ಮಕ್ಕಳ ಜಂತು ಹುಳುಗಳ ಸಮಸ್ಯೆಗೆ ಮನೆಮದ್ದು !

ಮಕ್ಕಳಲ್ಲಿ ಹೊಟ್ಟೆಯ ಹುಳುಗಳ ಸಮಸ್ಯೆ ಸಾಮಾನ್ಯವಾಗಿದ್ದು, ಇದರಿಂದ ಅವರು ಹೊಟ್ಟೆ ನೋವಿಂದ ನರಳುತ್ತಿರುತ್ತಾರೆ. ಜೊತೆಗೆ ವಾಂತಿ, ಬೇಧಿ ಸಮಸ್ಯೆಯೂ ನಿರಂತರವಾಗಿರುತ್ತದೆ. ಈ ಸಮಸ್ಯೆಗೆ ಸರಳ ಪರಿಹಾರಗಳು ಇಲ್ಲಿವೆ ನೋಡಿ!
ಶುದ್ಧವಾದ ಕುಡಿಯುವ ನೀರನ್ನೇ ಬಳಸಬೇಕು
#ಆಹಾರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ರಸ್ತೆ ಬದಿಯ ಗಾಡಿಗಳಲ್ಲಿ ಸ್ವಚ್ಛತೆಯಿಲ್ಲದ ಹೊಟೇಲುಗಳಲ್ಲಿ ಆಹಾರ ಸೇವನೆ ಮಾಡಲೇಬಾರದು. ಕಲುಷಿತ ಆಹಾರ ಸೇವನೆಯಿಂದ ಅತಿ ಬೇಧಿ, ಕಾಲೆರಾ, ಹೆಪಟೈಟಿಸ್ ಮುಂತಾದ ರೋಗಗಳು ಹರಡಬಲ್ಲದು.
#ಇನ್ನೂ ಕೊಬ್ಬರಿ ತುರಿಯನ್ನು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳಗಳ ನಿವಾರಣೆಯಾಗುತ್ತದೆ. ಈ ಜಂತು ಹುಳುಗಳು ಹೊಟ್ಟೆಯಲ್ಲಿ ಉದ್ಭವಗೊಳ್ಳಲು ಮುಖ್ಯ ಕಾರಣವೆಂದರೆ ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛವಾಗಿ ತೊಳೆಯದೆ ಇರುವುದು. ಅಥವಾ ಉಗುರು ಕಚ್ಚುವುದನ್ನು ಮಾಡುವುದು. ಈ ಎರಡು ಅಭ್ಯಾಸಗಳಿಂದ ದೂರವಿದ್ದರೆ ಜಂತು ಹುಳುಗಳಿಗೆ ಗುಡ್ ಬೈ ಹೇಳಬಹುದು. ಒಂದು ಚಮಚ ಜೇನುತುಪ್ಪದೊಂದಿಗೆ ಒಂದು ಚಮಚ ಬಿಲ್ವ ಪಾತ್ರೆಯ ರಸವನ್ನು ಸೇರಿಸಿ ಒಂದು ವಾರಗಳ ಕಾಲ ಸೇವನೆ ಮಾಡುವುದರಿಂದ ಜಂತು ಹುಳುಗಳಿಂದ ನಿವಾರಣೆಯನ್ನು ಪಡೆಯಬಹುದು
#ಹೊಟ್ಟೆಯ ಹುಳುವಿನ ಸಮಸ್ಯೆ, ಕಿರಿಕಿರಿಯನ್ನು ನಿವಾರಣೆ ಮಾಡಲು ಕರಿಮೆಣಸಿನ ಕಾಳನ್ನು ಬಳಕೆ ಮಾಡಬಹುದಾಗಿದೆ. ಆದರೆ ಮಕ್ಕಳಿಗೆ ಕಡಿಮೆ ಪ್ರಮಾಣದಲ್ಲಿ ನೀಡಿ.ಮಲಗುವ ವೇಳೆಗೆ ಅರ್ಧ ಚಮಚ ಜೇನುತುಪ್ಪದೊಂದಿಗೆ ಒಂದು ಚಿಟಿಕೆ ಕರಿಮೆಣಸಿನ ಪುಡಿಯನ್ನು ಮಕ್ಕಳಿಗೆ ನೀಡಿ. ಇದರಿಂದ ಜಂತು ಹುಳುವಿನ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
#ಪಪ್ಪಾಯಿ:ಪಪ್ಪಾಯಿಯ ಸೇವನೆಯು ಹೊಟ್ಟೆಯ ಹುಳುಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ ಏಕೆಂದರೆ ಇದು ಕರುಳಿನ ಗೋಡೆಗಳಿಗೆ ಅಂಟಿಕೊಂಡಿರುವ ಹುಳುಗಳನ್ನು ಹೊರಹಾಕುವ ಆಂಟೆಲ್ಮಿಂಟಿಕ್ ಮತ್ತು ಅಮೀಬಿಕ್ ವಿರೋಧಿ ಗುಣಗಳನ್ನು ಹೊಂದಿದೆ. ಇದರೊಂದಿಗೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಹಣ್ಣು. ಪಪ್ಪಾಯಿ ಮತ್ತು ತೆಂಗಿನ ಹಾಲನ್ನು ಒಟ್ಟಿಗೆ ಸೇರಿಸಿ, ತಿನ್ನಿರಿ. ಇವುಗಳೆರಡೂ ಬಹಳ ಪರಿಣಾಮಕಾರಿ. ವಾರದಲ್ಲಿ ಎರಡರಿಂದ ಮೂರು ದಿನ ಇದನ್ನು ಸೇವಿಸಿ.
#ಅರಿಶಿನ:ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದ್ದು, ಇದು ಹೊಟ್ಟೆಯ ಹುಳುಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಕರ್ಕ್ಯುಮಿನ್ ಆಂಥೆಲ್ಮಿಂಟಿಕ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವುದರಿಂದ ಇದು, ಕರುಳಿನಿಂದ ಹುಳುಗಳು ಮತ್ತು ಇತರ ಅನಗತ್ಯ ವಸ್ತುಗಳನ್ನು ಹೊರಹಾಕುತ್ತದೆ. ಇದಕ್ಕಾಗಿ ಮಕ್ಕಳಿಗೆ ಅರಿಶಿನ ಹಾಲು ನೀಡಿ. ಹೊಟ್ಟೆಯ ಹುಳುಗಳಿಗೆ ಇದೊಂದು ಉತ್ತಮ ಮನೆಮದ್ದು. ಇದನ್ನು ಪ್ರತಿದಿನ ಸೇವಿಸಬೇಕು. ಈ ಚಿಕಿತ್ಸೆಯು ಮಕ್ಕಳು ಮತ್ತು ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ.