಕ್ಕಿ ಕೂಡ ವಾಂತಿ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಹಾಗಾಗಿ ಏಲಕ್ಕಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಬೆರೆಸಿ ಮಗುವಿಗೆ ತಿನ್ನಿಸಿ. ಇದು ತ್ವರಿತವಾಗಿ ಪರಿಹಾರ ನೀಡುತ್ತದೆ.
#ಪುದೀನ ರಸ:ಬೇಸಿಗೆಯಲ್ಲಿ ವಾಂತಿ, ತಲೆ ಸುತ್ತು ಹಾಗೂ ಆಯಾಸದಂತಹ ಸಮಸ್ಯೆಗೆ ಪುದೀನ ರಸ ಅತ್ಯದ್ಭುತವಾದ ಪರಿಹಾರ ನೀಡುವುದು. ತಜಾ ಪುದೀನ ಎಲೆಯು ತಂಪಾದ ಗುಣಗಳನ್ನು ಒಳಗೊಂಡಿರುತ್ತವೆ. ಇದು ಹೊಟ್ಟೆಯನ್ನು ಶಮನಗೊಳಿಸುವುದು. ಸ್ವಲ್ಪ ಪುದೀನ ರಸ, ಅರ್ಧ ಟೀ ಚಮಚ ನಿಂಬೆ ರಸ ಮತ್ತು ಒಂದು ಟೀ ಚಮಚ ಜೇನುತುಪ್ಪ ಸೇರಿಸಿ, ಮಿಶ್ರಗೊಳಿಸಿ.ಈ ಮಿಶ್ರಣವನ್ನು ಮಕ್ಕಳಿಗೆ ಸವಿಯಲು ನೀಡಿ. ಇದು ಮಗುವಿನ ಆರೋಗ್ಯ ವೃದ್ಧಿಗೆ ಹಾಗೂ ವಾಂತಿಯನ್ನು ಸುಲಭವಾಗಿ ನಿಯಂತ್ರಿಸಲು ಸಹಾಯ ಮಾಡುವುದು. ಮಕ್ಕಳು ಪುದೀನ ಎಲೆಯನ್ನು ಹಾಗೆಯೇ ಅಗೆಯಬಹುದು.
#ಅಕ್ಕಿಯ ನೀರು – ಅಕ್ಕಿಯ ನೀರಿನ (rice water) ಸಹಾಯದಿಂದ, ವಾಂತಿಯನ್ನು ಸುಲಭವಾಗಿ ತಡೆಗಟ್ಟಬಹುದು, ಮಗುವಿಗೆ ದಿನಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಅಕ್ಕಿ ನೀರನ್ನು ಸೇವಿಸಲು ನೀಡಿ, ಇದು ವಾಂತಿಗೆ ಕಾರಣವಾಗುವುದಿಲ್ಲ ಮತ್ತು ಜೀರ್ಣಕ್ರಿಯೆ ಪ್ರಕ್ರಿಯೆಯೂ ಉತ್ತಮವಾಗಿರುತ್ತದೆ.
#ಈರುಳ್ಳಿ ರಸ 1 ಟೀ ಚಮಚ, ಶುಂಠಿ ರಸ 1 ಟೀ ಚಮಚ, ಜೇನುತುಪ್ಪ ½ ಟೀ ಚಮಚ ಮೂರನ್ನು ಚೆನ್ನಾಗ ಮಿಕ್ಸ್ ಮಾಡಿ ತಿನ್ನಿಸಿ. ಜೊತೆಗೆ ಈರುಳ್ಳಿ ಕಟ್ ಮಾಡಿ ಬಟ್ಟೆಯಲ್ಲಿ ಸುತ್ತಿಕೊಂಡು ಮಗುವಿಗೆ ವಾಸನೆ ತೋರಿಸುವುದರಿಂದ ವಾಂತಿ ನಿಲ್ಲುತ್ತದೆ.