ಮಹಿಳೆಯರಿಗೆ ಪಿರಿಯಡ್ಸ್ ಬೇಗ ಆಗಲು ಇದನ್ನು ಸೇವಿಸಿ…!

ಮಹಿಳೆಯರು ತಿಂಗಳಿಗೆ ಋತುಮತಿಯಾಗುವುದು ಸಾಮಾನ್ಯ, ಆದರೆ ಒತ್ತಡ ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಯ ಕಾರಣದಿಂದ ಸರಿಯಾದ ಸಮಯಕ್ಕೆ ಪಿರಿಯಡ್ಸ್ ಆಗುವುದಿಲ್ಲ. ಅದಕ್ಕೆ ನಾವು ಮನೆಯಲ್ಲಿಯೇ ಕೆಲವೊಂದು ಆಹಾರಗಳನ್ನು ಸೇವನೆ ಮಾಡುವುದರಿಂದ ಬೇಗ ಪಿರಿಯಡ್ಸ್ ಆಗಬಹುದು. ಯಾವುವು ಆ ಆಹಾರಗಳು ಎಂಬುದು ಇಲ್ಲಿದೆ.
#ಖರ್ಜೂರಗಳು ದೇಹದಲ್ಲಿ ಉಷ್ಣ ಪ್ರಭಾವವನ್ನು ಹೆಚ್ಚು ಮಾಡುತ್ತವೆ ಎಂದು ಹೇಳುತ್ತಾರೆ. ಹಾಗಾಗಿ ನಿಯಮಿತ ಪ್ರಮಾಣದಲ್ಲಿ ಇವುಗಳನ್ನು ತಿನ್ನುವುದರಿಂದ ಮತ್ತು ಆಗಾಗ ನಿಮ್ಮ ಪದ್ಧತಿಯಲ್ಲಿಇವುಗಳನ್ನು ಸೇರಿಸಿಕೊಂಡು ಸೇವನೆ ಮಾಡುವುದರಿಂದ ಅವಧಿಗಿಂತ ಮುಂಚೆ ಮುಟ್ಟು ಸಂಭವಿಸಲಿದೆ. ಅನಿಯಮಿತ ಮುಟ್ಟಿನ ಅವಧಿ ಕಾಣುತ್ತಿರುವವರಿಗೆ ಇದು ಹೆಚ್ಚು ಸಹಕಾರಿ ಎಂದು ಹೇಳಬಹುದು.
#ಪಪ್ಪಾಯಿಯ ಸಾರಗಳು ಗರ್ಭಾಶಯದಲ್ಲಿ ಸಂಕೋಚನಕ್ಕೆ ಕಾರಣವಾಗುತ್ತವೆ. ಅಲ್ಲದೇ ಇದರಲ್ಲಿ ಕ್ಯಾರೋಟಿನ್ ಇದ್ದು ಇದು ಈಸ್ಟ್ರೋಜೆನ್ ಹಾರ್ಮೋನ್ ಅನ್ನು ಹೆಚ್ಚು ಮಾಡಿ ಋತುಚಕ್ರವನ್ನು ವೇಗಗೊಳಿಸುತ್ತದೆ.
#ಅನಾನಸ್ : ಇದು ಕೂಡ ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಸೇವಿಸಿದರೆ ಅವಧಿ ಬೇಗ ಬರುತ್ತದೆ. ಹಾಗಾಗಿ 10 ದಿನಗಳ ಕಾಲ ನಿರಂತರವಾಗಿ ಅನಾನಸ್ ಸೇವಿಸಿ.
#ಧನಿಯಾ ಬೀಜಗಳಲ್ಲಿ ನಿಮ್ಮಲ್ಲಿ ಮುಟ್ಟಿನ ಅವಧಿಯನ್ನು ಉತ್ತೇಜಿಸಲು ನೆರವಾಗುವಂತಹ ಗುಣ – ಲಕ್ಷಣಗಳು ಕಂಡು ಬರುತ್ತವೆ.ಮಹಿಳೆಯರು ತಮ್ಮ ಮುಟ್ಟಿನ ಅವಧಿಯನ್ನು ಬಹಳ ಬೇಗನೆ ಪೂರ್ಣಗೊಳಿಸಲು ಧನಿಯಾ ಕಾಳುಗಳನ್ನು ಚೆನ್ನಾಗಿ ಹುರಿದು ಚಹಾ ತಯಾರು ಮಾಡಿಕೊಂಡು ತಿಂಗಳ ಅವಧಿಯ ಮುಂಚೆ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.